Tuesday, April 15, 2025

Latest Posts

Siddheshwar ಸ್ವಾಮೀಜಿಗೆ ಗಾಯ :ಆಸ್ಪತ್ರೆ ಗೆ ದಾಖಲಾಗಿದ್ದಾರೆ.

- Advertisement -

ವಿಜಯಪುರ : ವಿಜಯಪುರ ಜ್ಞಾನಯೋಗಾಶ್ರಮದ (jnanayogashrama) ಸಿದ್ದೇಶ್ವರ (siddeshwara swamiji) ಸ್ವಾಮೀಜಿ ಅವರು ತಾಲ್ಲೂಕಿನ ಬಸವನಾಳಗಡ್ಡೆಯಲ್ಲಿರುವ ಮಗದಮ್ ತೋಟದ ಮನೆಯ ಸ್ನಾನ ಗೃಹದಲ್ಲಿ ಸೋಮವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ರಾಜ್ಯ ಮಹಾರಾಷ್ಟ್ರದ ಕನ್ಹೇರಿ ಮಠದ (maharashtra kaneri math) ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಕೇರೂರ ಗ್ರಾಮದ `ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ’ ಆಯೋಜಿಸಿದ ಪ್ರವಚನ ಕಾರ್ಯಕ್ರಮದಲ್ಲಿ ಬೆಳ್ಳಿಗೆ ಪಾಲ್ಗೊಂಡಿದ್ದರು.ಶೇಡವಾಳದ ವಿದ್ಯಾನಂದ ಮುನಿರಾಜ ಕನ್ನಡ ಪ್ರಥಾಮಿಕ ಶಾಲೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ವಿದ್ಯಾನಂದ ಮುನಿರಾಜರ ಪ್ರತಿಮೆ ಅನಾವರಣದಲ್ಲಿ ಭಾಗವಯಿಸಿದ್ದರು.ನಂತರ ಪ್ರವಚನದ ಮುಖ್ಯ ವೇದಿಕೆ ಪರಿಶೀಲಿಸಿದ್ದರು.  

ಅವರಿಗೆ ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿತವಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಇದರ ಕಾರಣದಿಂದ ಕೇರೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರವಚ ಕಾರ್ಯಕ್ರಮ ಮುಂದೂಡಲಾಗಿದೆ.

- Advertisement -

Latest Posts

Don't Miss