ನವದೆಹಲಿ : ಮುಂಬೈನಲ್ಲಿ ಬುಧವಾರ ಮಾಧ್ಯಮಗೋಷ್ಟಿಯ ವೇಳೆ ಮಮತಾ ಬ್ಯಾನರ್ಜಿಯವರು ರಾಷ್ಟ್ರಗೀತೆಗೆ ಅಗೌರವ ತೋರಿರುವ ಪ್ರಕರಣ ಕೇಳಿಬಂದಿದೆ. ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆ ಚರ್ಚೆ ಮಾಡಿದರು.
ಬಳಿಕ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು. ಆದರೆ ಮಧ್ಯದಲ್ಲಿ ನಿಲ್ಲಿಸಿ “ಜೈ ಮಹಾರಾಷ್ಟ್ರ” ಎಂದು ಹೇಳಿ ಮುಗಿಸಿದರು ಇದು ರಾಷ್ಟ್ರಗೀತೆ ಮತ್ತು ದೇಶವನ್ನು ಅವಮಾನಿಸಿದ್ದಾರೆ. ಮುಂಬೈ ಬಿಜೆಪಿಯ ನಾಯಕರೊಬ್ಬರು ಬ್ಯಾನರ್ಜಿ ವಿರುದ್ಧ “ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವವನ್ನು ತೋರಿಸಿದ್ದಾರೆ” ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ ಬಿಜೆಪಿ ಪಶ್ಚಿಮ ಬಂಗಾಳದ ಅಧ್ಯಕ್ಷ ಡಾ.ಸುಕಾಂತ ಮಜುಂದಾರ್, “ಬಂಗಾಳ ಸಿಎಂ ಮಮತಾ ಅವರು ಸಂವಿಧಾನಿಕ ಹುದ್ದೆಯಲ್ಲಿ ಕುಳಿತಿದ್ದು, ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಅವರಿಗೆ ಸರಿಯಾದ ರಾಷ್ಟ್ರಗೀತೆ ಶಿಷ್ಟಾಚಾರ ತಿಳಿದಿಲ್ಲವೇ ಅಥವಾ ತಿಳಿದೂ ಅವಮಾನಿಸುತ್ತಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.