Sunday, June 1, 2025

Latest Posts

ಕೋಲ್ಕತ್ತಾ, ಲಕ್ನೊ ಗೆಲುವಿಗಾಗಿ ಮಹಾಫೈಟ್

- Advertisement -

ಮುಂಬೈ:15ನೇ ಆವೃತ್ತಿಯ ಐಪಿಎಲ್ ಲೀಗ್ ಮುಗಿಯುತ್ತಾ ಬಂದಿವೆ. ಪ್ಲೇಆಫ್ ಗೆ ಯಾರು ಪ್ರವೇಶ ಪಡೆಯುತ್ತಾರೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ. ಪ್ರತಿ ಪಂದ್ಯದ ಫಲಿತಾಂಶ ಒಂದೊಂದು ತಿರುವು ಕೊಡುತ್ತಿದೆ.

ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುವ ಕದನ ಕುತೂಹಲ ಕೆರೆಳಿಸಿದೆ.

ಇಂದಿನ 66ನೇ ಪಂದ್ಯದಲ್ಲಿ ಕೋಲ್ಕತ್ತಾ ಹಾಗೂ ಲಕ್ನೊ ತಂಡ ಮುಖಾಮುಖಿಯಾಗುತ್ತಿದೆ.

ಪ್ಲೇ ಆಫ್ ಸನಿಹದಲ್ಲಿರುವ ಲಕ್ನೊ ತಂಡಕ್ಕೆ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಲಕ್ನೊ 13 ಪಂದ್ಯಗಳಿಂದ 8ರಲ್ಲಿ ಗೆದ್ದು 5ರಲ್ಲಿ ಸೋತು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದೆ.

ಕೋಲ್ಕತ್ತಾ ತಂಡ ಈ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಕೆಕೆಆರ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಆಗಿದೆ.ಕೆಕೆಆರ್ 13 ಪಂದ್ಯಗಳಿಂದ 6ರಲ್ಲಿ ಗೆದ್ದು 7ರಲ್ಲಿ ಸೋತು  12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಬಲಿಷ್ಠ ಪ್ಲೇಯಿಂಗ್ ಇಲವೆನ್ ಆಯ್ಕೆ ಮೇಲೆ ಎರಡು ತಂಡಗಳ ಗೆಲುವು ನಿಂತಿದೆ.

ಕೋಲ್ಕತ್ತಾ ತಂಡಕ್ಕೆ ಬ್ಯಾಟಿಂಗ್ ಸಮಸ್ಯೆ ದೊಡ್ಡ ತಲೆ ನೋವಾಗಿದೆ. ಆರಂಭಿಕ ಬ್ಯಾಟರ್ ಅಜಿಂಕ್ಯ ರಹಾನೆ ಗಾಯಗೊಂಡಿದ್ದು ಇವರ ಬದಲು ಆ್ಯರಾನ್ ಫಿಂಚ್ ಆಡಬಹುದಾಗಿದೆ. ಶೆಲ್ಡನ್ ಜಾಕ್ಸನ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಓಪನರ್ಗಳಾಗಿ ಕಳಿಸುವ ಅವಕಾಶವಿದೆ.

ಇನ್ನು ಲಕ್ನೊ ತಂಡದಲ್ಲಿ ಆರಂಭಿಕರಾದ ಕೆ.ಎಲ್.ರಾಹುಲ್ ಹಾಗೂ ಕ್ವಿಂಟಾನ್ ಡಿಕಾಕ್ ಹೇಳಿಕೊಳ್ಳವಂತಹ ಪ್ರದರ್ಶನ ನೀಡಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡುವ ಬ್ಯಾಟರ್ ಬೇಕಾಗಿದ್ದು ಕನ್ನಡಿಗ ಮನೀಶ್ ಪಾಂಡೆಗೆ ಮತ್ತೆ ಅವಕಾಶ ಕೊಡುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗ ಚೆನ್ನಾಗಿದ್ದು ಬದಲಾವಣೆ ಮಾಡುವುದಿಲ್ಲ.

- Advertisement -

Latest Posts

Don't Miss