Sunday, December 22, 2024

Latest Posts

‘ನನ್ನನ್ನು ಟ್ರೋಲ್ ಮಾಡುವರಿಗಾಗಿ ಮತ್ತಷ್ಟು ಫೋಟೋಸ್’…

- Advertisement -

ಮೊನ್ನೆ ಮೊನ್ನೆ ತಾನೇ ಬಿಕಿನಿಯಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿ, ಅಮಿರ್ ಖಾನ್ ಪುತ್ರಿ ಇರಾ ಎಲ್ಲೆಡೆ ಟ್ರೋಲ್ ಆಗಿದ್ದರು. ಮಗಳೊಂದಿಗೆ ಅಪ್ಪನನ್ನು ಕೂಡಾ ಟ್ರೋಲ್ ಮಾಡಲಾಗಿತ್ತು. ಶ್ರೀಮಂತರ ಮಕ್ಕಳಿಗೆ ಬಿಕಿನಿ, ಬಡವರಿಗೆ, ಮಧ್ಯಮ ವರ್ಗದವರಿಗೆ ಬುರ್ಖಾ, ಹಿಜಾಬ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೇ, ಕೆಲ ವರ್ಷಗಳ ಹಿಂದೆ ಅಮೀರ್ ಖಾನ್ ಮತ್ತು ಎರಡನೇಯ ಮಾಜಿ ಪತ್ನಿ ಕಿರಣ್, ಭಾರತದಲ್ಲಿ ಹೆದರಿಕೆಯ ವಾತಾವರಣವಿದೆ. ನಾವು ಬೇರೆ ದೇಶಕ್ಕೆ ಹೋಗುವ ಚಿಂತನೆ ಮಾಡುತ್ತಿದ್ದೆವೆ. ನಮಗೆ ನಮ್ಮ ಮಗಳ ಭಯವಿದೆ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಷಯವಾಗಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹೇಗಿದ್ದಾರೆ ಮತ್ತು ಭಾರತದಲ್ಲಿ ಇರಾ ಹೇಗೆ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾಳೆ ಅನ್ನೋ ಬಗ್ಗೆ ಟ್ರೋಲ್ ಮಾಡಲಾಗಿತ್ತು.

ಸದ್ಯ ಸಾಕಷ್ಟು ಟ್ರೋಲ್ ಆಗಿರುವ ಇರಾ, ಮತ್ತಷ್ಟು ಉದ್ಧಟತನ ತೋರಿದ್ದಾರೆ. ನನ್ನನ್ನು ಯಾರು ಟ್ರೋಲ್ ಮತ್ತು ಹೇಟ್ ಮಾಡುತ್ತಿದ್ದೀರೋ, ಅವರಿಗಾಗಿ ಇಲ್ಲಿದೆ ಇನ್ನಷ್ಟು ಫೋಟೋಸ್ ಎಂದು ಮತ್ತೆ ಬಿಕಿನಿ ಬರ್ತ್‌ಡೇ ಸೆಲೆಬ್ರೇಷನ್ ಫೋಟೋಸನ್ನು, ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ಫೋಟೋದಲ್ಲಿ ಅಮೀರ್ ಖಾನ್ ಜೊತೆ ದಂಗಲ್ ಸಿನಿಮಾದಲ್ಲಿ ನಟಿಸಿರುವ, ಮತ್ತು ಅಮೀರ್‌ ಖಾನ್‌ ಮೂರನೇ ಪ್ರೇಯಸಿ ಎಂದು ಸುದ್ದಿ ಆಗಿರುವ ಫಾತೀಮಾ ಸನಾ ಕೂಡ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾಳೆ.

ಈಗಿನ ಫೋಟೋಗಳಿಗೂ ಕೂಡ ಹತ್‌ತಾರು ಕಾಮೆಂಟ್ಸ್ ಬಂದಿದೆ. ಕೆಲವರು ಇರಾಗೆ ಸಪೋರ್ಟ್ ಮಾಡಿ ಮಾತನಾಡಿದ್ದಾರೆ. ನೀನು ಹಲವು ವರ್ಷ ಡಿಪ್ರೆಶನ್‌ನಲ್ಲಿದ್ದೆ. ಈಗ ನೀನು ಎಂಜಾಯ್ ಮಾಡುವ ಸಮಯ. ಟ್ರೋಲಿಗರು ಕೆಲಸವಿಲ್ಲಾ. ಅವರು ಮನಸ್ಸಿಗೆ ಬಂದಿದ್ದನ್ನ ಟ್ರೋಲ್ ಮಾಡ್ತಾರೆ. ನಾನು ನಿನಗೆ ಸಪೋರ್ಟ್ ಮಾಡ್ತೀನಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇರಾ ಉದ್ಧಟತನಕ್ಕೆ ಬೈದಿದ್ದಾರೆ.

- Advertisement -

Latest Posts

Don't Miss