Bollywood News: ಬಾಲಿವುಡ್‌ನಲ್ಲಿ ಈವರೆಗೆ ಹೆಸರು ಮಾಡಿರುವ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಆಲಿಯಾ ಭಟ್ ಇಂಥ ನಟಿಯರಿಗೆ ಸರಿಯಾಗಿ ಸಿನಿಮಾ ಸಿಕ್ತಿಲ್ಲ. ಅಂಥದ್ರಲ್ಲಿ, ದಿವಂಗತ ನಟಿ ಶ್ರೀದೇವಿಯ ಹಿರಿಯ ಪುತ್ರ ಜಾಹ್ನವಿ ಕಪೂರ್‌ಗೆ ಮೂರು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಕೇಳಿ ಬಂದಿದೆ.
ಹೌದು.. ಬಾಲಿವುಡ್‌ನಲ್ಲಿ ಮಿಂಚಬೇಕು ಅನ್ನೋ ಆಸೆಯಿಂದ ಕೆಲ ವರ್ಷಗಳಲ್ಲಿ, ಒಂದೆರಡು ಸಿನಿಮಾದಲ್ಲಿ ಜಾಹ್ನವಿ ಬಣ್ಣ ಹಚ್ಚಿದ್ದರು. ಆದರೆ ಆ ಸಿನಿಮಾಗಳು ಫ್ಲಾಪ್ ಆಗಿದೆ. ಇದೀಗ ಜಾಹ್ನವಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಸೌತ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಜಾಹ್ನವಿ ಜೂನಿಯರ್ ಎನ್‌ಟಿಆರ್ ಜೊತೆ ದೇವರ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಕೇಳಿ ಬಂದಿದೆ.
ಇದಲ್ಲದೇ, ಇನ್ನು 3 ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಜಾಹ್ನವಿ ನಟಿಸಲಿದ್ದಾರೆ. ತೆಲುಗು ನಟ ರಾಮಚರಣ್, ತಮಿಳು ನಟ ಸೂರ್ಯ ಮತ್ತು ಬಾಲಿವುಡ್ ನಟ ವರುಣ್ ಧವನ್ ಜೊತೆ ಜಾಹ್ನವಿ ಸಿನಿಮಾ ಮಾಡಲಿದ್ದಾರೆ. ಈ ಮೂರು ಸಿನಿಮಾಗಳೂ ಪ್ಯಾನ್ ಇಂಡಿಯನ್ ಸಿನಿಮಾ ಎಂದು ಹೇಳಲಾಗಿದೆ.
ನಟಿ ಶ್ರೀದೇವಿಗೆ, ಜಾಹ್ನವಿ ಕೂಡ ತನ್ನಂತೆ ಪ್ರಸಿದ್ಧ ಬಾಲಿವುಡ್ ನಟಿಯಾಗಬೇಕು ಎಂಬ ಆಸೆ ಇತ್ತು. ಹಾಗಾಗಿ ಆಕೆ ಮಗಳನ್ನು ಲಾಂಚ್ ಮಾಡಲು ಹಲವು ಪ್ರಯತ್ನ ಪಟ್ಟಿದ್ದರು. ಆದರೆ ಶ್ರೀದೇವಿ ಮರಣದ ಬಳಿಕ, ಜಾಹ್ನವಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆದರೆ ಲಕ್ ಖುಲಾಯಿಸಲಿಲ್ಲ. ಈಗಲಾದರೂ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ಜಾಹ್ನವಿಯ ಲಕ್ ಖುಲಾಯಿಸುತ್ತಾರೆ. ತಾಯಿಯಂತೆ ಮಗಳು, ದಕ್ಷಿಣ ಭಾರತದ ಸಿನಿಮಾದಿಂದ ಅದೃಷ್ಟ ಗಿಟ್ಟಿಸಿಕೊಳ್ತಾರಾ ಅಂತಾ ಕಾದು ನೋಡಬೇಕಿದೆ.
ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?
ಬಾಲಿವುಡ್ ನಟಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು: 12 ವರ್ಷದ ದಾಂಪತ್ಯ ಜೀವನ ಅಂತ್ಯ
ಒಂದು ಫೋಟೋ ಅಪ್ಲೋಡ್ ಮಾಡಿ ಡಿವೋರ್ಸ್ ವದಂತಿಗೆ ಉತ್ತರಿಸಿದ ಐಶ್ವರ್ಯಾ ರೈ