ಜಾರ್ಖಂಡ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ ಸಚಿವ ಜಗರ್ನಾಥ್ ಮಹತೋ, ಗುರುವಾರ ಬೆಳಿಗ್ಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಮುನ್ನ ಅವ್ರಿಗೆ ಕೊರೊನಾ ತಗುಲಿತ್ತು. ಹಾಗಾಗಿ ಶ್ವಾಸಕೋಶದ ಕಸಿ ಮಾಡಲಾಗಿತ್ತು. ಇದಾದ ಬಳಿ ಅವರ ಆರೋಗ್ಯ ಪದೇ ಪದೇ ಹದಗೆಡಲಾರಂಭಿಸಿತ್ತು. ಕೆಲ ದಿನಗಳ ಹಿಂದೆ ಅಧಿವೇಶನ ನಡೆಯುವಾಗ, ಹಠಾತ್ತನೇ ಸಚಿವರ ಆರೋಗ್ಯ ಹಾಳಾಗಿತ್ತು. ಈ ವೇಳೆ ಅವರಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರನ್ನ ಚೈನ್ನೈನ ಅಪೋಲೋ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಮಾರ್ಚ್ 14ಕ್ಕೆ ಸಚಿವರು ಆಸ್ಪತ್ರೆಗೆ ದಾಖಲಾಗಿದ್ದು, ಅಂದಿನಿಂದ ಚಿಕಿತ್ಸೆ ನಡೆಯುತ್ತಿತ್ತು. ಆದರೆ ನಿನ್ನೆ ರಾತ್ರಿ ಅವರು ಸರಿಯಾಗಿ ಚಿಕಿತ್ಸೆ ಸ್ಪಂದಿಸುತ್ತಿರಲಿಲ್ಲ. ಚಿಕಿತ್ಸೆ ಫಲಿಸದೇ, ಇಂದು ಬೆಳಿಗ್ಗೆ ಸಚಿವರು ನಿಧನರಾಗಿದ್ದಾರೆ. ಇವರು ಜೆಎಂಎಂ ಪಕ್ಷದ ಗಿರಿದಿಹ್‌ನ ಡುಮ್ರಿ ಕ್ಷೇತ್ರದ ಹಿರಿಯ ನಾಯಕರಾಗಿದ್ದರು.
ಮಂಡ್ಯ ಟಿಕೇಟ್ ಪೈಪೋಟಿ ಅಂತ್ಯ, ರವಿಕುಮಾರ್‌ಗೆ ಚಾನ್ಸ್ ಕೊಟ್ಟ ಕಾಂಗ್ರೆಸ್, ಮದ್ದೂರಿಗೆ ಯಾರು..?

