Saturday, December 14, 2024

Latest Posts

ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸುವುದೇ ಸೂಕ್ತ- ಜೆಡಿಎಸ್ ಎಂಎಲ್ ಸಿ

- Advertisement -

ಬೆಳಗಾವಿ: ಮೈತ್ರಿಯಲ್ಲಿ ಉಂಟಾಗಿರೋ ಅಲ್ಲೋಲ ಕಲ್ಲೋಲದ ಬಗ್ಗೆ ತಕ್ಷಣವೇ ಯಾವುದೇ ನಿರ್ಧಾರಕ್ಕೆ ಬರಲು ಜೆಡಿಎಸ್ ಒದ್ದಾಡುತ್ತಿದ್ರೆ ಮತ್ತೊಂದೆಡೆ ಮೈತ್ರಿಗೆ ಕೈಕೊಟ್ಟಿರೋ ಶಾಸಕರೆಲ್ಲರ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು ಅಂತ ಸ್ವತಃ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕಾಂಗ್ರೆಸ್-ಜೆಡಿಎಸ್ ಶಾಸಕರು ಸಾಮೂಹಿಕ ರಾಜೀನಾಮೆ ನೀಡಿರೋದರ ಹಿಂದೆ ಹಲವರ ಕೈವಾಡವಿದೆ. ರಾಜ್ಯ ರಾಜಕೀ ಕೆಸರೆರಚಾಟದಿಂದ ಜನರು ಬೇಸತ್ತುಹೋಗಿದ್ದಾರೆ. ಹೀಗಾಗಿ ಮೈತ್ರಿಗೆ ಕೈಕೊಟ್ಟಿರೋ ಶಾಸಕರೆಲ್ಲರ ರಾಜೀನಾಮೆಯನ್ನು ಅಂಗೀಕರಿಸಬೇಕು. ಈಗಾಗಲೇ ರಾಜೀನಾಮೆ ನೀಡಿರೋ ಅವರೆಲ್ಲರ ಮನವೊಲಿಕೆ ಮಾಡೋದು ಸೂಕ್ತವಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋದು ಉತ್ತಮ ಅಂತ ಬಸವರಾಜ ಹೊರಟ್ಟಿ ಇದೇ ವೇಳೆ ಹೇಳಿದ್ರು.

ಕೆ.ಆರ್ ಪೇಟೆಯಿಂದ ಕಣಕ್ಕಿಳೀತಾರಾ ನಿಖಿಲ್..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=A4CnaU3pEBM
- Advertisement -

Latest Posts

Don't Miss