Ramanagara News: ರಾಮನಗರ: ತಾಲೂಕಿನ ಅವ್ವೇರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಒಟ್ಟು 12 ಸ್ಥಾನಗಳಲ್ಲಿ 11 ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಒಂದೇ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಈ ಊರು ಜೆಡಿಎಸ್ ಮಾಜಿ ಶಾಸಕ, ಸದ್ಯ ಕಾಂಗ್ರೆಸ್‌ನಲ್ಲಿರುವ ಕೆ.ರಾಜು ಕ್ಷೇತ್ರವಾಗಿದ್ದರೂ ಕೂಡ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಸಂಘದ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಚಿಕ್ಕಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಸ್ಥಾನದಿಂದ ಪ್ರಶಾಂತ್ ಕುಮಾರ್ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನದಿಂದ ಮೀನಾ, ಪವಿತ್ರಮ್ಮ ಆಯ್ಕೆಯಾಗಿದ್ದಾರೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಬ್ಬಕೆರೆ ಶಿವಲಿಂಗಪ್ಪ, ಹೆಚ್.ವಿ. ಶ್ರೀನಿವಾಸ್ ಮೂರ್ತಿ, ಎ.ಎಸ್.ನಂದೀಶ್ ಗೌಡ, ಸುಕೃತ್, ಕೃಷ್ಣ, ಬಿಸಿಎಂ ಎ ಸ್ಥಾನದಿಂದ ಮಂಟೇದಯ್ಯ ಹಾಗೂ ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ಕಾಳನಾಯ್ಕ್ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿದ್ದು, ಕಾಂಗ್ರೆಸ್‌ನಿಂದ ರೇಣುಕಾಪ್ರಸಾದ್ ಆಯ್ಕೆಯಾಗಿದ್ದಾರೆ.
ಚುನಾವಣಾ ದಿನಾಂಗ ನಿಗದಿಯಾದಾಗಿಂತ, ಪ್ರಚಾರದ ಭರಾಟೆ ಜೋರಾಗಿ ನಡೆದಿತ್ತು. ಮತದಾರರನ್ನು ಸೆಳೆಯಲು ಎರಡೂ ಪಕ್ಷದವರು ನಾನಾ ಕಸರತ್ತು ಮಾಡಿದ್ದರು. ಆದರೆ ಕೊನೆಗೆ ಜೆಡಿಎಸ್ ಗೆಲುವು ಸಾಧಿಸುವುದರ ಮೂಲಕ, 25 ವರ್ಷಗಳಿಂದ ಇದ್ದ ಅಧಿಪತ್ಯ ಕಾಪಾಡಿಕೊಂಡಿದೆ. ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ, ಜೆಡಿಎಸ್ ಕಾರ್ಯಕರ್ತರು ಗೆದ್ದವರಿಗೆ ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು.
Sankalpa Shetter: ಬಕೆಟ್ ಹಿಡಿದು ಟಿಕೆಟ್ ಗಿಟ್ಟಿಸಿಕೊಂಡವರು ಯಾರು ಅನ್ನೋದು ಗೊತ್ತಿದೆ..!
H.Vishwanath: ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಯಾಕೆ ಹೋಗಬಾರದು.!?
Kuruba; ಕುರುಬ ಸಮುದಾಯದ ಸಭೆ ನಡೆಸಿ ಒಟ್ಟುಗೂಡಿಸುವ ಕೆಲಸವಾಗಲಿದೆ. ಹೆಚ್.ಎಮ್ ರೇವಣ್ಣ