ಬೆಂಗಳೂರು:ಕೆಲಸ ಮಾಡುತ್ತಿರವ ಕಂಪನಿಯನ್ನು ಬಿಟ್ಟು ಹೊಸ ಕಂಪನಿ ಸ್ಥಾಪನೆ ಮಾಡಿದ್ದು ತನ್ನ ಕಂಪನಿಯ ಉದ್ಯೂಗಿಗಳು ಹೊಸ ಕಂಪನಿಗೆ ಕೆಲಸಕ್ಕೆ ಸೇರಿಸಿಕೊಂಡಿರುವ ಕಾರಣ ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನಯ್ ಕುಮಾರ್ ಜಿನೆಟ್ ಕಂಪನಿಯಲ್ಲಿ ಕೆಲಸ ಮಾಡುತಿದ್ದು ಆದರೆ ಫಣೀಂದ್ರ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದ. ಜಿ-ನೆಟ್ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್ ಕಂಪನಿ ನಷ್ಟ ಸಿಲುಕಿದ್ದರಿಂದ ಅರುಣ್ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು.
ಆರೋಪಿ ಶಬರೀಶ್ ಅಲಿಯಾಸ್ ಫಿಲೆಕ್ಸ್ ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸತತ ಆರು ತಿಂಗಳ ಸಂಚು ರೂಪಿಸಿ ಸಿಎಇಒ ವಿನಯ್ ಕುಮಾರ್ ಮತ್ತು ಫಣಿಂದ್ರನನ್ನು ಕೊಲೆ ಮಾಡಿದ್ದಾರೆ
ಆರು ತಿಂಗಳುಗಳ ಕಾಲ ಸಂಚು ರೂಪಿಸಿದರೂ ಕೊಲೆ ಮಾಡಲು ದೈರ್ಯ ಬಂದಿರಲಿಲ್ಲ ದೈರ್ಯ ಬರಲಿ ಎನ್ನುವ ಕಾರಣಕ್ಕೆ ಸಿಲ್ಕ ಬೋರ್ಡ ಏರಿಯಾದಲ್ಲಿ ಪಾರ್ಟಿ ಮಾಡಿ ಅಲ್ಲಿಂದ ಬ್ಯಾಗ್ ನಲ್ಲಿ ಚಾಕು ತೆಗೆದುಕೊಂಡು ಹೋಗಿದ್ದಾರೆ. ನಂತರ ಫಣೀಂದ್ರ ಅವರೆ ಅವರನ್ನ ಒಳಗಡೆ ಕರೆದಿದ್ದಾರೆ ಕೆಲಸ ಕೇಳುವ ನೆಪ ಮಾಡಿಕೊಂಡು ಕೊಲೆ ಮಾಡಿದ್ದಾರೆ.ಅಮೃತಹಳ್ಳಿ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.