ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಜನುಮದಿನಕ್ಕೆ ಸಿನಿತಾರೆಯರು, ಅಭಿಮಾನಿಗಳು ಶುಭಾಷಯ ಕೋರುತ್ತಿದ್ದಾರೆ. ತಾರಕ್ ಬರ್ತ್ ಡೇ ಸ್ಪೆಷಲ್ ಆಗಿ 30ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಅಂತೆಯೇ ಪ್ರಶಾಂತ್ ನೀಲ್ ನಿರ್ದೇಶಿಸ್ತಿರುವ ಸಿನಿಮಾದ ಬಗ್ಗೆಯೂ ಅಪ್ ಡೇಟ್ ಹೊರಬಿದ್ದಿದೆ.
ತ್ರಿಬಲ್ ಆರ್ ಪಾತ್ರಧಾರ ಜೂನಿಯರ್ ಎನ್ ಟಿಆರ್ ಹಾಗೂ ಕೆಜಿಎಫ್ ಸೂತ್ರಧಾರ ಪ್ರಶಾಂತ್ ನೀಲ್ ಕಾಂಬೋದ ಸಿನಿಮಾ ಮೇಲೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಎನ್ ಟಿಆರ್ 31 ಎಂದು ತಾತಾಲಿಕವಾಗಿ ಟೈಟಲ್ ಇಡಲಾಗಿದೆ. ಈ ಚಿತ್ರ ಯಾವಾಗ ಶುರುವಾಗುತ್ತೇ? ಏನ್ ಕಥೆ ಅನ್ನೋದು ಇಲ್ಲಿವರೆಗೆ ರಿವೀಲ್ ಆಗಿರಲಿಲ್ಲ. ಇದೀಗ ಸಿಂಹಾದ್ರಿ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ರಿಲೀಸ್ ಮಾಡಿ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಚಿತ್ರತಂಡ ಮಾಹಿತಿ ಕೊಟ್ಟಿದೆ.
ನೀಲ್-ತಾರಕ್ 2024ರ ಮಾರ್ಚ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಪ್ರಭಾಸ್ ನಟನೆಯ ಸಲಾರ್ ನಿರ್ದೇಶನದಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್ ಆ ಚಿತ್ರದ ಬಳಿಕ ಎನ್ ಟಿಆರ್ 31ನೇ ಚಿತ್ರ ಶುರುವಾಗಲಿದೆ. ತಾರಕ್ ಕೊರಟಲಾ ಶಿವ ನಿರ್ದೇಶನದಲ್ಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪೇನಾ, ಪುಪ್ಪ, ವಾಲ್ಟೇರ್ ವೀರಯ್ಯ, ಡಿಯರ್ ಕಾಂಬ್ರೇಡ್ ಸಿನಿಮಾಗಳನ್ನು ನಿರ್ಮಿಸಿರುವ ಮೈತ್ರಿ ಮೂವೀ ಮೇಕರ್ಸ್ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಚಿತ್ರಕ್ಕೆ ಬಂಡವಾಳ ಹೂಡಿದೆ.
ಸೈಂಧವ್ ಸಿನಿಮಾ ಮೂಲಕ ಟಾಲಿವುಡ್ ಗೆ ನವಾಜುದ್ದೀನ್ ಸಿದ್ದಿಕಿ ಎಂಟ್ರಿ..
ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ…