Saturday, June 21, 2025

Latest Posts

ಇನ್ನೂ ಏನು ಉಳಿದಿದೆ ಡಿಫ್ರೆಂಟಾಗಿ ಕೊಡೋಕೆ ರಿಯಲ್‌ಸ್ಟಾರ್..?

- Advertisement -

ಅದು ಉಪ್ಪಿ-೨ ಸಿನಿಮಾದ ಮುಹೂರ್ತ, ಚಿತ್ರದ ಇನ್ವಿಟೇಷನ್ ಕಾರ್ಡ್ ತೆರೆದು ನೋಡಿದವರು ಶಾಕ್ ಕಾದಿತ್ತು, ಅಲ್ಲಿದ್ದಿದ್ದು ಕನ್ನಡಿ. ಅಂದ್ರೆ ಇಲ್ಲಿ ನೀನು ಅಂದ್ರೆ ಯಾರು ಅಂತ ಹೇಳೋಕೆ ಹೊರಟಿದ್ರು ಉಪ್ಪಿ. ಉಪ್ಪಿ-೨ಗೆ ಹೀರೋನನ್ನೇ ಉಲ್ಟಾ ಮಾಡಿದ್ದ ಉಪೇಂದ್ರ ಚಿತ್ರದ ಉಪ್ಪಿ-೨ ಮುಹೂರ್ತದಲ್ಲಿ ೫ ಬಗೆಯ ಉಪ್ಪಿಟ್ಟುಗಳನ್ನು ಮಾಡಿಸಿದ್ದು ಡಿಫ್ರೆಂಟ್ ಆಗಿತ್ತು. ಇದೆಲ್ಲಾ ಒನ್ ಅಂಡ್ ಓನ್ಲೀ ಉಪೇಂದ್ರ ಮಾತ್ರ ಮಾಡೋಕೆ ಸಾಧ್ಯ. ಎಲ್ಲಾ ಡಿಫ್ರೆಂಟ್‌ಗಳನ್ನೂ ತನ್ನ ಮಡಿಲಿಗೆ ಹಾಕ್ಕೊಂಡಿರೋ ಉಪೇಂದ್ರ ಇನ್ನೇನು ಇಟ್ಕೊಂಡಿದ್ದಾರೋ ಅನ್ನೋ ಕುತೂಹಲ ನಮಗೆ ಹೆಚ್ತಾ ಇದೆ.
ಕನ್ನಡ ಚಿತ್ರರಂಗದಲ್ಲಿ ಈಗ ಪ್ರಶಾಂತ್ ನೀಲ್ ಬಂದಿರಬಹುದು. ಆದರೆ ಆಗಲೇ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಿಯಲ್‌ಸ್ಟಾರ್ ಉಪೇಂದ್ರ. ಇದನ್ನು ಸ್ವತಃ ಪ್ರಶಾಂತ್ ನೀಲ್ ಕೂಡ ಮೆಚ್ಚಿಕೊಂಡಿದ್ರು, ನಾವೆಲ್ಲಾ ಒಂದು ಜಾನರ್ ಸಿನಿಮಾ ಮಾಡ್ತೀವಿ, ಉಪೇಂದ್ರ ಮಾಡೋ ಸಿನಿಮಾ ಯಾರೂ ಮಾಡೋಕಾಗಲ್ಲ ಅಂತ ಹೇಳಿದ್ರು. ಉಪ್ಪಿ ನಿರ್ದೇಶನ ಅಂದ್ರೆ ಅದೊಂದು ಮ್ಯಾಜಿಕ್. ರಿಯಲ್‌ಸ್ಟಾರ್ ಮಾಡೋ ಜಾನರ್ ಸೈಕಾಲಾಜಿಲ್ ಥ್ರಿಲ್ಲರ್. ಈಗ ಮತ್ತದೇ ಉಪ್ಪಿ ಸ್ಟೆöÊಲ್ ಆಫ್ ಸಿನಿಮಾಗೆ ಮುಹೂರ್ತ ರ‍್ತಿದೆ. ಜೂನ್ ೩ಕ್ಕೆ ಹೊಸ ಸಿನಿಮಾದ ಮುಹೂರ್ತ ನಡೀತಿದೆ.
ಜೂನ್ ೩ಕ್ಕೆ ಯಾಕೆ ಮುಹೂರ್ತ ಪ್ಲಾö್ಯನ್ ಮಾಡಿದ್ದಾರೆ ಉಪ್ಪಿ ಗೊತ್ತಿಲ್ಲ. ಸಿನಿಮಾ ಕೂಡ ಈಗ ಹೇಳೋಕೆ ಹೊರಟಿರೋದು ನಾನು ನೀನು ನಂತರದ ಮೂರನೇ ವ್ಯಕ್ತಿಯ ಬಗ್ಗೆ ಅನ್ನೋದು ಇಂಟರೆಸ್ಟಿAಗ್. ಹಾಗಾಗಿ ಇಲ್ಲಿ ಮೂರು ನಾಮದ ರೀತಿಯಲ್ಲೇ ಚಿನ್ಹೆ ಕೂಡ ಕಾಣ್ತಿದೆ. ಇಲ್ಲಿ ೭ ವರ್ಷಗಳ ನಂತರ ಉಪ್ಪಿ ನಿರ್ದೇಶನಕ್ಕೆ ಹೊರಡ್ತಿದ್ದಾರೆ. ಕಥೆಯನ್ನು ರೆಡಿ ಮಾಡಿ ಕೆಲವು ವರ್ಷಗಳಾದ್ರೂ ಪ್ರಜಾಕೀಯ ಅಂತ ಬ್ಯುಸಿ ಇದ್ದ ಉಪ್ಪಿ ಈ ಬಾರಿ ಏನು ಮಾಡ್ತಾರೆ ಅನ್ನೋ ಕುತೂಹಲ ಎಲ್ರ‍್ಗೂ ಇದೆ.
ಹೀಗೆ ಒಂದೊAದು ಸಿನಿಮಾ ಅಂದಾಗ್ಲೂ ಉಪ್ಪಿ ಕೊಡೋ ಥ್ರಿಲ್‌ಗಳು ಬೇರೆ ಲೆವೆಲ್‌ಗೇ ರ‍್ತವೆ.
ಇಷ್ಟಕ್ಕೂ ರಿಯಲ್‌ಸ್ಟಾರ್ ಡೈರೆಕ್ಟ್ ಮಾಡಿರೋ ಅಷ್ಟೂ ಸಿನಿಮಾಗಳು ಸೂಪರ್‌ಹಿಟ್. ರಾಜಮೌಳಿ, ಶಂಕರ್ ಥರ ನಮ್ಮಲ್ಯಾರು ಗುರು ಅಂತ ಹುಡುಕೋಕು ಚಾನ್ಸ್ ಕೊಡದಂತೆ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕರ ಸಾಲಿಗೆ ಸೇರಿರೋ ಸೂಪರ್‌ಸ್ಟಾರ್ ಉಪೇಂದ್ರ ಈಗ ನಿರ್ದೇಶನ ಮಾಡ್ತಾರೆ ಅಂದ್ರೆ ಅವರ ಮ್ಯಾಜಿಕ್ ಹೇಗಿರುತ್ತೆ ಅಂತ ಕಾಯೋಣ, ಜೂನ್ ಮೂರಕ್ಕೆ ಏನಿರುತ್ತೆ, ಸೇರಿದಂತೆ ಉಪ್ಪಿ ನಿರ್ದೇಶನದ ಸಿನಿಮಾದ ಎಲ್ಲಾ ಅಪ್ಡೇಟ್ ನಾವು ನಿಮ್ಗೆ ಕೊಡ್ತಾ ರ‍್ತೀವಿ.

ಓಂ, ಕರ್ನಾಟಕ ಟಿವಿ

- Advertisement -

Latest Posts

Don't Miss