Saturday, July 27, 2024

Latest Posts

ಕಾಜು ಮಸಾಲಾ ರೆಸಿಪಿ

- Advertisement -

Recipe: ನಾವಿಂದು ಕಾಜು ಮಸಾಲಾವನ್ನು ಮನೆಯಲ್ಲೇ ಯಾವ ರೀತಿ ತಯಾರಿಸಬೇಕು ಎಂದು ತಿಳಿಯೋಣ.

ಬೇಕಾಗುವ ಸಾಮಗ್ರಿ: 3 ಟೊಮೆಟೋ, ಕಾಲು ಕಪ್ ನೆನೆಸಿಟ್ಟ ಕಾಜು, ಅರ್ಧ ಕಪ್ ತುಪ್ಪದಲ್ಲಿ ಹುರಿದುಕೊಂಡ ಕಾಜು, ಚಕ್ಕೆ, ಲವಂಗ, ಏಲಕ್ಕಿ, 4 ಸ್ಪೂನ್ ತುಪ್ಪ, 3ಸ್ಪೂನ್ ಎಣ್ಣೆ, ಜೀರಿಗೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಹುರಿದ ಜೀರಿಗೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಕೊಂಚ ಕಸೂರಿ ಮೇಥಿ, ಉಪ್ಪು.

ಮಾಡುವ ವಿಧಾನ: ಮೊದಲು ಟೊಮೆಟೋ, ನೆನೆಸಿಟ್ಟ ಕಾಜು, ಚಕ್ಕೆ, ಲವಂಗ, ಏಲಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ನುಣ್ಣಗೆ ಪೇಸ್ಟ್ ತಯಾರಿಸಿ. ಈಗ ಪ್ಯಾನ್‌ಗೆ 4 ಸ್ಪೂನ್ ತುಪ್ಪ, 3 ಸ್ಪೂನ್ ಎಣ್ಣೆ ಹಾಕಿ, ಪಲಾವ್ ಎಲೆ, ಜೀರಿಗೆ,  ಚಕ್ಕೆ, ಲವಂಗ, ಏಲಕ್ಕಿ ಹಾಕಿ ಹುರಿದುಕೊಳ್ಳಿ. ಬಳಿಕ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದುಕೊಳ್ಳಿ. ಬಳಿಕ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಹುರಿದ ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು ಸೇರಿಸಿ, ಮತ್ತಷ್ಟು ಹುರಿಯಿರಿ.

ತಯಾರು ಮಾಡಿಟ್ಟುಕೊಂಡ ಪೇಸ್ಟ್, ಇದಕ್ಕೆ ಮಿಕ್ಸ್ ಮಾಡಿ. ಕಾಲು ಕಪ್ ಮೊಸರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದೂವರೆ ಕಪ್ ನೀರು ಹಾಕಿ ಕುದಿಬರಿಸಿ. ಬಳಿಕ ಇದಕ್ಕೆ ಹುರಿದುಕೊಂಡ ಗೋಡಂಬಿ, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು ಹಾಕಿ, ಗ್ಯಾಸ್ ಆಫ್ ಮಾಡಿ ಕೊಂಚ ಹೊತ್ತು ಮುಚ್ಚಿಡಿ. ಬಳಿಕ ಘಮ ಘಮಿಸುವ ಕಾಜು ಮಸಾಲಾ ರೆಡಿ. ಇದನ್ನು ಚಪಾತಿ, ರೋಟಿ, ನಾನ್ ಜೊತೆ ಸವಿಯಬಹುದು.

ಸೂರ್ಯ ನಮಸ್ಕಾರವನ್ನು ಸಂಜೆಯ ಹೊತ್ತಲ್ಲಿ ಮಾಡುವುದು ತಪ್ಪೋ..? ಸರಿಯೋ..?

ಅತೀಯಾಗಿ ಬ್ರಶ್ ಮಾಡಿದ್ರೆ, ಹಲ್ಲಿನ ಬಣ್ಣ ಹಳದಿಯಾಗುತ್ತದೆಯಾ..?

ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು..?

- Advertisement -

Latest Posts

Don't Miss