Sunday, April 20, 2025

Latest Posts

ಸರ್ಕಾರಿ ಬಸ್ ಕಳ್ಳತನ ಮಾಡಿದ ಕದೀಮರು..!

- Advertisement -

State news

ಕಲಬುರಗಿ(ಫೆ.21): ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ನಗರದಲ್ಲಿರುವ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಬಸ್ ಕಳ್ಳರು ದೋಚಿಕೊಂಡು ಹೋಗಿ ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಚ್ಚಿಟ್ಟಿರುತ್ತಾರೆ ಬಸ್ಸನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಬಸ್ ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಇದೀಗ ಕಳ್ಳತನ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಬೀದರ್ ಡಿಪೋ ನಂಬರ್ 2 ಕ್ಕೆ ಸೇರಿದ್ದ ಕೆಎ 38 ಎಫ್ 971 ನಂಬರ್ನ ಬಸ್, ನಿನ್ನೆ(ಫೆ.20) ಬೀದರ್ ನಿಂದ ಚಿಂಚೋಳಿಗೆ ಬಂದಿತ್ತು. ಪ್ರತಿನಿತ್ಯ ಚಿಂಚೋಳಿಯಿಂದ ಮನ್ನಾ ಎಖ್ಖೆಳ್ಳಿ ಮಾರ್ಗವಾಗಿ ಬೀದರ್ ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿತ್ತು. ಪ್ರತಿನಿತ್ಯ ಚಿಂಚೋಳಿಯಲ್ಲಿ ಹಾಲ್ಟ್ ಮಾಡಿ, ಮುಂಜಾನೆ ಬಸ್ ಚಾಲಕ ಮತ್ತು ನಿರ್ವಾಹಕರು ತೆಗೆದುಕೊಂಡು ಹೋಗುತ್ತಾರೆ.

ನಿನ್ನೆ ರಾತ್ರಿ ಬೀದರ್ನಿಂದ ತಂದಿದ್ದ ಬಸ್ ಚಾಲಕ ಅಯ್ಯುಬ್ ಖಾನ್ ಮತ್ತು ಈರಪ್ಪ, ಚಿಂಚೋಳಿ ನಗರ ಬಸ್ಸ್ಟಾಂಡ್ ನಲ್ಲಿ ನಿಲ್ಲಿಸಿ, ಡಿಪೋದಲ್ಲಿ ಮಲಗಿದ್ದರು. ಇಂದು ಮುಂಜಾನೆ ಎಂದಿನಂತೆ, ಬಸ್ ತಗೆದುಕೊಂಡು ಮತ್ತೆ ಬೀದರ್ಗೆ ಹೋಗಲು ಮುಂದಾದಾಗ ಚಾಲಕ ಮತ್ತು ನಿರ್ವಾಹಕನಿಗೆ ಶಾಕ್ ಆಗಿದೆ. ನಿಲ್ದಾಣದಲ್ಲಿದ್ದ ಬಸ್ ನಾಪತ್ತೆಯಾಗಿತ್ತು. ಕೂಡಲೇ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳರು ಕದ್ದೊಯ್ದಿರುವುದು ಪತ್ತೆಯಾಗಿತ್ತು. ಬಸ್ನ್ನ ಪತ್ತೆ ಹಚ್ಚಿದ್ದಾರೆ. ಸದ್ಯ ಬಸ್ನ್ನು ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಇದೀಗ ಕಳ್ಳತನ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕುಡಿದ ಅಮಲಿನಲ್ಲಿ ಮಚ್ಚು ತೋರಿಸಿ ಧರ್ಮದೇಟು ತಿಂದ ಕುಡುಕ !

ಗಾಳಿಯಲ್ಲಿ ಗುಂಡು; ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಕೇಸ್ ದಾಖಲು..!

- Advertisement -

Latest Posts

Don't Miss