Kannada Fact check: ಕುಂಭಮೇಳದ ಪೋಸ್ಟರ್ ಮೇಲೆ ಮುಸ್ಲಿಂ ವ್ಯಕ್ತಿ ಮೂತ್ರ ಮಾಡಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಮಾಡಲಾಗಿದೆ.
ರಾಯ್‌ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಕುಂಭ ಮೇಳದ ಪೋಸ್ಟರ್ ಮೇಲೆ ಅಬ್ದುಲ್ ಎಂಬಾತ ಮೂತ್ರ ವಿಸರ್ಜಿಸಿದ್ದು, ಈ ವಿಷಯ ಗೊತ್ತಾದ ಬಳಿಕ ಅಲ್ಲಿನ ಸ್ಥಳೀಯ ಹಿಂದೂಗಳು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ವೀಡಿಯೋ ವೈರಲ್ ಮಾಡಲಾಗಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ.
ಹಾಗಾದ್ರೆ ಸತ್ಯವೇನು..?
ಕುಂಭ ಮೇಳಕ್ಕೆ ಸಂಬಂಧಿಸಿದ ಭಿತ್ತಿಚಿತ್ರದ ಮೇಲೆ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ಮಾಡಿರುವುದು ಸತ್ಯ. ಆದರೆ ಹಾಗೆ ಮಾಡಿರುವುದು ಮುಸ್ಲಿಂ ವ್ಯಕ್ತಿಯಲ್ಲ. ಬದಲಾಗಿ ಹಿಂದೂ ವ್ಯಕ್ತಿ. ಈತನ ಹೆಸರು ವಿನೋದ್ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಈ ಘಟನೆ ಜನವರಿ 10, 2025ರಂದು ನಡೆದಿದೆ.
ಆದರೆ ಬಾಬಾ ಬನಾರಸ್ ಎಂಬ ಎಕ್ಸ್ ಖಾತೆ ಹೊಂದಿರುವ ವ್ಯಕ್ತಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಧರ್ಮಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
Rae Bareilly, UP: Abdul Urinates on Photos of Mahakumbh and Hindu Deities on Wall, Caught by Locals. pic.twitter.com/Kih0SYmtNQ
— Baba Banaras™ (@RealBababanaras) January 14, 2025