Kannada Fact Check: ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳಲಾಗದಿದ್ದಾಗ, ಸೈಫ್ ದೇಹಕ್ಕೆ ಚಾಕು ಇರಿದಿದ್ದ. ರಾತ್ರಿ 2 ಗಂಟೆಗೆ ಈ ಘಟನೆ ನಡೆದಿದ್ದು, ಅದೇ ವೇಳೆಗೆ ಸೈಫ್‌ರನ್ನು ಅವರ ಮಗ ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.
ಸೈಫ್‌ಗೆ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿತ್ತು. ಇಷ್ಟು ದಿನ ಚಿಕಿತ್ಸೆ ಪಡೆಯುತ್ತಿದ್ದ ಸೈಫ್ ಇಂದು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಸೈಫ್‌ರನ್ನು ಕಾಣಲು ಬಂದಿದ್ದು, ಈ ವೇಳೆ ಕರೀನಾ ಕಪೂರ್ ಕೂಡ, ಆಸ್ಪತ್ರೆಯಲ್ಲಿ ಇರುವಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಮಾಡಲಾಗಿದೆ.
ಆದರೆ ಇರು ನಿಜವಾದ ಫೋಟೋವಲ್ಲ. ಎಡಿಟ್ ಮಾಡಿ, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಇದೊಂದೇ ಫೋಟೋ ಅಲ್ಲದೇ, ಬೇರೆ ಬೇರೆ ಫೋಟೋಗಳನ್ನು ಎಡಿಟ್ ಮಾಡಿ, ಸೈಫ್ ಅಲಿ ಖಾನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ಈ ಕೃತ್ಯ ಮಾಡಿದ್ದ ದರೋಡೆಕೋರ ಈಗಾಗಲೇ ಸಿಕ್ಕಿಬಿದ್ದಿದ್ದು ಈತ ಬಾಂಗ್ಲಾದೇಶದ ಮಾಜಿ ಕುಸ್ತಿಪಟುವಾಗಿದ್ದ ಮುಸ್ಲಿಂ ವ್ಯಕ್ತಿ ಎನನ್ನಲಾಗಿದೆ. ಆದರೆ ಭಾರತಕ್ಕೆ ಬಂದು ವಿಜಯ್ ದಾಸ್ ಎಂದು ಹೆಸರು ಬದಿಲಿಸಿಕೊಂಡಿದ್ದ. ಈ ಕೇಸ್ ಕೈಗೆತ್ತಿಕೊಂಡಿದ್ದ ಕನ್ನಡಿಗ ಎನ್‌ಕೌಂಟರ್ ದಯಾನಾಯಕ್ ಘಟನೆ ನಡೆದ 32 ಗಂಟೆಯೊಳಗೆ ದರೋಡೆಕೋರನನ್ನು ಅರೆಸ್ಟ್ ಮಾಡಿ, ಜೈಲಿಗಟ್ಟಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು, ಹಲವು ವಿಚಾರಗಳನ್ನು ಆರೋಪಿ ಬಾಯ್ಬಿಟ್ಟಿದ್ದಾನೆನ್ನಲಾಗಿದೆ.