Kannada Fact Check: ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪ್ರಪಂಚದ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ಒಂದು ಕಡೆ ನಿಂತು ಬಿಲ್ ಗೇಟ್ಸ್ ಕುಂಭ ಮೇಳದ ಸೌಂದರ್ಯವನ್ನು ಸವಿಯುತ್ತಿದ್ದಾರೆ ಅನ್ನೋ ರೀತಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.
ಹಾಗಾದ್ರೆ ನಿಜಕ್ಕೂ ಬಿಲ್ ಗೇಟ್ಸ್ ಕುಂಭ ಮೇಳಕ್ಕೆ ಬಂದಿದ್ದರಾ ಅನ್ನೋ ಪ್ರಶ್ನೆಗೆ ಉತ್ತರ, ಇಲ್ಲಾ. ಬಿಲ್ ಗೇಟ್ಸ್ ಕುಂಭ ಮೇಳಕ್ಕೆ ಬರಲಿಲ್ಲ. ಬದಲಾಗಿ ಬಿಲ್‌ಗೇಟ್ಸ್ ಮುಖ ಹೋಲಿಕೆ ಇರುವ ಓರ್ವ ವಿದೇಶಿ ವೃದ್ಧರೇ ಬಿಳಿ ಉಡುಗೆ ಉಟ್ಟು ಹಾಗೆ ನಿಂತು ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಯುವ ಕಾರ್ಯವ್ನು ನೋಡುತ್ತಿದ್ದಾರೆ. ಅದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ, ಕುಂಭ ಮೇಳಕ್ಕೆ ಬಿಲ್‌ಗೇಟ್ಸ್ ಬಂದಿದ್ದಾರೆ ಅನ್ನೋ ರೀತಿ ಫೋಟೋ ವೈರಲ್ ಮಾಡಲಾಗಿದೆ.
ಇದು ನವಂಬರ್ 2024ರ ಫೋಟೋವಾಗಿದ್ದು, ಬಿಲ್‌ಗೇಟ್ಸ್ ಮುಖ ಹೋಲುವ ವಿದೇಶಿಗ, ಕಾಶಿಗೆ ಬಂದಿದ್ದರು. ಇದೇ ಫೋಟೋವನ್ನು ಬಿಲ್‌ಗೇಟ್ಸ್ ಎಂದು ತಿಳಿದು ವೈರಲ್ ಮಾಡಲಾಗಿದೆ.