Wednesday, October 22, 2025

Latest Posts

Thailand ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗ : ಪುರುಷೋತ್ತಮ ಶಾಮಾಚಾರ್

- Advertisement -

ಬೆಂಗಳೂರು: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಕಾರ್ಯಕರ್ತರು(MES) ಕನ್ನಡ ಬಾವುಟವನ್ನು ದಹನ(Karnataka Flag Burnt) ಮಾಡಿ ಪುಂಡಾಟ ಮೆರೆದಿದ್ದರು. ಘಟನೆ ಬಳಿಕ ಪ್ರತಿಯೊಬ್ಬ ಕನ್ನಡಿಗನ ರಕ್ತವೂ ಕುದಿದಿತ್ತು. ಎಂಇಎಸ್ ಪುಂಡಾಟ ಕಟ್ಟಿ ಹಾಕಲು ಕನ್ನಡ ಪರ ಸಂಘಟನೆಗಳು ಬಂದ್ಗೆ ಮುಂದಾಗಿದ್ದವು. ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಆದ್ರೆ ಇಲ್ಲೊಬ್ಬ ಕನ್ನಡಿಗ ಎಂಇಎಸ್ ಪುಂಡರಿಗೆ ಬೇರೆ ರೀತಿಯೇ ಪಾಠ ಕಲಿಸಿದ್ದಾನೆ. ಎಂಇಎಸ್ ಪುಂಡರಿಗೆ ತಿರುಗೇಟು ಕೊಡುವಂತೆ ವೀರ ಕನ್ನಡಿಗ ಮಹಾನ್ ಸಾಧನೆಯೊಂದನ್ನು ಮಾಡಿದ್ದಾನೆ.
ಅದು ಏನೆಂದರೆ ಪುರುಷೋತ್ತಮ ಶಾಮಾಚಾರ್ ಎಂಬ ಯುವಕ ಆಕಾಶದ ಮೇಲೆ ಕನ್ನಡ ಬಾವುಟ ಹಾರಿಸಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ಬೆಂಗಳೂರಿನ ನಾಗರಬಾವಿಯ ನಿವಾಸಿ ಪುರುಷೋತ್ತಮ ಶಾಮಾಚಾರ್ (Puruṣōttama Shamachar) ಸದ್ಯ ಥಾಯ್ಲ್ಯಾಂಡ್ (Thailand) ನಲ್ಲಿ ಟೆಕ್ಲಿಕಲ್ ಇಂಜಿನಿಯರ್ (Technical Engineer) ಆಗಿದ್ದಾರೆ. ಇವರು ಕನ್ನಡಿಗರ ಹೆಮ್ಮೆಯ ಕನ್ನಡದ ಧ್ವಜಕ್ಕೆ ಯಾರೂ ಅವಮಾನ ಮಾಡಲು ಸಾಧ್ಯವಿಲ್ಲ, ಕನ್ನಡ ಬಾವುಟ ಎತ್ತರದಲ್ಲಿ ಹಾರೋ ಸ್ವಾಭಿಮಾನಿಗಳ ಧ್ವಜ ಎಂಬ ಸಂದೇಶ ಸಾರುವ ಸಲುವಾಗಿ ಥಾಯ್ಲ್ಯಾಂಡ್ ನಲ್ಲಿ 14 ಸಾವಿರ ಮೀಟರ್ (14 ಕಿಲೋಮೀಟರ್ ) ಎತ್ತರದಿಂದ ಸ್ಕೈ ಡೈವ್ (Sky Dive) ಮಾಡಿ ಕನ್ನಡ ಬಾವುಟ ಹಾರಿಸಿದ್ದಾರೆ.

- Advertisement -

Latest Posts

Don't Miss