Monday, December 23, 2024

Latest Posts

ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ಕಾಂತಾರ ಬೆಡಗಿ ಸಪ್ತಮಿ..

- Advertisement -

Movie News: ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರದ ಮೂಲಕ ಸಪ್ತಮಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರೂ ಕೂಡ, ಫೇಮಸ್ ಆಗಿದ್ದು ಮಾತ್ರ ಕಾಂತಾರ ಸಿನಿಮಾದಿಂದ. ಕಾಂತಾರ ಸಿನಿಮಾ ಬಳಿಕ ಪ್ರಸಿದ್ಧಿ ಪಡೆದಿದ್ದ ಸ್ಯಾಂಡಲ್‌ವುಡ್ ಬೆಡಗಿ ಸಪ್ತಮಿ ಗೌಡ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ನಟಿಯಾದ ಸಪ್ತಮಿ ಗೌಡ, ತೆಲುಗು ಚಿತ್ರದಲ್ಲೂ ನಟಿಸಲಿದ್ದಾರೆ ಎಂಬ ಗುಸುಗುಸು ಅಲ್ಲಲ್ಲಿ ಕೇಳಿಬರುತ್ತಿತ್ತು. ಇದೀಗ ಆ ಸುದ್ದಿ ನಿಜವಾಗಿದ್ದು, ತಮ್ಮುಡು ಚಿತ್ರದಲ್ಲಿ ನಟಿಸುವ ಮೂಲಕ, ಸಪ್ತಮಿ, ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದೆ.

ಕಾಂತಾರ ರಿಲೀಸ್‌ ಬಳಿಕ, ಸಪ್ತಮಿಗೆ ಹಲವು ನಟನೆಯ ಅವಕಾಶಗಳು ಸಿಕ್ಕಿದೆ. ಬಾಲಿವುಡ್‌ನಲ್ಲಿ ಈಗಾಗಲೇ ಮಿಂಚಿರುವ ಈ ಚೆಲುವೆ, ಈಗ ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಅಲ್ಲದೇ, ಕನ್ನಡದ ಚಿತ್ರಗಳಲ್ಲೂ ಇವರಿಗೆ ನಟನೆಯ ಅವಕಾಶ ಹುಡುಕಿಕೊಂಡು ಬಂದಿದೆ. ಹಾಗಾಗಿ ಸದ್ಯ ಸಪ್ತಮಿ ಫುಲ್ ಬ್ಯುಸಿ ನಟಿ ಅಂದ್ರೂ ತಪ್ಪಾಗಲ್ಲಾ.

ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..

ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

ಕಂಗನಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು..? ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು..

- Advertisement -

Latest Posts

Don't Miss