ರಿಷಬ್ ಶೆಟ್ಟಿ ತಮ್ಮ ಫ್ಯಾನ್ಸ್‌ಗೆ ಯಾವತ್ತೂ ನಿರಾಸೆ ಮಾಡಲ್ಲಾ ಅಂತಾ ಅವರ ಅಭಿಮಾನಿಗಳು ಹೇಳ್ತಾರೆ. ಯಾಕಂದ್ರೆ ರಿಷಬ್ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಬೆಲ್ ಬಾಟಮ್, ರಿಕ್ಕಿ, ಮುಂತಾದ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿದೆ. ಅದೇ ರೀತಿ ರಿಷಬ್ ನಟನೆಯ, ಮೋಸ್ಟ್ ಎಕ್ಸ್‌ಪೆಕ್ಟೆಡ್ ಕಾಂತಾರ ಸಿನಿಮಾ ಕೂಡ ಇದೇ ನವರಾತ್ರಿ ಸಮಯಕ್ಕೆ ರಿಲೀಸ್‌ಗೆ ರೆಡಿಯಾಗಿದೆ.
ಈ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಅನೌನ್ಸ್ ಮಾಡಿದ್ದು, ಸೆಪ್ಟೆಂಬರ್ 30ಕ್ಕೆ ಕಾಂತಾರ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ. ರಿಷಬ್ ಹೆಚ್ಚಾಗಿ ಕರಾವಳಿ ಕಥೆಯನ್ನೇ ತರುತ್ತಿದ್ದು, ಇದರಲ್ಲಿಯೂ ಕರಾವಳಿ ಭಾಷೆಯಲ್ಲೇ ರಿಷಬ್ ಡೈಲಾಗ್ ಹೇಳಿದ್ದಾರೆ. ಚಿತ್ರದ ಪೋಸ್ಟರ್‌ನಲ್ಲಿ ಕಂಬಳದ ಚಿತ್ರವಿದೆ. ಆದ್ರೆ ಟೀಸರ್‌ನಲ್ಲಿ ಕಾಡು ಜನರು ಮತ್ತು ಬೇಟೆಯಾಡುವ ದೃಶ್ಯಗಳನ್ನ ತೋರಿಸಲಾಗಿದೆ. ಹಾಗಾಗಿ ಇದು ಯಾವುದರ ಕಥೆ ಅನ್ನೋ ಬಗ್ಗೆ ಜನರಿಗೆ ಹೆಚ್ಚಿನ ಕ್ಯೂರಿಯಾಸಿಟಿ ಬರುವಂತೆ ಮಾಡಿದೆ.
ವಿಜಯ್ ಕಿರಗಂದೂರ್ ನಿರ್ಮಾಣದ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ, ಕಾಂತಾರ ಸಿನಿಮಾದಲ್ಲಿ ರಿಷಬ್ ನಟಿಸಿ, ನಿರ್ದೇಶಿಸಿದ್ದಾರೆ. ಇವರೊಂದಿಗೆ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್, ಸಪ್ತಮಿ ಗೌಡ ಕೂಡ ಸಾಥ್ ನೀಡಿದ್ದಾರೆ. ಈಗಾಗಲೇ ಕಾಂತಾರ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.




