Sunday, December 1, 2024

Latest Posts

ಜಲಶಕ್ತಿ ಮಂತ್ರಿಗಳ ಜೊತೆ ಕರವೇ ನಾರಾಯಣ ಗೌಡ ಭೇಟಿಗೆ ಅವಕಾಶ; ಪ್ರಹ್ಲಾದ್ ಜೋಶಿ

- Advertisement -

ನವದೆಹಲಿ: ಕಾವೇರಿ ನೀರಿಗಾಗಿ ರೈತ ಪರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇದೆ. ಈಗಾಗಲೇ ಒಮ್ಮೆ ರಾಜ್ಯವನ್ನು ಬಂದ್ ಮಾಡುವ ಮೂಲಕ ನೀರಿನ ಅವಶ್ಯಕತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ. ಆದರೂ, ಇತ್ತೀಚೆಗೆ ಅ.31 ರವರೆಗೆ 15 ದಿನಗಳ ಕಾಲ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA)  ಆದೇಶಿಸಿದ್ದರು.

ಈ ಹಿನ್ನಲೆ ಕರವೇ ಕಾರ್ಯಕರ್ತರು ಇಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಅದರಂತೆ ಕಾವೇರಿ ಜಲಸಂಕಷ್ಟ ಪರಿಹರಿಸುವಂತೆ ಕರವೇ ನಾರಾಯಣ ಗೌಡರ ನೇತೃತ್ವದಲ್ಲಿ ದೆಹಲಿಗೆ ಬಂದಿದ್ದು, ಜಲಶಕ್ತಿ ಮಂತ್ರಿಗಳನ್ನು ಭೇಟಿಯಾಗಬೇಕು ಎಂದರು, ಆ ವ್ಯವಸ್ಥೆಯನ್ನು ನಮ್ಮ ನಿವಾಸದಲ್ಲಿ ಮಾಡಿದ್ದೇನೆ ಎಂದು  ಕೇಂದ್ರ  ಸಚಿವ ಪ್ರಹ್ಲಾದ್ ಜೋಶಿ  ನವದೆಹಲಿಯಲ್ಲಿ ಹೇಳಿದರು.

ಹೌದು, ನವದೆಹಲಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಷಿ ಅವರು ‘ಸಂಕಷ್ಟ ಸೂತ್ರ ಹಾಗು ಮೇಕೆದಾಟು ವಿಚಾರ ಅವರು ಪ್ರಸ್ತಾಪಿಸಿದ್ದಾರೆ. ಸಂಕಷ್ಟ ಸೂತ್ರ ಕುರಿತು ಅಗತ್ಯ ಮಾಹಿತಿಯನ್ನು ತೀರ ಇತ್ತೀಚೆಗೆ ಕರ್ನಾಟಕ ಸರ್ಕಾರ ಒದಗಿಸಿದೆ. ಈ ಮಾಹಿತಿ ಜಲಶಕ್ತಿ ಸಚಿವರು ನಮ್ಮ ಜೊತೆ ಈಗ ಹಂಚಿಕೊಂಡಿದ್ದಾರೆ. ಮೊದಲು ಸೌರ್ಹಾದ ಮಾತುಕತೆ ತಮಿಳುನಾಡು ಮತ್ತು ಕರ್ನಾಟಕ ಆರಂಭ ಮಾಡಬೇಕು. ಈಗಾಗಲೇ ಡಿಎಂಕೆ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಉತ್ತಮ ಸಂಬಂಧ ಇದೆ. ಅವರು ಮಾತುಕತೆ ಶುರು ಮಾಡಲಿ ಎಂದರು.

DK Shivakumar: ಇಂದು ಹುಕ್ಕೇರಿಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ..!

ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!

ಕಳ್ಳರನ್ನು ಹಿಡಿಯುವವರು ಪೋಲಿಸರು. ಆದರೆ ಪೊಲಿಸರೇ ಕಳ್ಳರಾದಾಗ ಯಾರು ಹಿಡಿಯಬೇಕು?

- Advertisement -

Latest Posts

Don't Miss