ಈ ಹಿಂದೆ ಯ್ಯೂಟ್ಯೂಬ್‌ನಲ್ಲಿ ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್ ಸಖತ್ ಫೇಮಸ್ ಆಗಿತ್ತು. ಒಂದೇ ದಿನಕ್ಕೆ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದಿತ್ತು. ಆ ಸಿನಿಮಾದಲ್ಲಿ ಕುಡುಕನ ಪಾತ್ರದಲ್ಲಿ ಆ್ಯಕ್ಟ್ ಮಾಡಿದ್ದ ಕಾರ್ತಿಕ್ ರೆಡ್ಡಿನೇ ಆ ಸಿನಿಮಾ ಮಾಡಿದ್ದು. ಆ ಸಿನಿಮಾಗೆ ಬಂಡವಾಳ ಹಾಕಿದ್ದು. ಅಮೃತಾಂಜನ್ ಸಿನಿಮಾ ಯಶಸ್ಸು ಗಳಿಸಿದ ನಂತರ ಕಾರ್ತಿಕ್ ಲೈಫೇ ಚೇಂಜಾಗಿದೆ. ಈ ಬಗ್ಗೆ ಸ್ವತಃ ಕಾರ್ತಿಕ್ ಮಾತನಾಡಿದ್ದಾರೆ.
ತಾನು ಚಿಕ್ಕವನಿದ್ದಾಗಲೇ, ಕಾರ್ತಿಕ್‌ಗೆ ತಾನು ಹೀರೋ ಆಗ್ಬೇಕು ಅನ್ನೋ ಆಸೆ ಇತ್ತಂತೆ. ಇವರು ಪಿಯುಸಿಯಲ್ಲಿರುವಾಗಲೇ, ಮೊಬೈಲ್ ಬಳಸಿ ಶಾರ್ಟ್ ಫಿಲ್ಮ್ ಮಾಡಿದ್ದರು. ಆದ್ರೆ ಅದೆಲ್ಲ ವರ್ಕೌಟ್ ಆಗಲ್ಲ ಅಂತಾ ನಿರ್ಧಾರ ಮಾಡಿ, ಓದು ಮುಂದುವರಿಸಿದರು. ಬಿಕಾಂ ಮುಗಿಸಿದರು. ನಂತರ ಅಮೃಂತಾಂಜನ್ ಡೈರೆಕ್ಟರ್ ಕಥೆ ಹೇಳಿದಾಗ, ಅದಕ್ಕೆ ಒಪ್ಪಿದ ಕಾರ್ತಿಕ್, ತಾವು ಎರಡು ಲಕ್ಷ ರೂಪಾಯಿ ಬಂಡವಾಳ ಹಾಕೋಕ್ಕೆ ನಿರ್ಧರಿಸಿದರು.
ಕಲಾವಿದರನ್ನ ಹುಡುಕಿ, ತಂದು ಶೂಟಿಂಗ್ ಮುಗಿಯಲು 6 ತಿಂಗಳು ಆಯಿತು. ಸಾಮಾನ್ಯವಾಗಿ ಶಾರ್ಟ್ ಫಿಲ್ಮ್ ಮಾಡೋಕ್ಕೆ, ಒಂದು ತಿಂಗಳು ಸಾಕಾಗತ್ತೆ. ಆದ್ರೆ ಕಾರ್ತಿಕ್ ಈ ಸಿನಿಮಾ ಮಾಡೋಕ್ಕೆ 6 ತಿಂಗಳು ತೆಗೆದುಕೊಂಡಿದ್ದಕ್ಕಾಗಿ, ಅವರ ಫ್ರೆಂಡ್ಸ್ ಎಲ್ಲಿ ನಿನ್ನ ಸಿನಿಮಾ ಅಂತಾ ಕೇಳೋಕ್ಕೆ ಸ್ಟಾರ್ಟ್ ಮಾಡಿದ್ರು. ಕಾರ್ತಿಕ್ ಸಿನಿಮಾ ಶೂಟಿಂಗ್ ನಡೀತಾ ಇದೆ ಅಂತಾ ಹೇಳ್ತಾ ಬಂದ್ರು.
ಇನ್ನೇನು ಲಾಕ್‌ಡೌನ್ ಆಗಿಬಿಡ್ಬೇಕು ಅನ್ನೋಕ್ಕು ಕೆಲ ದಿನಗಳ ಹಿಂದೆ ಶೂಟಿಂಗ್ ಕಂಪ್ಲೀಟ್ ಆಯ್ತು. ಈ ಸಿನಿಮಾ ರಿಲೀಸ್‌ಗೂ ಮುನ್ನ ಕಾರ್ತಿಕ್ ಬಗ್ಗೆ ಸುಮಾರು ಜನ, ಇವನು ಗೆಲ್ಲೋದಿಲ್ಲಾ ಬಿಡು, ಈ ಸಿನಿಮಾ ತೋಪು ಅಂತಾ ಹೇಳಿದ್ರಂತೆ. ಆದ್ರೆ ಲಾಕ್‌ಡೌನ್ ಈ ಸಿನಿಮಾ ರಿಲೀಸ್ ಮಾಡಿದ್ದೇ ತಡ, ಒಂದೇ ದಿನದಲ್ಲಿ ಮಿಲಿಯನ್‌ಗಟ್ಟಲೇ ವೀವ್ಸ್ ಪಡೆಯಿತು. ಕಾರ್ತಿಕ್‌ರನ್ನ ಹೀಯಾಳಿಸಿದ್ದ ಜನ ಬಾಯಿಯ ಮೇಲೆ ಬೊಟ್ಟು ಇಡುವ ಹಾಗಾಯಿತು.
ಇನ್ನು ಅಮೃತಾಂಜನ್ ಸಿನಿಮಾ ಹಿಟ್ ಆದ ಬಳಿಕ, ಕಾರ್ತಿಕ್ ಹಿಂದಿರುಗಿ ನೋಡಲೇ ಇಲ್ಲ. ಅಲ್ಲಿಂದ ಸಕ್ಸಸ್ ಕೈ ಹಿಡಿಯಿತು. ಇನ್ನು ಈ ಸಿನಿಮಾದಲ್ಲಿ ಅಭಿನಯಿಸಿದ, ಈ ಕೆಲಸದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಕಾರ್ತಿಕ್ ಧನ್ಯವಾದ ಹೇಳಿದ್ದಾರೆ. ಅಲ್ಲದೇ ತಮಗೆ ಸಪೋರ್ಟ್ ಮಾಡಿದ ಟ್ರೋಲ್ ಪೇಜ್‌ಗಳಿಗೂ ಕೂಡ ಕಾರ್ತಿಕ್ ಥ್ಯಾಂಕ್ಸ್ ಹೇಳಿದ್ದಾರೆ.