Saturday, July 27, 2024

Latest Posts

Karwar : NPCILನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

- Advertisement -

NPCIL ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ(Nuclear Power Corporation of India- NPCIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 42 ನರ್ಸ್​, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಸೇರಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ npcilcareers.co.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್​ವೈಸರ್)- 03
ನರ್ಸ್​​ A-02
ಅಸಿಸ್ಟೆಂಟ್ ಗ್ರೇಡ್ 1(HR)-13
ಅಸಿಸ್ಟೆಂಟ್ ಗ್ರೇಡ್ 1(F&A)-11
ಅಸಿಸ್ಟೆಂಟ್ ಗ್ರೇಡ್ 1(C &MM)-04
ಸ್ಟೆನೋಗ್ರಾಫರ್ ಗ್ರೇಡ್ 1- 09

ವಿದ್ಯಾರ್ಹತೆ:
ನರ್ಸ್​​ A- ಪಿಯುಸಿ ಉತ್ತೀರ್ಣರಾಗಿರಬೇಕು, ಜತೆಗೆ ನರ್ಸಿಂಗ್​​ನಲ್ಲಿ 3 ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಉಳಿದ ಹುದ್ದೆಗಳಿಗೆ- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. 1 ನಿಮಿಷದಲ್ಲಿ 30 ಇಂಗ್ಲಿಷ್ ಪದಗಳನ್ನು ಟೈಪ್​ ಮಾಡುವ ಸ್ಪೀಡ್ ಇರಬೇಕು.

ವೇತನ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್​ವೈಸರ್)-ಮಾಸಿಕ ₹ 44,900
ನರ್ಸ್​​ A-ಮಾಸಿಕ ₹ 44,900
ಅಸಿಸ್ಟೆಂಟ್ ಗ್ರೇಡ್ 1(HR)- ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(F&A)-ಮಾಸಿಕ ₹ 25,500
ಅಸಿಸ್ಟೆಂಟ್ ಗ್ರೇಡ್ 1(C &MM)-ಮಾಸಿಕ ₹ 25,500
ಸ್ಟೆನೋಗ್ರಾಫರ್ ಗ್ರೇಡ್ 1- ಮಾಸಿಕ ₹ 25,500

ವಯೋಮಿತಿ:
ಸೈಂಟಿಫಿಕ್ ಅಸಿಸ್ಟೆಂಟ್-C(ಸೇಫ್ಟಿ ಸೂಪರ್​ವೈಸರ್)- 18-35 ವರ್ಷ
ನರ್ಸ್​​ A-18-30 ವರ್ಷ
ಅಸಿಸ್ಟೆಂಟ್ ಗ್ರೇಡ್ 1(HR)- 21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1(F&A)-21ರಿಂದ 28 ವರ್ಷ
ಅಸಿಸ್ಟೆಂಟ್ ಗ್ರೇಡ್ 1(C &MM)-21ರಿಂದ 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 1- 21ರಿಂದ 28 ವರ್ಷ

ಉದ್ಯೋಗದ ಸ್ಥಳ : ಕಾರವಾರ

ಅರ್ಜಿ ಸಲ್ಲಿಕೆ ದಿನಾಂಕ :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02/03/2022

- Advertisement -

Latest Posts

Don't Miss