- Advertisement -
National News: 10 ರೂಪಾಯಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಆರ್.ಎಲ್.ಮೀನ ಎಂಬ ಅಧಿಕಾರಿ ಹಲ್ಲೆಗೆ ಒಳಗಾಗಿದ್ದು, ಇವರು ಆಗ್ರಾ ರಸ್ತೆಯ ಕನೋಟಾ ರಸ್ತೆಯ ಬಳಿ ಇಳಿಯಲು ಟಿಕೇಟ್ ಪಡೆದಿದ್ದರು. ಆದರೆ ನಿಲ್ದಾಣ ಬಂದಿದ್ದು ಅಧಿಕಾರಿಗೂ ಗೊತ್ತಾಗಲಿಲ್ಲ, ಕಂಡಕ್ಟರ್ ಹೇಳಲೂ ಇಲ್ಲ. ಹೀಗಾಗಿ ಮುಂದಿನ ನಿಲ್ದಾಣದಲ್ಲಿ ನಿವೃತ್ತ ಅಧಿಕಾರಿ ಇಳಿಯಬೇಕಾಯಿತು. ಒಂದು ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಪ್ರಯಾಣಿಸಿದ್ದಕ್ಕಾಗಿ, 10 ರೂಪಾಯಿ ಎಕ್ಸ್‌ಟ್ರಾ ನೀಡಬೇಕು ಎಂದು ಕಂಡಕ್ಟರ್ ತಕರಾರು ತೆಗೆದಿದ್ದು, ಇಬ್ಬರ ಮಧ್ಯೆ ಈ ವಿಷಯಕ್ಕಾಗಿ ಜಗಳ ನಡೆದಿದೆ.
ಈ ವೇಳೆ ಅಧಿಕಾರಿ ದುಡ್ಡು ನೀಡಲು ನಿರಾಕರಿಸಿದ್ದಾರೆ. ಆಗ ಕಂಡಕ್ಟರ್ ಅಧಿಕಾರಿಯನ್ನು ತಳ್ಳಿದ್ದು, ಕೋಪಗೊಂಡ ಅಧಿಕಾರಿ, ಕಂಡಕ್ಟರ್ ಕಪಾಳಕ್ಕೆ ಹೊಡೆದಿದ್ದಾರೆ. ಬಳಿಕ ಕಂಡಕ್ಟರ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ.
- Advertisement -