ಬಾಲಿವುಡ್ ನಟಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ ದಿ ಕೇರಳ ಸ್ಟೋರಿ ಟ್ರೇಲರ್ ರಿಲೀಸ್ ಆಗಿದೆ. ಒಂದೇ ದಿನದಲ್ಲಿ 5 ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಈ ಟ್ರೇಲರ್ ಬಗ್ಗೆ ತರಹೇವಾರಿ ಚರ್ಚೆ ಹುಟ್ಟುಕೊಂಡಿದೆ.
ಶಾಲಿನಿ ಉನ್ನಿಕೃಷ್ಣ ಎಂಬ ಪಾತ್ರದಲ್ಲಿ ಮಿಂಚಿರುವ ಅದಾ ಶರ್ಮಾ, ಶಿವನ ಪರಮ ಭಕ್ತೆಯಾಗಿರುತ್ತಾಳೆ. ಶಿಕ್ಷಣಕ್ಕಾಗಿ ಹಾಸ್ಟೇಲ್‌ಗೆ ಹೋದ ಶಾಲಿನಿಗೆ, ಮುಸ್ಲಿ ಹೆಣ್ಣು ಮಕ್ಕಳ ಪರಿಚಯವಾಗುತ್ತದೆ. ಅಲ್ಲಿ ನಿಧಾನವಾಗಿ, ಹಿಂದೂ ದೇವರುಗಳಿಗಿಂತ, ಅಲ್ಲಾಹ್ ದೊಡ್ಡವನು, ಅಲ್ಲಾಹ್ ನಿಜವಾದ ದೇವರು. ಮುಸ್ಲಿಂ ನಿಜವಾದ ಧರ್ಮ ಎಂದು ಮತಾಂತರ ಮಾಡುವ ಕೆಲಸ ನಡೆಯುತ್ತದೆ. ನಂತರ ಮತಾಂತರವಾದ ಶಾಲಿನಿ, ಫಾತಿಮಾ ಆಗಿ ಬದಲಾಗುತ್ತಾಳೆ. ನಂತರ ಆಕೆಯನ್ನು ಐಸಿಸ್‌ಗೆ ಸೇರಿಸಲಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು, ವಿದೇಶದಲ್ಲಿ ನಡೆಯುವ ಕ್ರೂರತ್ವದ ಬಗ್ಗೆ ಆಕೆ ವಿವರಣೆ ನೀಡುತ್ತಾಳೆ. ಇವಿಷ್ಟು ಟ್ರೇಲರ್‌ನಲ್ಲಿರುವ ದೃಶ್ಯ.
ಆದ್ರೆ ಈಗ ಚರ್ಚೆಗೆ ಗ್ರಾಸವಾಗಿರುವ ವಿಷಯವೇನಂದ್ರೆ, ಇದರಲ್ಲಿ ಒಂದು ಡೈಲಾಗ್ ಬಂದಿದೆ. ಶಾಲಿನಿ, ತಮ್ಮ ಸ್ನೇಹಿತೆಯರೊಂದಿಗೆ ಮಾಲ್‌ಗೆ ಹೋದಾಗ, ಅಲ್ಲಿ ಆಕೆಯ ಮೇಲೆ ಸಾರ್ವಜನಿಕವಾಗಿ ಅತ್ಯಾಚಾರಕ್ಕೆ ಯತ್ನಿಸಲಾಗುತ್ತದೆ. ಆದರೆ ಅವರ್ಯಾರೂ, ಹಿಜಬ್ ಹಾಕಿದವರನ್ನ ಮುಟ್ಟುವುದಿಲ್ಲ. ಮತ್ತು ಇದೇ ಮೊದಲೇ ಪ್ಲಾನ್ ಮಾಡಿದ ಕೆಲಸವಾಗಿರುತ್ತದೆ.
ಆಗ ಹಾಸ್ಟೇಲಿನಲ್ಲಿ ಓರ್ವ ಹೆಣ್ಣುಮಗಳು, ನೋಡಿದ್ರಾ ಹಿಜಬ್ ಹಾಕದವರ ಮೇಲಷ್ಟೇ ದಾಳಿಯಾಗಿದೆ. ಹಿಜಬ್ ಹಾಕಿದವರಿಗೆ ಯಾವ ಗಂಡಸು ಮುಟ್ಟಿಲ್ಲ. ಯಾಕಂದ್ರೆ ನಮ್ಮನ್ನು ಅಲ್ಲಾಹ್ ಕಾಪಾಡುತ್ತಾನೆ ಎಂದು ಹೇಳುತ್ತಾಳೆ. ಇದೀಗ ಇದೇ ಡೈಲಾಗ್ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾತನಾಡಿದ ನಿರ್ದೇಶಕರು, ಇದು ನಿಜ ಘಟನೆಯ ಆಧಾರಿತವಾದ ಚಿತ್ರ ಎಂದಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗ, ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಮತ್ತೆ ಮದುವೆ ಟೀಸರ್ ರಿಲೀಸ್: ನರೇಶ್-ಪವಿತ್ರಾ ಲಾಡ್ಜ್ ದೃಶ್ಯ ರಿಕ್ರಿಯೇಟ್..
ನಟಿ ಅನುಷ್ಕಾ ಶೆಟ್ಟಿಗೆ ಫ್ರೀ ಬ್ಲೂಟಿಕ್ ಮಾರ್ಕ್ ಕೊಟ್ಟ ಎಲಾನ್ ಮಸ್ಕ್..