Wednesday, April 24, 2024

Latest Posts

ಕೆಜಿಎಫ್ ವರ್ಸಸ್ ಬೀಸ್ಟ್..? ಯಾರಾಗ್ತಾರೆ ಬೆಸ್ಟ್..?

- Advertisement -

ಸದ್ಯಕ್ಕಂತೂ ಈ ಇಬ್ಬರದ್ದೇ ಹವಾ..! ಕೆಜಿಎಫ್ ಚಾಪ್ಟರ್-೨ ಅಂದಮೇಲೆ ಅದರ ಮೇಲಿರೋ ಎಕ್ಸ್ಪೆಕ್ಟೇಷನ್ ದೊಡ್ಡದೇ ಆದರೆ ಈಗ ಬಂದಿರೋ ಬೀಸ್ಟ್ ನಮ್ಮ ಹವಾನೂ ಬೇರೆ ಲೆವೆಲ್‌ಗೇ ಇರುತ್ತೆ ಅಂತ ಸೂಚನೆ ಕೊಟ್ಟಿದೆ. ೪ ಕೋಟಿ ವೀಕ್ಷಣೆಯತ್ತ ಮುನ್ನುಗ್ಗಿರೋ ಬೀಸ್ಟ್ ತಮಿಳು ಸ್ಟಾರ್ ನಟ ವಿಜಯ್ ಇಂಡಿಯಾ ಸಿನಿಮಾ. ತಮಿಳಿನ ಚಾಲೆಂಜಿAಗ್‌ಸ್ಟಾರ್ ಅಂತ ಕರೆಯಬಹುದಾದಷ್ಟು ಹಾರ್ಡ್ಕೋರ್ ಫ್ಯಾನ್‌ಬೇಸ್ ಹೊಂದಿರೋ ಇಳೆಯದಳಪತಿ ವಿಜಯ್ ಬೀಸ್ಟ್ ಕೆಜಿಎಫ್‌ಗೆ ಸವಾಲೊಡ್ಡುತ್ತಾ ಅನ್ನೋ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಿದೆ..
ಫ್ಲೋ

ಅಣ್ತಮ್ಮಾ, ನಾವ್ ಬರೋರ‍್ಗೂ ಮಾತ್ರ ಬೇರೆಯವ್ರ ಹವಾ ಅಂದಿದ್ದ ರಾಕಿಭಾಯ್ ಕೆಜಿಎಫ್ ಚಾಪ್ಟರ್ ೧ ಬಂದಾಗ ಬಾಲಿವುಡ್ ಬಾದ್‌ಷಾ ಕಿಂಗ್ ಖಾನ್‌ರನ್ನೇ ಜೀರೋ ಮಾಡಿದ್ರು. ನಿಮ್ಮ ಸಿನಿಮಾ ಬಾಲಿವುಡ್ ಬಿಗ್‌ಸ್ಟಾರ್ ಶಾರುಖ್ ಸಿನಿಮಾ ಮುಂದೆ ರ‍್ತಿದೆಯಲ್ಲಾ ಅಂದಿದ್ದಕ್ಕೆ ನಾನೂ ಶಾರುಖ್ ಫ್ಯಾನ್ ಅಂತ ಹೇಳಿದ್ರು. ಶಾರುಖ್ ಖಾನ್ ಜೀರೋದಲ್ಲಿ ಹೀರೋ ಆಗಲೇ ಇಲ್ಲ.

ಇನ್ನು ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಕೂಡ ಕೆಜಿಎಫ್ ಜೊತೆಗೆ ಬರೋದಾಗಿ ಡೇಟ್ ಫಿಕ್ಸ್ ಮಾಡಿಕೊಂಡಿದ್ರು. ಆದ್ರೆ ಅಣ್ತಮ್ಮನ ಮುಂದೆ ಬಂದ್ರೆ ಯಾಕೆ ಮಕಾಡೆ ಮಲ್ಗೋದು ಅಂತಾನೋ ಏನೋ ಡೇಟ್ ಚೇಂಜ್ ಮಾಡ್ಕೊಂಡ್ರು.. ಸದ್ಯ ಬೀಸ್ಟ್ ಬಂದೇ ರ‍್ತೀವಿ ಅಂತ ರೆಡಿಯಾಗ್ತಿದ್ದಾರೆ. ಕೆಜಿಎಫ್ ಸುನಾಮಿ ಮುಂದೆ ಬೀಸ್ಟ್ ಕಥೆ ವೂಸ್ಟ್ ಆಗುತ್ತಾ..? ಗೊತ್ತಿಲ್ಲ.

ಸದ್ಯಕ್ಕಂತೂ ಈ ಇಬ್ಬರದ್ದೇ ಹವಾ..! ಕೆಜಿಎಫ್ ಚಾಪ್ಟರ್-೨ ಅಂದಮೇಲೆ ಅದರ ಮೇಲಿರೋ ಎಕ್ಸ್ಪೆಕ್ಟೇಷನ್ ದೊಡ್ಡದೇ ಆದರೆ ಈಗ ಬಂದಿರೋ ಬೀಸ್ಟ್ ನಮ್ಮ ಹವಾನೂ ಬೇರೆ ಲೆವೆಲ್‌ಗೇ ಇರುತ್ತೆ ಅಂತ ಸೂಚನೆ ಕೊಟ್ಟಿದೆ. ೪ ಕೋಟಿ ವೀಕ್ಷಣೆಯತ್ತ ಮುನ್ನುಗ್ಗಿರೋ ಬೀಸ್ಟ್ ತಮಿಳು ಸ್ಟಾರ್ ನಟ ವಿಜಯ್ ಇಂಡಿಯಾ ಸಿನಿಮಾ. ಇನ್ನೂ ವಿಶೇಷ ಅಂದ್ರೆ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಒಂದು ದಿನದ ಅಂತರದಲ್ಲಿ ರಿಲೀಸ್ ಆಗ್ತಿರೋದು ವಿಶೇಷ. ಯಾರು ಭಾರತದ ಬಾಕ್ಸಾಫೀಸ್ ಸುಲ್ತಾನ್ ಆಗ್ತಾರೆ ಅನ್ನೋ ಕುತೂಹಲ ಇಲ್ಲಿ ಹೆಚ್ಚಿದೆ.

- Advertisement -

Latest Posts

Don't Miss