KGF-2 ಮೇಕಿಂಗ್ ವಿಡಿಯೋಗೆ ದಂಗಾದ ಫ್ಯಾನ್ಸ್..!
ಕೆಜಿಎಫ್-2 ಸಿನಿಮಾನ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊAಡ ಬಳಿಕ ಎಲ್ಲರಿಗೂ ಒಂದು ಕುತೂಹಲ ಬರೋದು ಕಾಮನ್. ಅಷ್ಟೊಂದು ಧೂಳು ಇರೋ ಪ್ರದೇಶದಲ್ಲಿ ಈ ಸಿನಿಮಾವನ್ನ ಹೇಗೆ ಶೂಟ್ ಮಾಡಿದ್ರು. ಸೆಟ್‌ಗಳ ವರ್ಕ್ ಹೇಗೆ ನಡೀತು..ಸಿನಿಮಾಟೋಗ್ರಫರ್‌ಗೆ ಈ ಸಿನಿಮಾ ಶೂಟಿಂಗ್ ಎಷ್ಟು ಚಾಲೆಂಜಿಂಗ್ ಆಗಿತ್ತು ಎಂಬುದು..ಇದಕ್ಕೆ ಉತ್ತರ ಚಿತ್ರತಂಡವೇ ಈಗ ಅಧಿಕೃತವಾಗಿ ಕೊಟ್ಟಿದೆ.
ಹೌದು, ಕೆಜಿಎಫ್-2 DOP ಟೀಂ ಸಿನಿಮಾ ಶೂಟಿಂಗ್‌ನಲ್ಲಾದ ಅನುಭವಗಳನ್ನ ಹೇಳಿಕೊಳ್ಳೋದ್ರ ಜೊತೆಯಲ್ಲಿ ಮೇಕಿಂಗ್ ವಿಡಿಯೋವನ್ನೂ ರಿಲೀಸ್ ಮಾಡಿದ್ದಾರೆ.
ಚಿತ್ರತಂಡದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಿನಿಮಾಟೋಗ್ರಫರ್ ಭುವನ್ ಗೌಡ ಇವ್ರಿಬ್ರದ್ದೂ ಕಿಲ್ಲರ್ ಕಾಂಬಿನೇಶನ್ ಅಂತ ಡಿಓಪಿ ಟೀಂ ಹೇಳಿದೆ. ಅಲ್ಲದೇ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಅಡೆತಡೆಗಳಾದವು, ಬಿಸಿಲು-ಮಳೆ-ಗಾಳಿ ಮಧ್ಯೆಯೂ ಆ ಧೂಳಿನಲ್ಲಿ ಶೂಟಿಂಗ್ ಮಾಡಿದ್ದು ಸ್ವಲ್ಪ ಕಷ್ಟವಾಗಿದ್ರೂ ಜೀವನದಲ್ಲಿ ಮರೆಯಲಾಗದಂತಹ ಅನುಭವಗಳನ್ನ ಈ ಸಿನಿಮಾ ನಮಗೆ ಕೊಟ್ಟಿದೆ ಅಂತಾರೆ DOP ಟೀಂ.
ನಳಿನಾಕ್ಷಿ, ಕರ್ನಾಟಕ ಟಿವಿ