Sunday, September 8, 2024

Latest Posts

ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣದ ಗಂಭೀರ ಆರೋಪ

- Advertisement -

Political News: ಬಿಬಿಎಂಪಿ ಮಾಜಿ ಅಧ್ಯಕ್ಷರು, ಎನ್.ಆರ್.ರಮೇಶ್ ಅವರು ಖರ್ಗೆ ಅಳಿಯ, ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೂರಾರು ಕೋಟಿ ಹಗರಣ ಮಾಡಿದ್ದರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

“ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಶ್ರೀ. ರಾಧಾಕೃಷ್ಣ ದೊಡ್ಡಮನಿಯವರು ಸೇರಿದಂತೆ Founder Trusteeಗಳು ನೂರಾರು ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆಸಿರುವ ಬೃಹತ್ ಹಗರಣ”

1980-81 ರಲ್ಲಿ Ananda Social and Educational Trust (R) ಹೆಸರಿನಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯವು ಮಾಜಿ ಪ್ರಧಾನ ಮಂತ್ರಿ ಶ್ರೀಮತಿ. ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿ. ಶ್ರೀ. ಆರ್. ಗುಂಡೂರಾವ್, ಅಂದಿನ ಕೇಂದ್ರ ಸಚಿವರಾಗಿದ್ದ. ಶ್ರೀ. ವಿ. ಶಂಕರಾನಂದ, ರಾಜ್ಯದ ಸಚಿವರಾಗಿದ್ದ ಶ್ರೀ. ವಿ. ಬಸವಲಿಂಗಪ್ಪ, ಶ್ರೀ. ಬಿ. ರಾಚಯ್ಯ ಮತ್ತು ಶ್ರೀ. ಮಲ್ಲಿಕಾರ್ಜುನ ಖರ್ಗೆಯವರ ಸಹಕಾರದಿಂದ ಪ್ರಾರಂಭವಾಗಿದ್ದು, ಪ್ರಸ್ತುತ Ananda Social and Educational Trust (R) ನ ಅಡಿಯಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜ್, ಮಾತೃಶ್ರೀ ರಮಾಬಾಯಿ ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜು, ಮಾತೃಶ್ರೀ ರಮಾಬಾಯಿ ನರ್ಸಿಂಗ್ ಕಾಲೇಜು ಸೇರಿದಂತೆ ಹಲವಾರು ಉನ್ನತ ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಬೆಂಗಳೂರು ಮಹಾನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಡ ವಿದ್ಯಾರ್ಥಿಗಳು ಸೇರಿದಂತೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಛದಲ್ಲಿ ಅತ್ತ್ಯುನ್ನತ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಒದಗಿಸುವ ಸದುದ್ದೇಶದಿಂದ ಸದರಿ ಸಂಸ್ಥೆಗಳು ಪ್ರಾರಂಭವಾಗಿರುತ್ತವೆ.

ಪ್ರಾರಂಭದಲ್ಲಿ ಸದರಿ ಆನಂದ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಿ (Ananda Social and Educational Trust (R) ಸಂಸ್ಥೆಯ ಸಂಸ್ಥಾಪಕ ಧರ್ಮದರ್ಶಿಗಳಾಗಿದ್ದ ದಿವಂಗತ ಡಾ|| ಎನ್. ಟಿ. ಮೋಹನ್, ದಿವಂಗತ ಶ್ರೀ. ಹೆಚ್. ಎಸ್. ಶಿವಸ್ವಾಮಿ, ದಿವಂಗತ ಡಾ|| ಎಲ್. ಶಿವಲಿಂಗಯ್ಯ ಮತ್ತು ಶ್ರೀ. ವಿ. ಎಸ್. ಕುಬೇರ್ ಮೊದಲಾದವರ ನೇತೃತ್ವದಲ್ಲಿ ಸದರಿ ಸಂಸ್ಥೆ ಪ್ರಾರಂಭವಾಗಿ ಅತ್ತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು.

ಆದರೆ, ಮಾಜಿ ಕೇಂದ್ರದ ಸಚಿವರು ಹಾಗೂ ಪ್ರಸ್ತುತ AICC ಅಧ್ಯಕ್ಷರೂ ಆಗಿರುವ ಶ್ರೀ, ಮಲ್ಲಿಕಾರ್ಜುನ ಖರ್ಗೆ ರವರ ಅಳಿಯರಾದ ಶ್ರೀ. ರಾಧಾಕೃಷ್ಣ ದೊಡ್ಡಮನಿ, ದಿವಂಗತ ಶ್ರೀ. ಹೆಚ್. ಎಸ್. ಶಿವಸ್ವಾಮಿ ಯವರ ಮಗ ಶ್ರೀ. ಹೆಚ್. ಎಸ್ ಮಹದೇವ ಪ್ರಸಾದ್ ರವರು ಮತ್ತು ದಿವಂಗತ ಡಾ|| ಎನ್. ಟಿ. ಮೋಹನ್ ರವರ ಮಗ ಡಾ|| ಎನ್. ಟಿ. ಮುರಳಿ ಮೋಹನ್ ರವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸದರಿ ಡಾ|| ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯದ ಧರ್ಮದರ್ಶಿಗಳಾಗಿ ತಮ್ಮ ತಮ್ಮ ಪ್ರಭಾವಗಳನ್ನು ಬಳಸಿ ಅಧಿಕಾರ ವಹಿಸಿಕೊಂಡ ನಂತರ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಡಾ|| ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷ ನೂರಾರು ಕೋಟಿ ರೂಪಾಯಿಗಳ ಅಕ್ರಮಗಳು ಯಾವುದೇ ಎಗ್ಗಿಲ್ಲದೇ ನಡೆಯುತ್ತಿವೆ.

ಅದರಲ್ಲೂ ವಿಶೇಷವಾಗಿ 2013 ರಲ್ಲಿ NEET ಪ್ರಾರಂಭವಾಗುವವರೆಗೆ 2008-09 ರಿಂದ 2012-13 ರವರೆಗಿನ 05 ವರ್ಷಗಳ ಅವಧಿಯಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಡಾ|| ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರಗಳು ನಡೆದಿರುವುದು ದಾಖಲೆಗಳ ಸಹಿತ ಬಯಲಾಗಿದ್ದು, ಈ ಸಂಬಂಧ ಡಾ|| ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯದ ನೌಕಕರ ಸಂಘದ ಸದಸ್ಯರು ಸೇರಿದಂತೆ ಹಲವಾರು ಹೋರಾಟಗಾರರು ಮತ್ತು ಸ್ವತಃ ಆಡಳಿತ ಮಂಡಳಿಯ ಕೆಲವು ನಿಷ್ಠಾವಂತ ಸದಸ್ಯರು ರಾಜ್ಯದ ಗೌರವಾನ್ವಿತ ರಾಜ್ಯಪಾಲರಿಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಹಲವಾರು ಬಾರಿ ದಾಖಲೆಗಳ ಸಹಿತ ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಶ್ರೀ. ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ಶ್ರೀ. ರಾಧಾಕೃಷ್ಣ ದೊಡ್ಡಮನಿ, ಶ್ರೀ. ಹೆಚ್. ಎಸ್. ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್, ಶ್ರೀ. ಗುರಪ್ಪಾಜಿ, ಶ್ರೀ. ವಿ. ಎಸ್. ಕುಬೇರ್ ರವರುಗಳು ಸದರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಾಲ್ಕನೇ ದರ್ಜೆ ನೌಕರನಾಗಿದ್ದ ಅಮಾನುಲ್ಲಾ ಖಾನ್ ಎಂಬ ಪರಮ ಭ್ರಷ್ಟನನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಿಕೊಂಡ ನಂತರ ಸದರಿ ಸಂಸ್ಥೆಯಲ್ಲಿ ಸಾವಿರಾರು ಕಾನೂನು ಬಾಹಿರ ಚಟುವಟಿಕೆಗಳು ನಡೆದಿರುತ್ತವೆ.

2008-09 ರಿಂದ ಈವರೆವಿಗೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, Management Quota ಅಡಿಯಲ್ಲಿ ನಡೆದಿರುವ ಅಕ್ರಮಗಳು ಸಾವಿರಾರು ಸಂಖ್ಯೆಯಲ್ಲಿ ಇರುತ್ತವೆ.

ನಾಲ್ಕನೇ ದರ್ಜೆ ನೌಕರನಾಗಿದ್ದ ಅಮಾನುಲ್ಲಾ ಖಾನ್ ಸದರಿ ಶಿಕ್ಷಣ ಸಂಸ್ಥೆಗಳ Public Relation Officer ಆಗಿ ನಿಯೋಜನೆಗೊಂಡ ನಂತರ ಬೇರೆ ಬೇರೆ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪ್ರಭಾವಿ ಮತ್ತು ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳಿಗೆ ಜಾರ್ಖಂಡ್ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಆಯಾ ರಾಜ್ಯ ಸರ್ಕಾರಗಳಿಂದ ಅನುಮೋದನೆ ಪಡೆಯದ ಖಾಸಗಿ ಕಾಲೇಜುಗಳಿಂದ ದ್ವಿತೀಯ ಪಿಯುಸಿ ತೇರ್ಗಡೆಯಾದ ನಕಲಿ ಪ್ರಮಾಣಪತ್ರಗಳನ್ನು ಕೊಡಿಸಿ, ಅಂತಹ ಪ್ರಭಾವಶಾಲಿ ಅನುತ್ತೀರ್ಣ / ಅನರ್ಹ ವಿದ್ಯಾರ್ಥಿಗಳಿಗೆ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ತರಗತಿಗಳಿಗೆ ಪ್ರವೇಶವನ್ನು ಕೊಡಿಸಿರುತ್ತಾರೆ.

ಇಂತಹ ಪ್ರಭಾವಶಾಲಿ ಅನುತ್ತೀರ್ಣ / ಅನರ್ಹ ವಿದ್ಯಾರ್ಥಿಗಳಿಂದ ಪ್ರತಿಯೊಂದು ಎಂಬಿಬಿಎಸ್ ಪ್ರವೇಶಕ್ಕೆ ಕನಿಷ್ಠ ಒಂದು ಕೋಟಿಯಿಂದ ಎರಡು ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು Donation ಹೆಸರಿನಲ್ಲಿ ವಸೂಲಿ ಮಾಡಿರುತ್ತಾರಲ್ಲದೇ, ಅಂತಹ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಶೇಕಡಾ ನೂರಕ್ಕೆ ನೂರರಷ್ಟು Internal Marks ಗಳನ್ನು ಕೊಡಿಸಲು ಲಕ್ಷಾಂತರ ರೂಪಾಯಿಗಳನ್ನು ಪಡೆಯುವ ಮೂಲಕ ಸಮಾಜಕ್ಕೆ ಬೃಹತ್ ಪ್ರಮಾಣದ ದ್ರೋಹವನ್ನು ಬಗೆದಿರುತ್ತಾರೆ !!!

ಇದಲ್ಲದೇ, 2012-13 ರವರೆಗಿನ ಅವಧಿಯಲ್ಲಿ COMED – K ಪ್ರವೇಶ ಪರೀಕ್ಷೆಯಲ್ಲದೇ KRLMPCAET (KARNATAKA RELIGIOUS AND LINGUISTIC MINORITY PROFESSIONAL COLLEGES ASSOCIATION) ವತಿಯಿಂದ ನಡೆಯುವ ಪ್ರವೇಶ ಪರೀಕ್ಷೆಗಳನ್ನು ಬರೆದಂತೆ ದಾಖಲೆಗಳನ್ನು ಸೃಷ್ಟಿಸುವ ಮೂಲಕ ನೂರಾರು ಕಾನೂನು ಬಾಹಿರ ಕಾರ್ಯಗಳನ್ನು ಸದರಿ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಶ್ರೀ.ರಾಧಾಕೃಷ್ಣ ದೊಡ್ಡಮನಿಯವರ ನೇತೃತ್ವದಲ್ಲಿ ನಡೆಸಿರುತ್ತಾರೆ !!!

ಉದಾಹರಣೆಗೆ, ಅಕ್ಷಯ್ ರಾಜೀವ್ ಶ್ರೀನಿವಾಸ್ S/o ಶ್ರೀನಿವಾಸ್ ಜಿ. ಎಂಬ ವಿದ್ಯಾರ್ಥಿಯು ಬೆಂಗಳೂರಿನ Lowry Memorial PU College, ದೂರವಾಣಿ ನಗರ, ಬೆಂಗಳೂರು – ಸದರಿ ಶಿಕ್ಷಣ ಸಂಸ್ಥೆಯಲ್ಲಿ 24/07/2006 ರಂದು ಪ್ರವೇಶ ಪಡೆದು 2008 ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿರುತ್ತಾನೆ. ಅಂತಿಮವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಕ್ಷಯ್ ರಾಜೀವ್ ಶ್ರೀನಿವಾಸ್ ಎಂಬ ವಿದ್ಯಾರ್ಥಿಯು ಕನ್ನಡ ಭಾಷೆಯಲ್ಲಿ 19, ಭೌತಶಾಸ್ತ್ರ (Physics) ದಲ್ಲಿ 07, ರಾಸಾಯನ ಶಾಸ್ತ್ರ (Chemistry) ದಲ್ಲಿ 19, ಗಣಿತ (Mathematics) ದಲ್ಲಿ 08 ಮತ್ತು ಜೀವಶಾಸ್ತ್ರ (Biology) ದಲ್ಲಿ 14 ಅಂಕಗಳನ್ನು ಪಡೆದು ಒಟ್ಟಾರೆಯಾಗಿ 127 ಅಂಕಗಳನ್ನು ಪಡೆದು ಅನುತ್ತೀರ್ಣವಾಗಿರುತ್ತಾನೆ. ಮತ್ತೆ 2009 ರಲ್ಲಿ ಎರಡನೇ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದ ಅಕ್ಷಯ್ ರಾಜೀವ್ ಶ್ರೀನಿವಾಸ್ ಎಂಬ ವಿದ್ಯಾರ್ಥಿ Physics – 15, Chemistry – 18, Mathematics – 07, Biology – 35 ಅಂಕಗಳನ್ನು ಪಡೆದು ಒಟ್ಟಾರೆ 173 ಅಂಕಗಳನ್ನು ಪಡೆದು ಪುನಃ ಅನುತ್ತೀರ್ಣರಾಗಿರುತ್ತಾರೆ.

ಆದರೆ. ಅದೇ ಅಕ್ಷಯ್ ರಾಜೀವ್ ಶ್ರೀನಿವಾಸ್ನಿುಗೆ ಡಾ|| ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಅಮಾನುಲ್ಲಾ ಖಾನ್ ಎಂಬಾತ 2008 ರ ಮೇ ತಿಂಗಳಿನಲ್ಲಿ ಜಾರ್ಖಂಡ್ ರಾಜ್ಯದ ರಾಜಾ ಶಿವಪ್ರಸಾದ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಸಿಕೊಟ್ಟು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ನಕಲಿ Marks Card ಅನ್ನು ಕೊಡಿಸುವುದರಲ್ಲಿ ಯಶಸ್ವಿಯಾಗುತ್ತಾನೆ.

ಈ ನಕಲಿ ಅಂಕಪಟ್ಟಿಯನ್ನು ಇಟ್ಟುಕೊಂಡು ಕೋಟ್ಯಾಂತರ ರೂಪಾಯಿ ಪಡೆದು ಅಕ್ಷಯ್ ರಾಜೀವ್ ಶ್ರೀನಿವಾಸನಿಗೆ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರೆತ ನಂತರ ಆತನ ಪ್ರವೇಶದ ಅನುಮೋದನೆಗಾಗಿ 13/12/2009 ರಂದು Rajiv Gandhi University of Health Sciences ನ Registrar ಗೆ ಕಳುಹಿಸಿದಾಗ ಅಂದಿನ RGUHS Karnataka ದ Registrar ಆಗಿದ್ದ ಡಾ|| ವಸಂತ್ ಕುಮಾರ್ ರವರು ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದು “ಅಕ್ಷಯ್ ರಾಜೀವ್ ಶ್ರೀನಿವಾಸ್ ರವರು ಸಲ್ಲಿಸಿರುವ ದಾಖಲೆಗಳು ಸರಿ ಇಲ್ಲದೇ ಇರುವುದರಿಂದ ಅವರ ಪ್ರವೇಶವನ್ನು ಅನುಮೋದನೆ ಮಾಡಲು ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುತ್ತಾರೆ.

ಅದೂ ಅಲ್ಲದೇ, ಶ್ರೀ. ರಾಧಾಕೃಷ್ಣ ದೊಡ್ಡಮನಿ ಮತ್ತು ಅಮಾನುಲ್ಲಾ ಖಾನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ KARNATAKA RELIGIOUS AND LINGUISTIC MINORITY PROFESSIONAL COLLEGES ASSOCIATION (KRLMPCA) ನ ವ್ಯಾಪ್ತಿಗೆ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಒಳಪಡದೇ ಇದ್ದರೂ ಸಹ KRLMPCA ಪ್ರವೇಶ ಪರೀಕ್ಷೆಯಲ್ಲಿ 180 ಅಂಕಗಳಿಗೆ 90 ಅಂಕಗಳನ್ನು ಪಡೆದು ಅಕ್ಷಯ್ ರಾಜೀವ್ ಶ್ರೀನಿವಾಸ್ ರವರು ತೇರ್ಗಡೆಯಾಗಿ Medical Seat ಗೆ ಅರ್ಹತೆ ಇದೆ ಎಂಬ ನಕಲಿ Certificate ಅನ್ನೂ ಸಹ ಸೃಷ್ಟಿಸಿರುತ್ತಾರೆ. ನಂತರ ಇದು ನಕಲಿ Certificate ಎಂದು ಸ್ವತಃ KRLMPCA ಯಿಂದ ಸ್ಪಷ್ಟನೆ ಮತ್ತು ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು Certificate ವ್ಯಾಪ್ತಿಗೆ ಬರುವುದಿಲ್ಲ ಎಂಬ ವಿಷಯವನ್ನು ಸ್ಪಷ್ಟೀಕರಿಸಿರುತ್ತದೆ.

2009-10 ರ ಸಾಲಿನಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆದ 100 ವಿದ್ಯಾರ್ಥಿಗಳ ಪೈಕಿ 99 ವಿದ್ಯಾರ್ಥಿಗಳ ಪಟ್ಟಿಯನ್ನು ಅನುಮೋದಿಸಿದ Rajiv Gandhi University of Health Sciences ನ Registrar ರವರು ಅಕ್ಷಯ್ ರಾಜೀವ್ ಶ್ರೀನಿವಾಸ್ ರವರ ಪ್ರವೇಶವನ್ನು ಮಾತ್ರ ತಿರಸ್ಕರಿಸಿರುತ್ತಾರೆ.

ಆದರೆ, ಅಚ್ಚರಿ ಎಂಬಂತೆ ದಿನಾಂಕ 08/10/2010 ರಂದು ಅದೇ Rajiv Gandhi University of Health Sciences ನ Registrar ಅಗಿದ್ದ ಡಾ|| ವಸಂತ್ ಅವರು ಮತ್ತೊಂದು “ಮರು ಅನುಮೋದನೆ ಪಟ್ಟಿ”ಯನ್ನು ಬಿಡುಗಡೆ ಮಾಡಿ ಅದರಲ್ಲಿ ಅಕ್ಷಯ್ ರಾಜೀವ್ ಶ್ರೀನಿವಾಸ್ ರವರು 2009-10 ರ ಸಾಲಿನ ಎಂಬಿಬಿಎಸ್ ತರಗತಿ ಪ್ರವೇಶಕ್ಕೆ ಅರ್ಹತೆ ಹೊಂದಿರುತ್ತಾರೆ ಎಂಬುದಾಗಿ ಅನುಮಾನಾಸ್ಪದ ಪತ್ರವನ್ನು ಬರೆದಿರುತ್ತಾರೆ.

ಇನ್ನೊಂದು ಅಚ್ಚರಿ ಎಂದರೆ 2008-09 ರ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬೆಂಗಳೂರಿನ Lowry Memorial PU College ನಲ್ಲಿ ಬರೆದು ಅನುತ್ತೀರ್ಣನಾಗಿರುವ ಅಕ್ಷಯ್ ರಾಜೀವ್ ಶ್ರೀನಿವಾಸ್ ಜಾರ್ಖಂಡ್ ರಾಜ್ಯದ ರಾಜಾ ಶಿವಪ್ರಸಾದ್ ಕಾಲೇಜಿನಲ್ಲಿ 2006 ರಲ್ಲೇ ದ್ವಿತೀಯ ಪಿಯುಸಿ ತರಗತಿಗೆ ಪ್ರವೇಶ ಪಡೆದು 2008 ರಲ್ಲಿ ತೇರ್ಗಡೆಯಾಗಿರುವ ನಕಲಿ ದಾಖಲೆಯನ್ನು ಸೃಷ್ಟಿಸಿರುತ್ತಾರೆ !!!

ಈ ಎಲ್ಲಾ ಕಾನೂನು ಬಾಹಿರ ಕಾರ್ಯಗಳಿಗೆ ಶ್ರೀ. ರಾಧಾಕೃಷ್ಣ ದೊಡ್ಡಮನಿ, ಶ್ರೀ. ಗುರಪ್ಪಾಜಿ, ಶ್ರೀ. ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್ ಮತ್ತು ಶ್ರೀ. ವಿ. ಎಸ್. ಕುಬೇರ್ ಅವರಿಗೆ ಅಮಾನುಲ್ಲಾ ಖಾನ್ ಎಂಬ ಭ್ರಷ್ಟ ಎಲ್ಲಾ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕಾರಿಯಾಗಿ ನಿಂತಿರುತ್ತಾನೆ.

ಸದರಿ ಡಾ|| B. R. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು M. R. ಅಂಬೇಡ್ಕರ್ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಳೆದ 15 ವರ್ಷಗಳಿಂದಲೂ ಪ್ರತೀ ವರ್ಷ ಇಂತಹ ಹತ್ತಾರು ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ !!!

ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ನಾಲ್ಕನೇ ದರ್ಜೆಯ ನೌಕರನಾಗಿದ್ದ ಅಮಾನುಲ್ಲಾ ಖಾನ್ ಪ್ರಸ್ತುತ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಸುಮಾರು 500 ಕೋಟಿ ರೂಪಾಯಿಗಳಷ್ಟು ವೆಚ್ಛದಲ್ಲಿ ತನ್ನದೇ ಆದ ಮೆಡಿಕಲ್ ಕಾಲೇಜನ್ನು ಸ್ವತಃ ಪ್ರಾರಂಭಿಸುತ್ತಿದ್ದಾನೆ !!!

ಸದರಿ ಡಾ|| ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾ ವಿದ್ಯಾಲಯದ ಆಡಳಿತ ಮಂಡಳಿಯ ದುರಾಡಳಿತದ ವಿರುದ್ಧ ಅಲ್ಲಿನ ನೌಕರರ ಸಂಘ ಸತತ 06 ತಿಂಗಳ ಹೋರಾಟ ಮಾಡಿದ ಫಲವಾಗಿ ಅಂದಿನ ರಾಜ್ಯ ಸರ್ಕಾರ 2004 ರಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿತ್ತು.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ. ಎಸ್. ಆರ್. ವೆಂಕಟೇಶ್ ಮೂರ್ತಿ ರವರು ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ನಂತರ 2008-09 ರಲ್ಲಿ ಶ್ರೀ. ಬಿ. ಎಲ್. ನಂಜುಂಡಸ್ವಾಮಿ, ಶ್ರೀ. ಎಂ ಕೆ. ಕೆಂಪಸಿದ್ದಯ್ಯ, ಶ್ರೀ. ಎಂ. ಗುರಪ್ಪಾಜಿ ಮತ್ತು ಶ್ರೀ. ವಿ. ಎಸ್. ಕುಬೇರ್ ಎಂಬ ಈ ನಾಲ್ವರನ್ನು ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು, ಡಾ|| ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜು ಮತ್ತು ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನಿಯೋಜಿಸಿರುತ್ತಾರೆ. ಈ ಪೈಕಿ ಶ್ರೀ. ಬಿ. ಎಲ್. ನಂಜುಂಡಸ್ವಾಮಿ ಮತ್ತು ಶ್ರೀ. ಎಂ. ಕೆ. ಕೆಂಪಸಿದ್ಧಯ್ಯನವರು ಈಗಾಗಲೇ ಮೃತರಾಗಿರುವುದರಿಂದ ಇನ್ನುಳಿದ ಇಬ್ಬರು ಟ್ರಸ್ಟಿಗಳಾದ ಶ್ರೀ. ಎಂ. ಗುರಪ್ಪಾಜಿ ಮತ್ತು ಶ್ರೀ. ವಿ. ಎಸ್. ಕುಬೇರ್ ಅವರ ಆಶಯದಂತೆ ಮತ್ತು ಶ್ರೀ. ಮಲ್ಲಿಕಾರ್ಜುನ ಖರ್ಗೆ ಯವರ ಪ್ರಭಾವಕ್ಕೆ ಒಳಗಾಗಿ ಅವರ ಅಳಿಯ ಶ್ರೀ. ರಾಧಾಕೃಷ್ಣ ದೊಡ್ಡಮನಿ ಯವರನ್ನು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಮತ್ತು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ಮಂಡಳಿಯ ಧರ್ಮದರ್ಶಿಗಳಾಗಿ ನೇಮಕ ಮಾಡಲಾಗಿರುತ್ತದೆ !!!

ಅದಲ್ಲದೇ, ದಿವಂಗತ ಶ್ರೀ. ಹೆಚ್. ಎಸ್. ಶಿವಸ್ವಾಮಿ ಯವರ ಮಗ ಶ್ರೀ. ಹೆಚ್. ಎಸ್. ಮಹದೇವ ಪ್ರಸಾದ್, ದಿವಂಗತ ಡಾ|| ಎನ್. ಟಿ. ಮೋಹನ್ ರವರ ಮಗ ಡಾ|| ಎನ್. ಟಿ. ಮುರಳಿ ಮೋಹನ್ ರವರನ್ನೂ ಸಹ ಜಂಟಿ ಧರ್ಮದರ್ಶಿ (Joint Trustee) ಗಳಾಗಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನೇಮಕ ಮಾಡಿಕೊಳ್ಳಲಾಗಿರುತ್ತದೆ !!!

AICC ಅಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಶ್ರೀ. ರಾಧಾಕೃಷ್ಣ ದೊಡ್ಡಮನಿಯವರ ಅಂಧಾ ದರ್ಭಾರ್ ಯಾವ ರೀತಿಯಲ್ಲಿದೆ ಎಂದರೆ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿ ಎಂಬಿಬಿಎಸ್ ಪದವಿವನ್ನು ಪಡೆಯಲು 09 ವರ್ಷ (18 ಪ್ರಯತ್ನಗಳು) ಗಳಷ್ಟು ಸುಧೀರ್ಘ ಕಾಲ ತೆಗೆದುಕೊಂಡಿದ್ದ ದಿವಾಕರ್ ಎಂಬ ವೈದ್ಯಕೀಯ ವೃತ್ತಿ ಮಾಡಲು ನಾಲಾಯಕ್ ಆಗಿರುವ ವ್ಯಕ್ತಿಯನ್ನು ಅದೇ ಕಾಲೇಜಿನ Professor ಆಗಿ ನೇಮಕ ಮಾಡಿಕೊಳ್ಳಲಾಗಿರುತ್ತದೆ. Professor ಆದ ನಂತರ ಅನುಮಾನಾಸ್ಪದವಾಗಿ ಇದೇ ದಿವಾಕರ್ ರವರು MD ಪದವಿಯನ್ನು ಇದೇ ಕಾಲೇಜಿನಿಂದ ಪಡೆದುಕೊಂಡಿರುತ್ತಾರೆ !!!

ಯಾವುದೇ ಬೋಧನಾ ಅನುಭವ ಇಲ್ಲದೇ ಇದ್ದರೂ ಸಹ ಸದರಿ ಸಂಸ್ಥೆಯಲ್ಲಿ CMO (Chief Medical Officer), RMO (Resident Medical Officer), Medical Superintendent ಮತ್ತು Vice Principal ಗಳ ಹುದ್ದೆಗಳಿಗೆ ಹತ್ತಾರು ಲಕ್ಷ ರೂಪಾಯಿಗಳಷ್ಟು ಲಂಚವನ್ನು ಪಡೆದು ನೇಮಕ ಮಾಡಿಕೊಳ್ಳಲಾಗಿರುತ್ತದೆ.

ಇಂತಹ ನೂರಾರು ಅಕ್ರಮಗಳ ಕೂಪವಾಗಿರುವ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ. ರಾಧಾಕೃಷ್ಣ ದೊಡ್ಡಮನಿ, ಶ್ರೀ. ಗುರಪ್ಪಾಜಿ, ಶ್ರೀ. ಹೆಚ್. ಎಸ್. ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್, ಶ್ರೀ. ವಿ. ಎಸ್. ಕುಬೇರ್ ಮತ್ತು ಶ್ರೀ. ಅಮಾನುಲ್ಲಾ ಖಾನ್ ರವರು 2008-09 ರಿಂದ ಈವರೆವಿಗೆ ಪ್ರತೀ ವರ್ಷ ಕನಿಷ್ಠ 25 ಕ್ಕೂ ಹೆಚ್ಚು ಪ್ರಭಾವಶಾಲಿ ಮತ್ತು ಶ್ರೀಮಂತ ಅನರ್ಹ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ತರಗತಿಗಳಿಗೆ ಕೋಟ್ಯಾಂತರ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಪಡೆದು ಪ್ರವೇಶವನ್ನು ಕೊಡಿಸುವ ಕಾನೂನು ಬಾಹಿರ ಕಾರ್ಯವನ್ನು ಮಾಡುತ್ತಿರುತ್ತಾರೆ. ಅಲ್ಲದೇ, ಈ ರೀತಿ ಶ್ರೀಮಂತ ವಿದ್ಯಾರ್ಥಿಗಳಿಂದ ಕೋಟ್ಯಾಂತರ ರೂಪಾಯಿ ಹಣವನ್ನು Donation ಹೆಸರಿನಲ್ಲಿ ಪಡೆದ ಇವರುಗಳು Ananda Social and Educational Trust (R) ಗೆ ನೂರಾರು ಕೋಟಿ ರೂಪಾಯಿಗಳಷ್ಟು ಹಣವನ್ನು ವಂಚಿಸಿರುತ್ತಾರೆ.

ಈ ಸಂಬಂಧ ಈಗಾಗಲೇ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಡಾ|| ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನ ನೌಕರರ ಸಂಘದ ಪದಾಧಿಕಾರಿಗಳು ಹಲವಾರು ಬಾರಿ ರಾಜ್ಯದ ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ, ಘನತೆವೆತ್ತ ರಾಜ್ಯಪಾಲರಿಗೆ ದಾಖಲೆಗಳ ಸಹಿತ ದೂರುಗಳನ್ನೂ ಸಹ ನೀಡಿರುತ್ತಾರೆ. ಅಲ್ಲದೇ, ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನೂ ಸಹ ದಾಖಲಿಸಿರುತ್ತಾರೆ. ಆದರೆ, ಅತ್ಯಂತ ಪ್ರಭಾವಶಾಲಿಗಳಾಗಿರುವ ಶ್ರೀ. ರಾಧಾಕೃಷ್ಣ ದೊಡ್ಡಮನಿ ಮತ್ತವರ ಸಹಚರರು ಕಾನೂನಿನಲ್ಲಿರುವ ಲೋಪದೋಷಗಳನ್ನು ತಮಗೆ ಬೇಕಾದ ಹಾಗೆ ಪರಿವರ್ತಿಸಿಕೊಂಡು ಕಾನೂನಿಗೆ ಮಣ್ಣೆರೆಚುವ ಕೆಲಸವನ್ನು ಮಾಡುತ್ತಿರುತ್ತಾರೆ.

ತಮ್ಮದು ನಿಷ್ಪಕ್ಷಪಾತವಾದ ರಾಜಕಾರಣವೇ ಆಗಿದ್ದಲ್ಲಿ ಅವಕಾಶ ಸಿಗಬೇಕಾದ ಸಾವಿರಾರು ಅರ್ಹ ವಿದ್ಯಾರ್ಥಿಗಳಿಗೆ ವಂಚನೆ ಮಾಡಿ ಪ್ರಭಾವಿ ಶ್ರೀಮಂತ ಕುಟುಂಬಗಳಿಂದ ಬಂದ ಅನುತ್ತೀರ್ಣ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಇಲ್ಲದ ವಿದ್ಯಾರ್ಥಿಗಳಿಗೆ ತಮ್ಮ ಪ್ರಭಾವಗಳನ್ನು ಬಳಸಿ ಬೇರೆ ಬೇರೆ ರಾಜ್ಯಗಳ ಅನಾಮಿಕ ಕಾಲೇಜುಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರುವ ಧೃಢೀಕರಣ ಪತ್ರಗಳನ್ನು ಕೊಡಿಸಿ, ಪ್ರತಿಯೊಬ್ಬರಿಂದ 02 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು Donation ರೂಪದಲ್ಲಿ ಪಡೆದು ಹಾಗೂ Rajiv Gandhi University of Health Sciences (RGUHS) ನ ನಿಯಮಗಳಿಗೆ ವಿರುದ್ಧವಾಗಿ ಅರ್ಹತೆ ಇಲ್ಲದ ವಿದ್ಯಾರ್ಥಿಗಳಿಗೆ MBBS / BDS ಪದವಿ ತರಗತಿಗಳಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವ / ಮಾಡಿಕೊಡುತ್ತಿರುವ ಡಾ|| ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶ್ರೀ. ರಾಧಾಕೃಷ್ಣ ದೊಡ್ಡಮನಿ, ಶ್ರೀ. ಗುರಪ್ಪಾಜಿ, ಶ್ರೀ. ಮಹದೇವ ಪ್ರಸಾದ್, ಡಾ|| ಎನ್. ಟಿ. ಮುರಳಿ ಮೋಹನ್, ಶ್ರೀ. ವಿ. ಎಸ್. ಕುಬೇರ್ ಹಾಗೂ ಶ್ರೀ. ಅಮಾನುಲ್ಲಾ ಖಾನ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು / ಆಡಳಿತ ಮಂಡಳಿಯ ಧರ್ಮದರ್ಶಿಗಳ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಕಳೆದ 15 ವರ್ಷಗಳಿಂದ ರಾಜ್ಯದ ಮೆಡಿಕಲ್ ಕಾಲೇಜು ಇತಿಹಾಸದಲ್ಲಿಯೇ ಅತೀ ದೊಡ್ಡ ಈ ಹಗರಣದ ತನಿಖೆಯನ್ನು CBI ಅಥವಾ CID ಗೆ ವಹಿಸುವಂತೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರನ್ನು ಆಗ್ರಹಿಸಲಾಗಿದೆ.

ಅಲ್ಲದೇ, ಈ ಬೃಹತ್ ಹಗರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸುವಂತೆಯೂ ಸಹ ಆಗ್ರಹಿಸಲಾಗಿದೆ.

AICC ಅಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಶ್ರೀ. ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಈ ಬೃಹತ್ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ತಪ್ಪಿತಸ್ಥರ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ 960 ಪುಟಗಳಷ್ಟು ಸಂಪೂರ್ಣ ದಾಖಲೆಗಳ ಸಹಿತ CBI ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳಲ್ಲಿ ದೂರುಗಳನ್ನು ದಾಖಲಿಸಲಾಗಿದೆ.

– ರಮೇಶ್ ಎನ್. ಆರ್.
ಮಾಜಿ ಅಧ್ಯಕ್ಷರು,
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ
ಹಾಗೂ
ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

ನಿಜವಾಗ್ಲೂ ಅಕ್ಷಯ ತೃತೀಯಕ್ಕೆ ಚಿನ್ನಕೊಂಡರೆ, ಚಿನ್ನ ಅಕ್ಷಯವಾಗತ್ತಾ..? ಶ್ರೀಮಂತಿಕೆ ಬರತ್ತಾ..?

ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡುತ್ತಾರೆ: ತಮ್ಮದೇ ಪಕ್ಷದವರಿಗೆ ಬಾಯಿತಪ್ಪಿ ಬೈದ ನಟಿ ಕಂಗನಾ

ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಹೆಚ್.ಡಿ.ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಹೆಸರು ಬಳಸುವ ಹಾಗಿಲ್ಲ..

- Advertisement -

Latest Posts

Don't Miss