ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಮಾತನಾಡಿದ್ದು, ಯ್ಯೂಟೂಬರ್ಸ್ ಕೇಳಿರುವ ಪ್ರಶ್ನೆಗೆ ಪಟಾ ಪಟ್ ಉತ್ತರ ನೀಡಿದ್ದಾರೆ.
ಸಿನಿಮಾ ಅಂದ್ರೆ..?
ಲೈಫ್
ಸುದೀಪ್ ಸರ್‌ಗೆ ಇರುವ ಗುಡ್ ಶೋಕಿ ಏನು…?
ಕುಕಿಂಗ್.
ಎಲ್ಲರಿಗೂ ಕುಕ್ ಮಾಡಿ ತಿನ್ನಿಸೋ ನಿಮಗೆ ಯಾವ ಫುಡ್ ಇಷ್ಟ..?
ನನಗೆ ಇಂಥದ್ದೇ ಇಷ್ಟ ಅಂತೇನಿಲ್ಲಾ. ಯಾಕಂದ್ರೆ ನಾನು ಫುಡಿ ಅಲ್ಲ. ಆದ್ರೆ ನನಗೆ ನಮ್ಮಮ್ಮ ಮಾಡೋ ಬ್ರೌನ್ ರೈಸ್, ದಾಲ್, ವೆಜಿಟೇಬಲ್ಸ್ ಅಂದ್ರೆ ಇಷ್ಟ. ಆದ್ರೆ ನನಗೆ ಇಂಥದ್ದೇ ಬೇಕು ಅಂತೇನಿಲ್ಲಾ. ಏನ್ ಕೊಟ್ರೂ ತಿಂತೀನಿ. ಸ್ವೀಟ್ ಐಟಮ್ಸ್, ಫ್ರೈಡ್ ತಿಂಡಿ ಎಲ್ಲಾ ನನಗೆ ಮೊದಲಿನಿಂದಲೂ ಇಷ್ಟವಿಲ್ಲಾ. ನಾನು ಬದುಕೋದಕ್ಕೆ ತಿಂತೀನಿ. ತಿನ್ನೋದಕ್ಕಾಂತೆ ಬದುಕಲ್ಲ.
ರಪ್ ಅಂತಾ ಯಾವ ವಿಷಯಕ್ಕೆ ಕೋಪ ಬರತ್ತೆ..?
ಕೋಪ ಬರುವಂಥದ್ದೇನು ನಡೆದಿಲ್ಲ. ಆದ್ರೆ ಕೋಪ ಮಾಡಿಕೊಳ್ಳೋದು ವೇಸ್ಟ್ ಅನ್ನಿಸುತ್ತೆ. ಯಾಕಂದ್ರೆ ನಮ್ಮ ಕೋಪವನ್ನು ತಡ್ಕೊಳ್ಳೋ ಶಕ್ತಿ ಯಾರಿಗೂ ಇಲ್ಲ.
ತುಂಬಾ ಖುಷಿ ಕೊಡುವ ವಿಷಯವೇನು..?
ಸೈಲೆನ್ಸ್. ನನಗೆ ಕಿರಿಕಿರಿ ಮಾಡಿದ್ರೆ ಇಷ್ಟಾ ಆಗಲ್ಲಾ. ನೀವು ನನ್ನ ಮನೆಯ ಅಕ್ಕ ಪಕ್ಕ ನೋಡ್ತಾ ಇರ್ಬಹುದು. ನನಗೆ ಶಬ್ಧ ಅಂದ್ರೆ ಆಗಲ್ಲ. ಪಾರ್ಟಿ ಆದ್ರೂ ಅಷ್ಟೇ, ಒಂದ್ನಾಲ್ಕು ಜನ ಇರ್ಬೇಕು. ಸುಮ್ಮನೆ ತಮಾಷೆ ಮಾಡ್ತಾ ನಗಾಡ್ತಾ ಕಾಲ ಕಳಿಬೇಕು. ಅದನ್ನು ಬಿಟ್ಟು ಜೋರಾಗಿ ಮ್ಯೂಸಿಕ್ ಹಾಕೋದು, ಹಲವರು ಸೇರಿ ಪಾರ್ಟಿ ಮಾಡೋದು ನನಗಿಷ್ಟಾ ಆಗಲ್ಲ. ಅಲ್ಲದೇ ನಾಲ್ಕು ಜನ ಸೇರಿದಾಗ, ನಾವು ಒಂದೊಳ್ಳೆ ವಿಷಯದ ಬಗ್ಗೆ ನೇ ಮಾತನಾಡಬೇಕು. ಅದನ್ನ ಬಿಟ್ಟು ಬೇರೆಯವರ ಬಗ್ಗೆ ಗಾಸಿಪ್ ಮಾಡುವುದು, ಕಾಲೆಳೆದು ಮಾತನಾಡುವುದೆಲ್ಲ ನನಗಿಷ್ಟವಾಗುವುದಿಲ್ಲ.
ಕಿಚ್ಚನ ಬಳಗ..?
ನೆವರ್ ಎಂಡಿಂಗ್..
ನಿಮ್ಮ ಫ್ಯಾನ್ಸ್‌ಗೆ ನೀವು ಏನು ಹೇಳೋಕ್ಕೆ ಇಷ್ಟಪಡ್ತೀರಾ..?
ನಾನೇನು ಹೇಳೋಕ್ಕೆ ಇಷ್ಟಾ ಪಡಲ್ಲಾ. ನಮ್ಮ ಜನರಿಗೆ ಬುದ್ಧಿ ಇದೆ. ಒಳ್ಳೆಯ ಮನಸ್ಸಿಗೆ. ಅವರಿಗೆ ಇಷ್ಟವಾಗುವ ಹಾಗೆ ಅವರು ಇರಬೇಕು. ಬೇರೆಯವರು ಹೇಳುವ ಅಡ್ವೈಸ್ ಕೇಳಿ ಅವರ ಜೀವನ ಮಾಡಬೇಕಾಗಿಲ್ಲಾ.
ನಿಮಗೆ ಯಾವ ರೀತಿಯ ಸಿನಿಮಾಗಳಿಷ್ಟ..?
ನನಗೆ ಯಾವ ರೀತಿ ಅಂತೆಲ್ಲಾ ಇಲ್ಲಾ. ಎಲ್ಲಾ ರೀತಿಯ ಸಿನಿಮಾ ಇಷ್ಟ. ಸಿನಿಮಾ ಚೆನ್ನಾಗಿದ್ರೆ, ನಾನು ಎಲ್ಲಾ ರೀತಿಯ ಸಿನಿಮಾ ನೋಡ್ತೇನೆ. ನನಗೆ ಹಾರರ್ ಮೂವಿ ಅಂದ್ರೆ ಅಷ್ಟು ಇಷ್ಟವಾಗಲ್ಲ. ಯಾಕಂದ್ರೆ ಹೆದರಿಕೆ ಅಂತಲ್ಲ. ಅದರಲ್ಲಿ ರಿಯಾಲಿಟಿ ಇರೋದಿಲ್ಲಾ. ಮೂವಿ ಚೆನ್ನಾಗಿದ್ದರೂ, ನನಗೆ ಅಷ್ಟು ಇಷ್ಟವಾಗಲ್ಲ.
ಶಿವಮೊಗ್ಗಕ್ಕೆ ಹೋಗಿದ್ರಾ..?(ಫ್ಯಾನ್ಸ್ ಕೇಳಿದ ಪ್ರಶ್ನೆ)
ಸದ್ಯಕ್ಕೆ ಹೋಗಿಲ್ಲಾ. ಹೋಗಬೇಕು. ಕೋವಿಡ್ ಬಂದ ಮೇಲೆ ಹೋಗೋಕ್ಕೆ ಆಗಿಲ್ಲ. ನಂತರ ನಾನು ಸಿನಿಮಾ ಶೂಟಿಂಗ್, ಪ್ರಮೋಶನ್‌ನಲ್ಲಿ ಬ್ಯುಸಿ ಆದೆ. ಇನ್ನು ಕೋವಿಡ್ ಸಮಯದಲ್ಲಿ ನಾನು ಎಲ್ಲೂ ಹೋಗೋಕ್ಕೆ ಆಗಿಲ್ಲ. ನನಗೆ ಪೊಲೀಸರು ಕಾಲ್ ಮಾಡಿ ಹೇಳ್ತಿದ್ರು. ಎಲ್ಲೂ ಹೋಗ್ಬೇಡಿ ಸರ್, ಜನ ಸೇರಿದ್ರೆ ಕೋವಿಡ್ ಕೇಸ್ ಹೆಚ್ಚಾಗುತ್ತದೆ ಅಂತಾ. ಹಾಗಾಗಿ ನಾನೆಲ್ಲೂ ಹೋಗಿಲ್ಲಾ. ಶಿವಮೊಗ್ಗದಲ್ಲಿ ನಮ್ಮ ತೋಟವಿದೆ. ಖಂಡಿತ, ಹೋಗ್ತೀನಿ.
ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್..?
ಬೇರೆಯವರಿಗೆ ಅಡ್ವೈಸ್ ಮಾಡೋದನ್ನ ನಿಲ್ಲಿಸಿ. ನೀವು ಸ್ಟೈಲಿಶ್ ಆಗಿ ಕಾಣಬೇಕು ಅಂದ್ರೆ, ನಿಮ್ಮಲ್ಲಿ ಕಾನ್ಫಿಡೆನ್ಸ್ ಇರಲಿ. ಅದೊಂದು ಇದ್ರೆ ನೀವು ಸದಾ ಚನ್ನಾಗಿ ಕಾಣುತ್ತೀರಾ..