‘ಎಲ್ಲರೂ ಸ್ಟೇಟಸ್ ಹಾಕ್ಲಿ ಅಂತಾ ನಾನು ಮಾತಾಡೋದಿಲ್ಲಾ’

ಕಿಚ್ಚ ಸುದೀಪ್ ಮಾತನಾಡುವ ಕೆಲ ವೀಡಿಯೋ, ಆಡಿಯೋ ತುಣುಕುಗಳನ್ನ ಅವರ ಫ್ಯಾನ್ಸ್ ಸ್ಟೇಟಸ್‌ಗೆ ಹಾಕೋದನ್ನ ನಾವು ನೋಡಿದ್ದೇವೆ. ಅದು ಅರ್ಥಪೂರ್ಣವಾದ ಸ್ಟೇಟಸ್ ಆಗಿರತ್ತೆ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಾನು ಸ್ಟೇಟಸ್ ಹಾಕ್ಲಿ ಅಂತಾನೇ ಮಾತಾಡಲ್ಲ ಅಂತ ಹೇಳಿದ್ದಾರೆ.

ನಾನು ನನಗನಿಸಿದ್ದನ್ನ ಮಾತನಾಡುತ್ತೇನೆ ಹೊರತು. ಸ್ಟೇಟಸ್ ಹಾಕ್ಲಿ ಅಂತ ಮಾತನಾಡುವುದಿಲ್ಲ. ನಾನು ನೆಟ್‌ನಲ್ಲಿ ರಿವ್ಯೂ, ಕಾಮೆಂಟ್ಸ್, ಸ್ಟೇಟಸ್ ಎಲ್ಲಾ ನೋಡೋದಿಲ್ಲಾ. ನಾನು ಬರೀ ಕಾಲ್ ಮಾಡೋಕ್ಕಷ್ಟೇ ನನ್ನ ಮೊಬೈಲ್ ಬಳಕೆ ಮಾಡುತ್ತೇನೆ. ಟ್ವೀಟ್ ಮಾಡೋದಾದ್ರೆ, ಟ್ವೀಟ್ ಮಾಡುತ್ತೇನಷ್ಟೇ. ಅದಕ್ಕೆ ಬಂದ ಕಾಮೆಂಟ್ಸ್ ಓದೋದಾಗ್ಲಿ, ಅದಕ್ಕೆ ರಿಪ್ಲೈ ಮಾಡೋದಾಗ್ಲಿ ಮಾಡೋದಿಲ್ಲಾ ಅಂತಾ ಹೇಳಿದ್ದಾರೆ.

ನಾಲ್ಕು ಜನ ನನ್ನನ್ನು ಹೊಗಳಿದರೆ, ನನಗೆ ಅಹಂ ಬಂದುಬಿಡತ್ತೆ. ಇನ್ಯಾರೋ ನಾಲ್ಕು ಜನ ಕಾಮೆಂಟ್ಸ್‌ನಲ್ಲಿ ನನ್ನನ್ನು ಬೈದರೆ ಅದಕ್ಕೆ ಸಿಟ್ಟಾಗಿ ನಾನು ರಿಪ್ಲೈ ಕೊಟ್ಟರೆ, ಅದು ಮೂರ್ಖತನವಾಗುತ್ತದೆ. ಹಾಗಾಗಿ ನಾನು ಕಾಮೆಂಟ್ಸ್, ಸ್ಟೇಟಸ್ ಎಲ್ಲಾ ನೋಡೋಕ್ಕೆ ಹೋಗಲ್ಲ. ನಾನು ಮಾತನಾಡೋಕ್ಕೂ ಮುನ್ನ ಪ್ರಿಪೇರ್ ಆಗಿ ಬರಲ್ಲ. ಬದಲಾಗಿ ನನಗೆ ಹೇಳಬೇಕು ಅನ್ನಿಸಿದ್ದನ್ನಷ್ಟೇ ನಾನು ಹೇಳುತ್ತೇನೆ. ನಾನು ಏನು ಮಾಡುತ್ತೇನೋ ಅದನ್ನೇ ಹೇಳುತ್ತೇನೆ ಎಂದಿದ್ದಾರೆ.

ನಿಜ ಹೇಳಬೇಕಂದ್ರೆ ವಾಟ್ಸಪ್‌ನಲ್ಲಿ ಸ್ಟೇಟಸ್‌ ಇದೆ ಎಂದು ನನಗೆ ಗೊತ್ತಿರಲಿಲ್ಲ. ಡಿಪಿ ಇದೆ ಅಂತಷ್ಟೇ ನನಗೆ ಗೊತ್ತಿತ್ತು. ನಮ್ಮ ಹುಡುಗರು ಅವರ ಸ್ಟೇಟಸ್ ನೋಡಿ, ಇವರ ಸ್ಟೇಟಸ್‌ ನೋಡಿ ಎಂದು ಹೇಳಿದಾಗ, ರಿಸೆಂಟ್ ಆಗಿ ನನಗೆ ವಾಟ್ಸಪ್‌ನಲ್ಲಿ ಸ್ಟೇಟಸ್ ಇದೆ ಎಂದು ಗೊತ್ತಾಗಿದೆ.

About The Author