ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್ನಲ್ಲಿ ತುಳು ಡೈಲಾಗ್ ಇರುವ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತುಳು ಪ್ರಯೋಗವಿದೆ. ಯಾಕಂದ್ರೆ ನಮ್ಮ ಟೀಂನಲ್ಲಿ ಆಲ್ಮೋಸ್ಟ್ ಎಲ್ಲರಿಗೂ ತುಳು ಬರುತ್ತಿತ್ತು. ಸೆಟ್ನಲ್ಲಿ ಎಲ್ಲರೂ ತುಳುವಿನಲ್ಲೇ ಮಾತನಾಡುತ್ತಿದ್ದರು.
ಮತ್ತು ನಾನು ಬರ್ತಿದ್ದ ಹಾಗೆ, ನನಗೆ ಅರ್ಥವಾಗಲಿ ಎಂದು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅದನ್ನ ನಾನು ಎಂಜಾಯ್ ಮಾಡುತ್ತಿದ್ದೆ. ಯಾಕಂದ್ರೆ ನನ್ನ ತಾಯಿ ಉಡುಪಿಯವರು ಎಂದಿದ್ದಾರೆ. ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ಸುದೀಪ್ ಇದು ಹಾರರ್ ಮೂವಿ ಅಲ್ಲಾ ಅಂತಾ ಹೇಳಿದ್ದಾರೆ. ಇದಕ್ಕೆ ನಾವು ಕರ್ನಾಟಿಕ್ ಟಚ್ ಕೊಟ್ಟಿದ್ದೇವೆ ಅಷ್ಟೇ ಎಂದಿದ್ದಾರೆ.
ವಿಕ್ರಾಂತ್ ರೋಣದಲ್ಲಿ ತಾವು ಇಷ್ಟು ಫಿಟ್ ಆಗಿ ಕಾಣಲು ಕಾರಣವೇನು ಅನ್ನೋ ಬಗ್ಗೆ ಮಾತನಾಡಿದ್ದಾರೆ. ಪೈಲ್ವಾನ್ ಮೂವಿ ಶೂಟಿಂಗ್ಗೂ ಮೊದಲು ಕಿಚ್ಚ ಜಿಮ್ ಮಾಡ್ತಿರ್ಲಿಲ್ಲಾ ಅನ್ನೋ ಬಗ್ಗೆ ಹೇಳಿದ್ದರು. ಆದ್ರೆ ಅದಾದ ಬಳಿಕ ಜಿಮ್ ಕಂಟಿನ್ಯೂ ಮಾಡಿದ್ರು. ಪೈಲ್ವಾನ್ ಗಿಂತ ರೋಣ ಸಿನಿಮಾದಲ್ಲೇ ಸುದೀಪ್ ಹೆಚ್ಚು ಫಿಟ್ ಆಗಿದ್ದಾರಂತೆ.
ಆದ್ರೆ ಕಳೆದ ವರ್ಷ ಕೋವಿಡ್ ಬಂದ ಕಾರಣ, ಕಿಚ್ಚ ವರ್ಕೌಟ್ ಮಾಡೋದನ್ನ ಸ್ವಲ್ಪ ಸಮಯ ಬಿಟ್ಟಿದ್ದರಂತೆ. ಈಗ ಮತ್ತೆ ಜಿಮ್ ಶುರು ಮಾಡಿದ್ದಾರೆ. ಪೈಲ್ವಾನ್ ಶೂಟಿಂಗ್ ಸಮಯದಲ್ಲಿ ನಾನು ಜಿಮ್ ಮಾಡೋಕ್ಕೆ ಶುರು ಮಾಡಿದ್ದು ಈಗ ತುಂಬಾ ಒಳ್ಳೆಯ ರಿಸಲ್ಟ್ ಕೊಟ್ಟಿದೆ. ವಿಕ್ರಾಂತ್ ರೋಣದಲ್ಲಿ ನನ್ನ ಮೈಕಟ್ಟು ಸ್ಲಿಮ್ ಆಗಿ, ಕರೆಕ್ಟ್ ಆಗಿದ್ದೇನೆ ಎಂದಿದ್ದಾರೆ.




