Movie News: ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಬರ್ತ್‌ಡೇಯಾಗಿದ್ದು, ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ, ಸಲ್ಲು ಭಾಯ್‌ಗೆ ಶುಭಾಶಯ ಕೋರಿದ್ದಾರೆ.
ನನ್ನ ಪ್ರೀತಿಯ ಸರ್ ಮತ್ತು ಸಹೋದರರಾದ ಸಲ್ಮಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಜೊತೆ ಕಳೆದ ಪ್ರತೀ ಕ್ಷಣವನ್ನು ಯಾವಾಗಲೂ ಅತ್ಯದ್ಭುತವಾದದ್ದು, ನಿಮ್ಮಂಥ ಅದ್ಭುತ ವ್ಯಕ್ತಿ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ದಬಂಗ್ 2 ಸಿನಿಮಾದಲ್ಲಿ ನಟಿಸಿದ್ದರು. ಸುದೀಪ್ ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಸಲ್ಮಾನ್ ಮತ್ತು ಕಿಚ್ಚ ಸುದೀಪ್ ಬಾಂಧವ್ಯ ಉತ್ತಮವಾಗಿದೆ. ಅಲ್ಲದೇ, ಕಿಚ್ಚ ಸುದೀಪ್ ಸಲ್ಮಾನ್ ಖಾನ್‌ಗಾಗಿ ಸಿನಿಮಾ ಒಂದನ್ನು ನಿರ್ದೇಶನ ಮಾಡುವುದಾಗಿ ಹೇಳಿದ್ದು, ಸದ್ಯದಲ್ಲೇ ಆ ಬಗ್ಗೆ ಮಾತನಾಡುತ್ತೇನೆ ಎಂದು ಕೂಡ ಹೇಳಿದ್ದರು. ಹಾಗಾಗಿ ಯಾವಾಗ ಕಿಚ್ಚ ಮತ್ತು ಸಲ್ಲು ಕಾಂಬಿನೇಷನ್ ಸಿನಿಮಾ ಬರತ್ತೆ ಎಂದು ಇವರ ಅಭಿಮಾನಿಗಳು ಕಾದು ಕುಳಿತಿದ್ದಾರೆ.
‘ಶಿವಾನಂದ ಪಾಟೀಲ್ ರೈತರ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ, ಸಲುಗೆಯಿಂದ ಮಾತನಾಡಿದ್ದಾರೆ’
‘ಮಿಸ್ಟರ್ ನರೇಂದ್ರ ಮೋದಿ ಅವರೇ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ದೇಶದ ಜನರಿಗೆ ಲೆಕ್ಕ ಕೊಡಿ’