ಕಿಡ್ನ್ಯಾಪ್‌ ಕೇಸ್ : ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

Political News: ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರಾಗಿದ್ದು, 5 ದಿನಗಳ ಜೈಲು ವಾಸ ಅಂತ್ಯವಾಗಿದೆ.

ರೇವಣ್ಣ ಸೂಚಿಸಿದ್ದಕ್ಕೆ ಕಿಡ್ನ್ಯಾಪ್ ಮಾಡಲಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಪ್ರಸ್ತುತ ಪಡಿಸದ ಕಾರಣ, ರೇವಣ್ಣನಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆದರೆ ಇಂದಿನ ಕೆಲಸದ ಸಮಯ ಮುಗಿದಿರುವ ಕಾರಣ, ನಾಳೆ ಜಮೀನು ಮಂಜೂರು ಕೆಲಸಗಳು ಪೂರ್ಣಗೊಳ್ಳುತ್ತದೆ. ಹಾಗಾಗಿ ಇಂದು ರಾತ್ರಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಳೆಯಬೇಕಿದ್ದು, ನಾಳೆ ಬೇಲ್ ಸಿಗಲಿದೆ.

ಇನ್ನು ಜಮೀನು ನೀಡಲು ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್‌ ನೀಡುವಂತೆ ಸೂಚಿಸಲಾಗಿದೆ. ಸಾಕ್ಷ್ಯಾಧಾರ ನಾಶಪಡಿಸಬಾರದು. ಎಸ್‌ಐಟಿ ತನಿಖೆಗೆ ಸಹಕರಿಸಬೇಕು. ಮಂಡ್ಯದ ಕೆ.ಆರ್.ನಗರ ಪ್ರವೇಶಿಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ.

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು: ಐವರ ಸ್ಥಿತಿ ಗಂಭೀರ

Kidnap case: ಮೇ 14ರವರೆಗೆ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ

About The Author