Wednesday, May 29, 2024

Latest Posts

ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು: ಐವರ ಸ್ಥಿತಿ ಗಂಭೀರ

- Advertisement -

Maharashtra News: ಆಹಾರ ಸೇವನೆ ಮಾಡಿದ ಬಳಿಕ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಬಳಿಕ ವಿದೇಶದಲ್ಲಿ ಚಿಕನ್ ರೆಸಿಪಿ ತಿಂದು ಓರ್ವ ಸಾವನ್ನಪ್ಪಿದ್ದ. ಇದೇ ರೀತಿ, ಕೆಲ ದಿನಗಳಲ್ಲಿ ಹಲವು ಕೇಸ್ ಪತ್ತೆಯಾಗಿದೆ. ಇದಕ್ಕೆಲ್ಲ, ಬೇರೆ ಬೇರೆ ಕಾರಣಗಳಿದೆ. ಅಲರ್ಜಿ, ಗಂಟಲಲ್ಲಿ ಆಹಾರ ಸಿಕ್ಕಿಕೊಂಡು ಸಾಯುವುದು ಹೀಗೆ ಬೇರೆ ಬೇರೆ ಕಾರಣಗಳಿಂದ ಆಹಾರ ಸೇವಿಸಿದವರು ಸಾವನ್ನಪ್ಪಿದ್ದಾರೆ.

ಅದೇ ರೀತಿ ಮಹಾರಾಷ್ಟ್ರದಲ್ಲಿ ಓರ್ವ ವ್ಯಕ್ತಿ ಚಿಕನ್ ಶವರ್ಮಾ ತಿಂದು ಸಾವಿಗೀಡಾಗಿದ್ದಾನೆ. 19 ವರ್ಷದ ಪ್ರಥಮೇಶ್ ಭೋಗ್ಸೆ ಎಂಬ ಯುವಕ, ಇನ್ನು ಐವರ ಜೊತೆ ಸೇರಿ, ಚಿಕನ್ ಶವರ್ಮಾ ಸೇವಿಸಿದ್ದು, ಈತ ಸಾವಿಗೀಡಾಗಿದ್ದಲ್ಲದೇ, ಈತನೊಂದಿಗಿದ್ದ ಐವರ ಸ್ಥಿತಿ ಗಂಭೀರವಾಗಿದೆ. ಅಂದ್ರೆ ಆಹಾರದಲ್ಲೇ ಏನೋ ಸಮಸ್ಯೆ ಇದ್ದಿತ್ತು. ಹೀಗಾಗಿ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಗೆಳೆಯರೊಂದಿಗೆ ಪ್ರಥಮೇಶ್ ಚಿಕನ್‌ ಶವರ್ಮಾ ಸೇವಿಸಲು ಹೋಗಿದ್ದು, ಮನೆಗೆ ಮರಳಿದಾಗ ಆರಾಮವಾಗಿಯೇ ಇದ್ದ. ಮರುದಿನ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಂತಿ ಶುರುವಾಗಿದೆ. ಸಂಜೆ ಆದರೂ ವಾಂತಿಯಾಗುವುದು ನಿಲ್ಲದ ಕಾರಣ, ಪ್ರಥಮೇಶ್‌ನನ್ನು ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಔಷಧಿ ನೀಡಿ ಮನೆಗೆ ಕಳಿಸಲಾಗಿತ್ತು. ಆದರೆ ಮನೆಗೆ ಬಂದು ಮದ್ದು ತೆಗೆದುಕೊಂಡ ಬಳಿಕವೂ ಪ್ರಥಮೇಶ್ ವಾಂತಿ ಮಾಡುವುದನ್ನು ನಿಲ್ಲಿಸಿರಲಿಲ್ಲ. ಬಳಿಕ ಮತ್ತೆ ಅದೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಒಂದು ದಿನದ ಚಿಕಿತ್ಸೆ ಪಡೆದರೂ ಯುವಕ ಬದುಕುಳಿಯಲಿಲ್ಲ.

ಇನ್ನು ಪ್ರಥಮೇಶ್ ಯಾವ ಹೊಟೇಲ್‌ನಲ್ಲಿ ಈ ಆಹಾರ ಸೇವಿಸಿದ್ದನೋ, ಆ ಹೊಟೇಲ್‌ಗೆ ಹೋಗಿ ಪರಿಶೀಲಿಸಿದಾಗ, ಹಾಳಾದ ಕೋಳಿ ಮಾಂಸ ಬಳಸಲಾಗಿದೆ ಎಂಬ ಸಂಗತಿ ಗೊತ್ತಾಗಿದೆ. ಹೀಗಾಗಿ ಇಬ್ಬರು ಆರೋಪಿಗಳ ಮೇಲೆ ಕೇಸ್ ಹಾಕಲಾಗಿದೆ.

ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ರಿಲ್ಯಾಕ್ಸ್ ಮೂಡ್‌ನಲ್ಲಿ..!

ಪತಿಯ ಬಗ್ಗೆ ನಗೆ ಚಟಾಕಿ ಹಾರಿಸಿದ ಜೋಶಿ ಪತ್ನಿ ಜ್ಯೋತಿ ಜೋಶಿ

ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರಿನ ಬಸ್‌ಸ್ಟ್ಯಾಂಡ್‌ನಲ್ಲಿ ರಾರಾಜಿಸಿದ ಪೋಸ್ಟರ್‌ಗಳು

- Advertisement -

Latest Posts

Don't Miss