Friday, November 22, 2024

Latest Posts

Kidnap case: ಮೇ 14ರವರೆಗೆ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ

- Advertisement -

Political News: ಈಗಾಗಲೇ ಕಿಡ್ನ್ಯಾಪ್ ಕೇಸ್‌ನಲ್ಲಿ ಹೆಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿ, ಕರೆದೊಯ್ದಿದ್ದು, ಇಂದಿಗೆ ಕಸ್ಟಡಿ ಅಂತ್ಯವಾಗಬೇಕಿತ್ತು. ಆದರೆ, ನ್ಯಾಯಾಂಗ ಬಂಧನವನ್ನು ಮೇ 14ರವರೆಗೆ ವಿಸ್ತರಿಸಲಾಗಿದೆ. ಈ ಕಾರಣಕ್ಕೆ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

ಇನ್ನನು ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ವಿಚಾರಣೆಯಲ್ಲಿರುವ ವ್ಯಕ್ತಿಗೆ ಜಾಮೀನು ನೀಡುವುದು ಅಸಾಧ್ಯವೆಂದು ಹೇಳಲಾಗಿದೆ. ಹಾಗಾಗಿ ರೇವಣ್ಣಗೆ ಇನ್ನು 7 ದಿನ ಜೈಲೇ ಗತಿಯಾಗಿದೆ.

ಇನ್ನು ಈ ಕಿಡ್ನ್ಯಾಪ್ ಕೇಸ್ ಬಗ್ಗೆ ಹೇಳುವುದಾದರೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ವೀಡಿಯೋದಲ್ಲಿ ಓರ್ವ ಮಹಿಳೆ ಇದ್ದು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದರು. ಹಾಗಾಗಿ ಅವರ ಮಗ, ತನ್ನ ತಾಯಿ ಕಾಣೆಯಾಗಿದ್ದಾರೆಂದು ದೂರು ನೀಡಿದ್ದ. ಹಾಗಾಗಿ ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. ಬಳಿಕ ಆ ಮಹಿಳೆ ರೇವಣ್ಣ ಆಪ್ತರ ತೋಟದಲ್ಲಿ ಪತ್ತೆಯಾಗಿದ್ದು, ನನ್ನನ್ನು ದನದ ಹಟ್ಟಿಯಲ್ಲಿಟ್ಟಿದ್ದರು.  ಪೆನ್‌ಡ್ರೈವ್ ವಿಷಯದ ಬಗ್ಗೆ ಯಾರಲ್ಲಿಯೂ ಹೇಳಬಾರದು ಎಂದು ತಾಕೀತು ಮಾಡಲಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಬಳಿಕ ಎಸ್‌ಐಟಿ ರೇವಣ್ಣನನ್ನು ಅರೆಸ್ಟ್ ಮಾಡಿ, ವಿಚಾರಣೆಗೆ ಕರೆದೊಯ್ದಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆರೋಗ್ಯ ತಪಾಸಣೆ ಮಾಡಲಾಗಿದ್ದು, ಬಳಿಕ ವಿಚಾರಣೆ ನಡೆಸಲಾಗಿತ್ತು. ಮತ್ತೊಮ್ಮೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ, ರೇವಣ್ಣರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಕರೆ ತರಲಾಗಿದ್ದು, ಇಂದಿನವರೆಗೂ ನ್ಯಾಯಾಂಗ ಬಂಧನ ಎನ್ನಲಾಗಿತ್ತು. ಇದೀಗ ಮತ್ತೆ 7 ದಿನಗಳ ಕಾಲ ನ್ಯಾಯಾಂಗ ಬಂಧನ ಮುಂದುವರೆಸಲಾಗಿದೆ.

ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ರಿಲ್ಯಾಕ್ಸ್ ಮೂಡ್‌ನಲ್ಲಿ..!

ಪತಿಯ ಬಗ್ಗೆ ನಗೆ ಚಟಾಕಿ ಹಾರಿಸಿದ ಜೋಶಿ ಪತ್ನಿ ಜ್ಯೋತಿ ಜೋಶಿ

ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರಿನ ಬಸ್‌ಸ್ಟ್ಯಾಂಡ್‌ನಲ್ಲಿ ರಾರಾಜಿಸಿದ ಪೋಸ್ಟರ್‌ಗಳು

- Advertisement -

Latest Posts

Don't Miss