International News: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಮೂರೇ ದಿನಗಳಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಹಾಗಾಗಿ ಭಾರತದಲ್ಲಿ ರಾಮಭಕ್ತರೆಲ್ಲ ರಾಮನ ಜಪ ಮಾಡುತ್ತಿದ್ದಾರೆ. ಇದರೊಂದಿಗೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿಯೂ ರಾಮನಾಮ ಜಪ ಜೋರಾಗಿದೆ.
ಮೊನ್ನೆಯಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೇಟಿಗರೊಬ್ಬರು ಪಾಕಿಸ್ತಾನದಲ್ಲಿ ಕೇಸರಿ ಧ್ವಜ ಹಿಡಿದು, ಜೈ ಶ್ರೀರಾಮ್ ಎಂದಿದ್ದರು. ಮಾರೇಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆಗಾಗಿ ಅಲ್ಲಿನ ಹಿಂದೂ ಅಧಿಕಾರಿಗಳಿಗೆ 2 ಗಂಟೆಯ ವಿಶೇಷ ವಿಶ್ರಾಂತಿ ನೀಡಲಾಗುತ್ತಿದೆ. ಇನ್ನು ಆಫ್ರಿಕಾದ ತಾಂಜೇನಿಯಾದಲ್ಲೂ ರಾಮನಾಮ ಜಪ ಶುರುವಾಗಿದೆ. ಹಾಗಾದ್ರೆ ತಾಂಜೇನಿಯಾದಲ್ಲಿ ರಾಮನಾಮ ಜಪ ಮಾಡಿದವರು ಯಾರು ಎಂದು ಕೇಳುತ್ತಿದ್ದೀರಾ.. ಅವರು ಬೇರೆ ಯಾರೂ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ, ಭಾರತೀಯರಿಗೆ ಪ್ರೀತಿ ಪಾತ್ರರಾಗಿರುವ ಕಿಲಿ ಪೌಲ್.
ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್, ತೆಲುಗು, ತಮಿಳು ಹಾಡಿಗೆ ಲಿಪ್ ಸಿಂಕ್ ಮಾಡಿ, ರೀಲ್ಸ್ ಮಾಡುತ್ತಿದ್ದ, ತಾಂಜೇನಿಯಾದ ಕಿಲಿ ಪೌಲ್, ತಾನೂ ರಾಾಮಮಂದಿರ ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ.
ರಾಮ ಸೀಯಾ ರಾಮ್ ಅನ್ನುವ ಹಾಡಿಗೆ ಲಿಪ್ ಸಿಂಕ್ ಮಾಡಿ ರೀಲ್ಸ್ ಮಾಡಿರುವ ಕಿಲಿ ಪೌಲ್, ನನಗೂ ಸಹ ಆಶೀರ್ವಾದ ಬೇಕು. ಒಂದು ದಿನ ನಾನು ಅಲ್ಲಿಗೆ ಹೋಗುವವರೆಗೂ ಶ್ರೀರಾಮನ ಜಪ ಮಾಡುತ್ತೇನೆ ಎಂದು ಕಿಲಿ ಬರೆದುಕೊಂಡಿದ್ದಾರೆ.
ಅನ್ನಪೂರ್ಣಿ ಸಿನಿಮಾದಲ್ಲಿ ರಾಮನ ಡೈಲಾಗ್ ಬಗ್ಗೆ ಹೇಳಿಕೆ ನೀಡಿದ ನಟಿ ನಯನತಾರಾ