Friday, April 4, 2025

Latest Posts

ಅರಮನೆಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯ ನೀಡಿದ ಭೂತಾನ್ ರಾಜ

- Advertisement -

International News: ಪ್ರಧಾನಿ ಮೋದಿ ಭೂತಾನ್ ಪ್ರವಾಸದಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಅಲ್ಲದೇ, ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್‌ತಿಗೆ ಕೂಡ ಭಾಜನರಾಗಿದ್ದಾರೆ.

ಇದೀಗ ಭೂತಾನ್ ರಾಜ, ಪ್ರಧಾನಿ ಮೋದಿಯವರನ್ನು ತಮ್ಮ ಅರಮನೆಗೆ ಕರೆದು, ಖಾಸಗಿ ಔತಣ ಕೂಡ ಏರ್ಪಡಿಸಿದ್ದರು. ಈ ವೇಳೆ ಔತಣಕೂಟದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ರಾಣಿಯನ್ನು ಭೇಟಿಯಾಗಿದ್ದು, ಅವರ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ. ಆಟವಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಧಾನಿ ಮೋದಿ, ಭೂತಾನ್ ರಾಜ ಜಿಗ್ಮೆ ಖೇಸರ್ ನೀಡಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಲಿಂಗಕಾನಾ ಅರಮನೆಯಲ್ಲಿ ಈ ಭೋಜನಕೂಟ ಏರ್ಪಟ್ಟಿದ್ದು, ರಾಜ ರಾಣಿ ಮತ್ತು ಅವರ ಮಕ್ಕಳು ಕೂಡ ಈ ಔತಣಕೂಟದಲ್ಲಿ ಭಾಗಿಯಾಗಿದ್ದರು. ಇನ್ನು ಭೂತಾನ್ ರಾಜ ಪ್ರಧಾನಿ ಮೋದಿಯವರ ಆಡಳಿತದ ವೈಖರಿಯನ್ನು ಹೊಗಳಿದ್ದು, ಭಾರತದ ಭವಿಷ್ಯ ಅತ್ಯುತ್ತಮವಾಗಿರುತ್ತದೆ ಎಂದಿದ್ದಾರೆ.

ಕಸದ ಟ್ರಕ್ ಡಿಕ್ಕಿ ಲಂಡನ್‌ನಲ್ಲಿ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ಸಾವು

ಪರಪ್ಪನ ಅಗ್ರಹಾರದ ಪಾಲಾದ ಸೋನುಗೌಡ: ರೀಲ್ಸ್ ರಾಣಿಗೆ 14 ದಿನ ನ್ಯಾಯಾಂಗ ಬಂಧನ

ರೋಹಿತ್‌ ಶರ್ಮಾಗೇ ಆಡೋದನ್ನ ಹೇಳಿಕೊಟ್ಟ ಪಾಂಡ್ಯಾ: ಆಕ್ರೋಶ ಹೊರಹಾಕಿದ ನೆಟ್ಟಿಗರು

- Advertisement -

Latest Posts

Don't Miss