Saturday, July 27, 2024

Latest Posts

ಕೋಲಾರದ ಕಾಂಗ್ರೆಸ್ ಟಿಕೆಟ್‌ ಗೊಂದಲಕ್ಕೆ ತೆರೆ ಎಳೆದ ಹೈಕಮಾಂಡ್: ಕೆ.ವಿ.ಗೌತಮ್‌ಗೆ ಟಿಕೇಟ್

- Advertisement -

Kolar News: ಕೋಲಾರ: ಲೋಕಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿದ್ದ ಕೋಲಾರ ಟಿಕೆಟ್ ಕಡೆಗೂ ಘೋಷಣೆ ಯಾಗಿದೆ, ಕಳೆದ ಕೆಲವು ದಿನಗಳಿಂದ ಇಡೀ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಶನಿವಾರ ಅಂತಿಮವಾಗಿದೆ. ಕೆ ಎಚ್ ಮುನಿಯಪ್ಪ- ರಮೇಶ್ ಕುಮಾರ್ ಬಣವನ್ನು ಹೊರತುಪಡಿಸಿ ಮೂರನೆ ವ್ಯೆಕ್ತಿಗೆ ಕಾಂಗ್ರೆಸ್ ಮಣೆಹಾಕಿದೆ.

ಬೆಂಗಳೂರಿನ ಮಾಜಿ ಮೇಯರ್ ವಿಜಯಕುಮಾರ್ ಪ್ರತ್ರ ಹಾಗೂ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾದ್ಯಕ್ಷ ರಾಗಿರುವ ಕೆ.ವಿ ಗೌತಮ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಇದರೊಂದಿಗೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವುದು ಕೋಲಾರ ವಿಚಾರದಲ್ಲಿ ನಿಜವಾಗಿದೆ. ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದ ಮಾಜಿ ಮೇಯರ್‌ ವಿಜಯಕುಮಾರ್‌ ಪುತ್ರ ಗೌತಮ್‌ ಅವರಿಗೆ ಕೋಲಾರ ಟಿಕೆಟ್ ಸಿಕ್ಕಿದ್ದು ಶನಿವಾರ ಅಧಿಕೃತವಾಗಿ ಘೋಷಣೆಯಾಗಿದೆ.

ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸಚಿವ ಕೆ.ಆರ್ ರಮೇಶ್ ಕುಮಾರ್ ಬಣಗಳ ನಡುವಿನ ಹಗ್ಗಜಗ್ಗಾಟಕ್ಕೆ ಕಾಂಗ್ರೆಸ್ ಈ ಮೂಲಕ ಉತ್ತರ ಕಂಡುಕೊಂಡಿದ್ದು, ಮುನಿಯಪ್ಪ ವಿರೋಧಿ ಬಣದ ರಾಜೀನಾಮೆ ಪ್ರಹಸನ, ಅದಕ್ಕೂ ಮುನ್ನ ನಡೆದ ಹಲವು ಪ್ರಸಂಗಗಳನ್ನು ಮನಗಂಡು ಸ್ವತಃ ಹೈಕಮಾಂಡ್‌ ಎರಡೂ ಬಣಗಳಿಂದ ಹೊರತಾದ ವ್ಯಕ್ತಿಯ ಹೆಸರು ಶಿಫಾರಸು ಮಾಡುವಂತೆ ರಾಜ್ಯ ನಾಯಕರಿಗೆ ಸೂಚಿಸಿತ್ತು. ಅದರಂತೆ ಕೆ.ವಿ ಗೌತಮ್ ಅವರು ಟಿಕೆಟ್ ಪಡೆದುಕೊಂಡಿದ್ದು, ಕೋಲಾರದ ಕಾಂಗ್ರೆಸ್ ಟಿಕೆಟ್‌ ಗೊಂದಲಕ್ಕೆ ಹೈಕಮಾಂಡ್ ಮುಲಾಮು ಹಚ್ಚಿದ್ದು, ಚುನಾವಣಾ ರಣರಂಗದಲ್ಲಿ ಎರಡು ಬಣಗಳು ಯಾವರೀತಿ ಅಬ್ಯರ್ಥಿಗೆ ಸಾತ್ ನೀಡುತ್ತವೆ ಎಂಬುದು ಕಾದು ನೋಡಬೇಕಾಗಿದೆ.

ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಯಾವುದೇ ಗೊಂದಲಗಳಿಲ್ಲ. ಈ ಸಭೆಯ ಮೂಲಕ ಎಲ್ಲರಿಗೂ ಸ್ಟ್ರಾಂಗ್ ಮೆಸೇಜ್ ಹೋಗಿದೆ: ಪ್ರಜ್ವಲ್ ರೇವಣ್ಣ

- Advertisement -

Latest Posts

Don't Miss