Saturday, July 27, 2024

Latest Posts

ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

- Advertisement -

International News: ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ, ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಯುಕೆಯಲ್ಲಿ ನಡೆದಿದೆ. ಡೇವಿಡ್ ಎಂಬ ವ್ಯಕ್ತಿ ವಿಟಾಮಿನ್ ಡಿ ಮಾತ್ರೆಯನ್ನು ಹೆಚ್ಚಿನ ಪ್ರಾಮಣದಲ್ಲಿ ತೆಗೆದುಕೊಂಡು ಸಾವನ್ನಪ್ಪಿದ್ದಾರೆ. ಡೇವಿಡ್ 9 ತಿಂಗಳಿನಿಂದಲೂ ಈ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆ 1ಕ್ಕಿಂತ ಹೆಚ್ಚು ಮಾತ್ರೆ ಸೇವಿಸಿದ್ದಾರೆ. ಹೀಗಾಗಿ ಅವರ ಸಾವು ಸಂಭವಿಸಿದೆ ಅಂತಾ ವರದಿಯಾಗಿದೆ.

ಹೆಚ್ಚು ಮಾತ್ರೆ ಸೇವಿಸಿದ ಪರಿಣಾಮ ಡೇವಿಡ್‌ಗೆ ಕಾರ್ಡಿಯಾಕ್ ಅರೆಸ್ಟ್, ಕಿಡ್ನಿ ಫೇಲ್ಯೂವರ್ ಆಗಿ ಸಾವು ಸಂಭವಿಸಿದೆ ಎಂದು, ಶವಪರೀಕ್ಷೆ ಬಳಿಕ ತಿಳಿದುಬಂದಿದೆ. ವಿಟಾಮಿನ್ ಡಿ ಮಾತ್ರೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ನಮ್ಮ ಮೂಳೆ ಸರಿಯಾಗಿರುತ್ತದೆ. ನಾವು ಆರೋಗ್ಯವಾಗಿರುತ್ತೇವೆ. ಆದರೆ ಇದರ ಬದಲು ನೀವು, ಬೆಳಗ್ಗಿನ ಜಾವ ಬೀಳುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲುವುದು ಉತ್ತಮ ಅಂತಾರೆ ವೈದ್ಯರು.

ಅಲ್ಲದೇ, ವಿಟಾಮಿನ್ ಡಿ ದೇಹಕ್ಕೆ ಸಿಗಬೇಕು ಅಂದ್ರೆ ನೀವು ಉತ್ತಮ ಆಹಾರಗಳನ್ನು ಸೇವಿಸಬೇಕು. ಯಾವ ಆಹಾರದಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆಯೋ, ಅಂಥ ಆಹಾರವನ್ನು ನೀವು ಸೇವಿಸಬೇಕು. 65 ವಯಸ್ಸು ದಾಟಿದ ಬಳಿಕ ಹಲವರಿಗೆ ದೇಹದಲ್ಲಿ ವಿಟಾಮಿನ್ ಡಿ ಕೊರತೆಯುಂಟಾಗುತ್ತದೆ. ಅಂಥವರು ವಿಟಾಮಿನ್ ಡಿ ಮಾತ್ರೆ ತೆಗೆದುಕೊಳ್ಳಿ ಎಂದು ವೈದ್ಯರು ಹೇಳಿದಾಗ ಮಾತ್ರ, ಅವರು ಹೇಳಿದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ಬಿಲ್‌ಗೇಟ್ಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ..

ಅರಮನೆಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯ ನೀಡಿದ ಭೂತಾನ್ ರಾಜ

- Advertisement -

Latest Posts

Don't Miss