Saturday, July 27, 2024

Latest Posts

ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

- Advertisement -

Movie News: ತೆಲುಗು ನಟ ನವೀನ್ ಪೋಲಿಶೆಟ್ಟಿಗೆ ಅಮೆರಿಕದಲ್ಲಿ ಅಪಘಾತವಾಗಿದ್ದು, ಕೈ ಕಾಲಿನ ಮೂಳೆ ಮುರಿತಗೊಂಡಿದೆ. ಅವರನ್ನು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಮೆರಿಕದ ಡಲ್ಲಾಸ್ ಎಂಬಲ್ಲಿ ಬೈಕ್ ಅಪಘಾತವಾಗಿದ್ದು, ಮೂಳೆ ಮುರಿತಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ನವೀನ್‌ಗೆ 8 ವಾರಗಳ ಕಾಲ ರೆಸ್ಟ್ ಮಾಡಲೇಬೇಕೆಂದು ವೈದ್ಯರು ಹೇಳಿದ್ದು, ನವೀನ್ ಬೆಡ್ ರೆಸ್ಟ್ ತೆಗೆದುಕೊಳ್ಳಲೇಬೇಕಾಗಿದೆ. ಹಾಗಾಗಿ ಶೂಟಿಂಗ್ ಸೇರಿ ಬೇರೆ ಕೆಲಸಗಳೆಲ್ಲ ನಟ ಕ್ಯಾನ್ಸಲ್ ಮಾಡಿದ್ದಾರೆ.

8 ವಾರಗಳ ರೆಸ್ಟ್ ಸಿಗಲಿಲ್ಲವಾದಲ್ಲಿ, ಕೈ ಮೂಳೆ ಮುರಿತ ಸಂಪೂರ್ಣವಾಗಿ ಗುಣಮುಖವಾಗುವುದಿಲ್ಲವೆಂದು ವೈದ್ಯರು ಹೇಳಿದ್ದಾರೆ. ಇನ್ನು ಅಮೆರಿಕದಲ್ಲಿ ನವೀನ್ ಬೈಕ್ ಯಾಕೆ ರನ್ ಮಾಡಿದ್ದರು ಅನ್ನೋ ಪ್ರಶ್ನೆಗೆ ಉತ್ತರ, ನವೀನ್ ಸಣ್ಣ ಬ್ರೇಕ್ ತೆಗೆದುಕೊಂಡು ಅಮೆರಿಕದಲ್ಲಿರುವ ತಮ್ಮ ಕುಟುಂಬಸ್ಧರು, ಸ್ನೇಹಿತರು, ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದರು. ಈ ವೇಳೆ ಬೈಕ್ ಸವಾರಿ ಮಾಡುವಾಗ ಅಪಘಾತವಾಗಿದೆ. ಇನ್ನು ಬೇಸಿಗೆ ಮುಗಿದ ಬಳಿಕ, ಪೂರ್ತಿ ರೆಸ್ಟ್ ಮುಗಿಸಿಯೇ ನವೀನ್ ಭಾರತಕ್ಕೆ ಬರಲಿದ್ದಾರೆ.

ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈ ಕಾರಣಕ್ಕೆ ಅವರನ್ನು ನವೀನ ಪೋಲಿಶೆಟ್ಟಿ ಎಂದು ಕರೆಯಲಾಗುತ್ತದೆ. ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

ಯುವ ಚಿತ್ರ ವಿಮರ್ಶೆ: ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ

ಮುನಿಸು ಮರೆತು ಒಂದಾದ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ಧಿಕಿ ದಂಪತಿ

ಶಿವಸೇನೆಯ ಶಿಂಧೆ ಬಣಕ್ಕೆ ಸೇರ್ಪಡೆಯಾದ ಬಾಲಿವುಡ್ ನಟ ಗೋವಿಂದ

- Advertisement -

Latest Posts

Don't Miss