ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಡಿ ಎನ್ ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗ್ರಾಮದ ಜನರು ಅಂಗಡಿಗಳನ್ನು ಮತ್ತು ಮನೆಗಳನ್ನು ಕಟ್ಟಿಕೊಂಡು ವಾಸಮಾಡುತ್ತಿರುವ ಗೋಮಾಳ ಜಾಗವನ್ನು ಏಕಾಏಕಿ ಗ್ರಾಮಪಂಚಾಯಿತಿ ಅಧಿಕಾರಿಗಳು ಜೆಸಿಬಿ ಜೊತೆ ಬಂದು ಅಂಗಡಿ ಮತ್ತು ಮನೆಗಳನ್ನು ತೆರವುಗೊಳಿಸುವಂತೆ ಒತ್ತಾಯಗೊಳಿಸಿದರು.
ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಅಧಿಕಾರಿಗಳು ಬಂದು ವಾಸದ ಮನೆಗಳನ್ನು ತೆರವುಗೊಳಿಸುವಂತೆ ಒತ್ತಾಯ ಮಾಡಿದರೆ ಎಲ್ಲಿ ಹೋಗಬೇಕು ತಕ್ಷಣ ಖಾಲಿ ಮಾಡು ಎಂದರೆ ಆಗುವುದಿಲ್ಲ ಎಂದು ಅಧಿಕಾರಿಗಳ ಮುಂದೆಯೆ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದರು. ಜೆಸಿಬಿಗಳನ್ನು ತಡೆದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಕೈಗೊಂಡರು.
ಈ ಮದ್ಯೆ ಅಂಗಡಿ ತೆರವು ಮಾಡುವಂತೆ ಅಗ್ರಹಿಸಿದರು. ಅದರೆ ಗ್ರಾಮಸ್ತರು ಪರ ವಿರೋಧ ಇರುವುದರಿಂದ ಅಧಿಕಾರಿಗಳಿಗೆ ಗೊಂದಲ ಉಂಟಾಯಿತು. ಸ್ಥಳದಲ್ಲಿ ಮಹಿಳಾ ಪೋಲಿಸ್ ಸಿಬ್ಬಂದಿ ಸೇರಿ ನೂರಾರು ಪೋಲಿಸರಿಂದ ಬಂದೋಬಸ್ತ್ ಇದ್ದರು .ಮಹಿಳೆಯರನ್ನು ಮನವೊಲಿಸಲು ಪೋಲೀಸರು ಹರಸಾಹಸ ಪಟ್ಟರು. ಇನ್ನು ಈ ಘಟನೆ ಮಾಲೂರು ಪೋಲಿಸ್ ಠಾಣಾ ವ್ಯಾಪ್ರಿಯಲ್ಲಿ ನಡೆದಿದೆ.
Eye care ಸಾರ್ವಜನಿಕರೇ ಎಚ್ಚರ ನಿಮ್ಮ ಕಣ್ಣಿನ ಕಾಳಜಿ ಅಗತ್ಯ: ಮದ್ರಾಸ್ ಐ ನಿಂದ ಮುಕ್ತಿಗಾಗಿ ಜಾಗೃತಿ…!
Grama Panchayath : ಶಿರಗುಪ್ಪಿ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ : ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ..!