Koppala News: ಕೊಪ್ಪಳ : ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಕೂಡಲೇ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಜತೆಗೆ ರಾಜ್ಯ ಯಾರ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಆಗ್ರಹಿಸಲಾಗುವುದು ಎಂದು ಹೇಳಿದರು.
ತಾಲೂಕುವಾರು ಮಳೆ ಕೊರ ತೆಯ ಆತಂಕಕಾರಿ ಅಂಕಿ-ಅಂಶಗಳು: ಕೆಎಸ್‌ಎನ್‌ಡಿಎಂಸಿ ವರದಿಯ ಪ್ರಕಾರ ಜಿಲ್ಲೆಯ ಎಲ್ಲಾ ತಾಲೂಕುಗಳು ಎದುರಿಸುತ್ತಿರುವ ಮಳೆಯ ಕೊರತೆಯ (%ಡಿಇಪಿ) ವಿವರಗಳು ಸರ್ಕಾರದ ಕಣ್ಣು ತೆರೆಸಬೇಕಾಗಿದೆ.
ರಾಜ್ಯ ಸರ್ಕಾರವು ಕೇವಲ ಸಚಿವ ಸಂಪುಟ ವಿಸ್ತರಣೆಯಲ್ಲಿ ತಲಿನವಾಗಿದ್ದು, ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಸಚಿವ ಸ್ಥಾನ ಲಾಬಿಯಲ್ಲಿ ಮುಳುಗಿದ್ದಾರೆ. ಬರದ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ರೈತರ ಸಹಾಯಕ್ಕೆ ಬರಬೇಕು. ಇಲ್ಲವಾದರೇ ಉಗ್ರಹ ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.




