Movie News: ಕನ್ನಡದಲ್ಲಿ ಎಲ್ಲಾ ರೀತಿಯ ಮನರಂಜನೆ ಸಿಗಬೇಕೆನ್ನುವ ಆಶಯದೊಂದಿಗೆ KRG ಸ್ಟೂಡಿಯೋಸ್ ಕೆಲಸ ಮಾಡುತ್ತಿದೆ. ಅನೇಕ ಕನ್ನಡಿಗರು ಕನ್ನಡದಲ್ಲೇ ಪರಭಾಷೆಯ ಸಿನೆಮಾಗಳನ್ನು ನೋಡುವ ಹಂಬಲ ವ್ಯಕ್ತಪಡಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ ಮತ್ತು ಮುಂದಿನ ದಿನದಲ್ಲಿ ಕನ್ನಡದ ಅವತರಣಿಕೆಗಳು ಹೆಚ್ಚಾದಲ್ಲಿ ನೋಡುಗರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಲಿದೆ. ಇದೇ ನಿಟ್ಟಿನಲ್ಲಿ ಆದಿಪುರುಶ್ ಚಲನಚಿತ್ರದ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಲು KRG ಸ್ಟೂಡಿಯೋಸ್ ಮುಂದಾಗಿದೆ.
ಈ ಚಿತ್ರಕ್ಕೆ ರಘು ನಿಡುವಲ್ಲಿಯವರ ಸಂಬಾಷಣೆ, Dr. V ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ರವರ ಸಾಹಿತ್ಯ ಇರಲಿದೆ.
ಇದೆ ಮೊದಲ ಬಾರಿಗೆ ಆದಿಪುರುಶ್ ಸಿನೆಮಾದ ಕನ್ನಡದ ಅವತರಿಣಿಕೆಯ ಪ್ರಿಮಿಯರ್ ಶೋ ಅನ್ನು ನಮ್ಮ ಚಂದನವನದ ನಟ ನಟಿಯರು ತಂತ್ರಜ್ಞರು ಪತ್ರಕರ್ತರು ಹಾಗೂ ಕನ್ನಡ ಅಭಿಮಾನಿಗಳಿಗೆ ಇದೇ ಶುಕ್ರವಾರ KRG ಸ್ಟೂಡಿಯೋಸ್ ಅದ್ದೂರಿಯಾಗಿ ಆಯೋಜಿಸಿದೆ.
ಇದರಿಂದ ಕನ್ನಡದಲ್ಲಿ ಎಲ್ಲಾ ರೀತಿಯ ಮನರಂಜನೆ ಸಿಗಬೇಕೆನ್ನುವ ಆಶಯಕ್ಕೆ ಶಕ್ತಿ ತುಂಬಲಿದೆ.
“ಡೇರ್ ಡೆವಿಲ್ ಮುಸ್ತಫಾ” ಸಿನಿಮಾಗೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಆದೇಶ
ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಮಾರಕಾಸ್ತ್ರ” ಚಿತ್ರದ ಟೀಸರ್ ಬಿಡುಗಡೆ .
ನವೀನ್ ಶಂಕರ್ ಅಭಿನಯದ “ಕ್ಷೇತ್ರಪತಿ” ಚಿತ್ರದ ಟೀಸರ್ ಗೆ ಅಭಿಮಾನಿಗಳು ಫಿದಾ