Thursday, July 31, 2025

Latest Posts

KS Eshwarappa ಹೇಳಿಕೆ : ಸಿದ್ದು ಡಿಕೆಶಿ ಮುಖ್ಯಮಂತ್ರಿಯ ಕನಸು ಭಗ್ನ..!

- Advertisement -

ಶಿವಮೊಗ್ಗ : ಮೇಕೆದಾಟು(MEKEDATU) ಪಾದಯಾತ್ರೆ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯ(assembly election)ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಡಿಕೆ ಶಿವಕುಮಾರ್(DK Shivakumar)ಮುಖ್ಯಮಂತ್ರಿಯಾಗುವ ಪಣತೊಟ್ಟಿದ್ದರು. ಆದರೆ ಈಗ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸುವುದು ಮೂಲಕ ಅವರ ಮುಖ್ಯಮಂತ್ರಿ ಕನಸು ಭಗ್ನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa, Minister of Rural Development) ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದಾರೆ. ಇವರು ಪಾದಯಾತ್ರ ನಿಲ್ಲಿಸಿರುವುದು ಜನರ ಮೇಲಿನ ಕಾಳಜಿಯಿಂದ ಅಲ್ಲ, ಬದಲಿಗೆ ಕಾನೂನು ಕ್ರಮ ಕೈಗೊಳ್ಳುವ ಭೀತಿಯಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ನಿಲ್ಲಿಸಿದ್ದಾರೆ. ಡಿ ಕೆ ಶಿವಕುಮಾರ್ ತಿಹಾರ್ ಜೈಲಿ(Tihar Jail)ನಲ್ಲಿ ಇದ್ದು ಬಂದವರು, ಅವರಿಗೆ ನ್ಯಾಯಾಂಗದ ಶಕ್ತಿ ಏನೆಂದು ಗೊತ್ತಿದೆ ಆದ್ದರಿಂದ ಪಾದಯಾತ್ರೆ ಮೊಟಕುಗೊಳಿಸಿದ್ದಾರೆ ಎಂದು ಎಂದು ಈಶ್ವರಪ್ಪ ವ್ಯಂಗ್ಯವಾಗಿ ಮಾತನಾಡಿದ್ದಾರೆ.

- Advertisement -

Latest Posts

Don't Miss