Sunday, September 8, 2024

Latest Posts

ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ

- Advertisement -

Political News: ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ಪ್ರಜ್ವಲ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಸರ್ಕಾರಕ್ಕೆ ಪ್ರಚಾರ ಬೇಕಾಗಿದೆ. ಹಾಗಾಗಿ ಅವರು ಈ ಪ್ರಕರಣವನ್ನು ತಮಗೆ ಬೇಕಾದಂತೆ ಕೊಂಡೋಗುತ್ತಿದ್ದಾರೆಂದು ಆರೋಪಿಸಿದ್ದಾರೆ.

ಹೊಳೆನರಸೀಪುರ ಕಂಪ್ಲೈಂಟ್ ನಲ್ಲಿ ಬೆಲ್ ಎಬಲ್ ಸೆಕ್ಷನ್ ಹಾಕಿದಾನೆ. ಹಾಗಾಗಿ ಇನ್ನೊಂದು ಕಂಪ್ಲೈಂಟ್ ಕೊಡ್ತಾರೆ. ಗನ್ ಬೆದರಿಕೆ ಅಡೀ ಅತ್ಯಾಚಾರ ಎಂಬ ಸುದ್ದಿ ಕೂಡ ಬಂದಿದೆ. ಈ ವಿಚಾರಗಳನ್ನು ಮಾಧ್ಯಮಗಳ ಸೋರಿಕೆ ಮಾಡಿರೋರು ಯಾರು? ಈ ಸರ್ಕಾರಕ್ಕೆ ಬೇಕಾಗಿರೋರು ಪ್ರಚಾರ. ಕೆಲವರನ್ನು ತೇಜೋವಧೆ ಮಾಡಲಾಗ್ತಿದೆ. ಆಘಾತಕಾರಿ ಪ್ರಕರಣ ಲೈಟರ್ ವೇ ನಲ್ಲಿ ತನಿಖೆಯಾಗ್ತಿದೆ. 22 ರಂದು ಬೇಲೂರಿನಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಜ್ವಲ್ ಪಕ್ಕ ಕುಳಿತ ಹೆಣ್ಮಗಳು ಯಾರು? ರಾತ್ರಿ ಫೋಟೋ ಬಿಟ್ಟ ಹೆಣ್ಣುಮಗಳು ಬೆಳಗ್ಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಸಿದ್ದಳು. ಆದರೆ ನೀವು ಗನ್ ಪಾಯಿಂಟ್ ಅಂತೀರಾ. ತೊಂದ್ರೆ ಆಗಿದ್ರೆ ಆ ಹೆಣ್ಮಗಳು ಯಾಕೆ ಪ್ರಚಾರಕ್ಕೆ ಹೋಗ್ತಿದ್ಲು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಯಾರು ನೇರವಾಗಿ ರೇವಣ್ಣ ಮೇಲೆ‌ ಕಂಪ್ಲೈಂಟ್ ಕೊಟ್ಟಿಲ್ಲಾ. ಆಮೇಲೆ ಕಿಡ್ನ್ಯಾಪ್ ಅಂತ ಕಥೆ ಸೃಷ್ಟಿ ‌ಮಾಡಿದ್ರು. ಆ ಹೆಣ್ಣಮಗಳನ್ನು ಎಲ್ಲಿಂದ ಕರ್ಕೊಂಡು ಬಂದಿದಾರೋ‌ ಪೊಲೀಸರು ಹೇಳಲಿ. ತೋಟದ ಮನೆ ಅಂತಾ ಟಿವಿಯವ್ರು ತೋರ್ಸಿದ್ರಿ. ಅದು ದೊಡ್ಡ ಕಥೆ ಇದೆ ಅದನ್ನಾ‌ ಇನ್ನೊಮ್ಮೆ‌ ಹೇಳ್ತೀನಿ. ಒಂದೂವರೆ ದಿವಸಾ ಆ ಹೆಣ್ಮಗಳನ್ನು ಕೂರಿಸಿಕೊಂಡ್ರಿ. ಅಲ್ಲಿ ಮಹಜರು‌ ಮಾಡಿಲ್ಲಾ. ಜಡ್ಜ್ ಮುಂದೆ ಇವರೆಗೂ ಹಾಜರು ಪಡಿಸಿಲ್ಲಾ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ರೇವಣ್ಣ ತನಿಖೆಗೆ ಸಪೋರ್ಟ್ ಮಾಡ್ತಿಲ್ಲಾ ಅಂತಿದೀರಾ. ನಿಮ್ಮ ಹೇಳಿಕೆಗಳನ್ನು ರೇವಣ್ಣ ಹೇಳಿಕೆ ಅಂತಿದೀರ . ಕಾರು ಚಾಲಕ ಕಾರ್ತಿಕ ಗೌಡ 30 ರಂದು ಹೇಳಿಕೆ ನೀಡ್ತಾರೆ. ಅವ್ರು‌ ಮಾಧ್ಯಮದ ಮುಂದೆ ಬಂದಿಲ್ಲಾ. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ. ಆದ್ರೆ ಎಸ್ ಐಟಿ ಅವರನ್ನು ಹುಡಕ್ತಿಲ್ಲಾ. ಈ ತನಿಖೆಯನ್ನು ಕೇವಲ ರೇವಣ್ಣ, ಪ್ರಜ್ವಲ್ ರೇವಣ್ಣ ಮೇಲೆ ಮಾಡ್ತಿದೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಾರ್ತಿಕ ಗೌಡ ಹೇಳ್ತಾನೆ ದೇವರಾಜೇಗೌಡ ಮಾತ್ರ ವಿಡಿಯೋ ಕೊಟ್ಟಿದ್ದು. ಅವನಲ್ಲಿ ಸ್ವಚ್ಛತೆ ಇದ್ದರೆ ಹೊರಗೆ ಬರ್ತಿದಾರೆ. ಎಲ್ಲಿದ್ದಾನೆ ಕಾರ್ತಿಕ್ ಗೌಡ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮುಷ್ಕರ ಮುಂದೂಡಿದ ಸರ್ಕಾರಿ ಆ್ಯಂಬುಲೆನ್ಸ್ ಸಿಬ್ಬಂದಿಗಳು

ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ

ಮೇಲ್ಜಾತಿಯವರು ಪೇಪರ್ ಸೆಲೆಕ್ಟ್‌ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ

- Advertisement -

Latest Posts

Don't Miss