ಸಿನಿಮಾಗೋಸ್ಕರ ಕೆಲವು ನಟರು, ಡೈರೆಕ್ಟರ್, ಪ್ರೊಡ್ಯುಸರಗಳು ಮನೆಯನ್ನ ತ್ಯಾಗ ಮಾಡಿದ್ದನ್ನ ನಾವು ನೋಡಿದ್ದೀವಿ. ಅಷ್ಟೇ ಯಾಕೆ ಎಷ್ಟೋ ನಟರು ಸಿನಿಮಾದಲ್ಲಿ ತಮ್ಮ ಪಾತ್ರ ನೈಜ್ಯವಾಗಿ ಬರಲಿ ಎಂದು ಗಡ್ಡ ಮೀಸೆ ಬಿಡೋದು, ಕೂದಲು ಉದ್ದ ಬಿಡೋದು, ಚೆನ್ನಾಗಿ ತಿಂದ ಮೈ ಬೆಳೆಸಿಕೊಳ್ಳೋದು, ಡಯಟ್ ಮಾಡಿ ಸಿಕ್ಕಾಪಟ್ಟೆ ಸಣ್ಣ ಆಗೋದೆಲ್ಲ ನೋಡಿದ್ದೀವಿ. ಆದ್ರೆ ಇಲ್ಲೋರ್ವ ನಟ ತನ್ನ ಪಾತ್ರ ನೈಜ್ಯವಾಗಿ ಬರಲಿ ಎಂದು 10 ದಿನ ನಿದ್ರೆ ಬಿಟ್ಟಿದ್ದಾರೆ.
ನಟ ನಟಿಯರಿಗೆ ನಿದ್ದೆ ಅನ್ನೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತು. ನಿಜಾ ಅಂದ್ರೆ ಪ್ರತಿಯೊಬ್ಬರಿಗೂ ನಿದ್ರೆ ಅಂದ್ರೆ ಮುಖ್ಯಾನೇ. ಆದ್ರೆ ನಟ ನಟಿಯರು ಚೆನ್ನಾಗಿ ನಿದ್ರೆ ಮಾಡದಿದ್ರೆ, ಅವರ ಗ್ಲಾಮರ್ ಹಾಳಾಗತ್ತೆ. ಶೂಟಿಂಗ್ ಗೆ ತೊಂದರೆಯಾಗತ್ತೆ. ಆದ್ರೆ ನಟ ಶ್ಯಾಮ್ ತಮ್ಮ ಮುಂದಿನ ಸಿನಿಮಾವಾದ 6 ಕ್ಯಾಂಡಲ್ಸ್ ಅನ್ನೋ ಸಿನಿಮಾದಲ್ಲಿ ತಮ್ಮ ಪಾತ್ರ ಚೆನ್ನಾಗಿ ಬರಲಿ ಎಂದು 10 ದಿನ ನಿದ್ರೆ ಇಲ್ಲದೇ, ಕಣ್ಣು ಉಬ್ಬುವಂತೆ ಮಾಡಿಕೊಂಡಿದ್ದಾರೆ.
ಅಲ್ಲದೇ, ಗಡ್ಡ ಮೀಸೆ ಬಿಟ್ಟುಕೊಂಡು ವಿಚಿತ್ರವಾಗಿ ಕಾಣುತ್ತಿದ್ದಾರೆ. ಇಲ್ಲಿರುವ ಫೋಟೋದಲ್ಲಿ ಮೊದಲನೇಯ ಫೋಟೋ ಹ್ಯಾಂಡ್ಸಮ್ ಹೀರೋ ಶ್ಯಾಮ್. ಅದೇ ಅದರ ಪಕ್ಕದಲ್ಲಿರುವ ಫೋಟೋದಲ್ಲಿರೋದು, 6 ಕ್ಯಾಂಡಲ್ಸ್ ಅನ್ನೋ ಸಿನಿಮಾದಲ್ಲಿ ಆ್ಯಕ್ಟ್ ಮಾಡಲು ರೆಡಿಯಾಗಿರುವ ಅದೇ ನಟ ಶ್ಯಾಮ್. ತಮ್ಮ ಪಾತ್ರಕ್ಕೊಸ್ಕರ ನಿದ್ರೆಯನ್ನ ತ್ಯಾಗ ಮಾಡಿರುವ ಶ್ಯಾಮ್ ಸಿನಿಮಾ ಸಕ್ಸಸ್ ಕಾಣಲಿ ಎಂಬುದೇ ಅವರ ಅಭಿಮಾನಿಗಳ ಹಾರೈಕೆ.