ರೋಗಕ್ಕೆ ಔಷಧಿ ಬದಲಾಗುವಂತೆ ಸಮಸ್ಯೆ ಪರಿಹಾರಕ್ಕೆ ಕಾನೂನು ಬದಲಾವಣೆ ಆಗಬೇಕು: ಶಿರಹಟ್ಟಿ ಫಕೀರ್ ಸಿದ್ದಾರಮೇಶ್ವರ ಶಿವಯೋಗಿ

Hubli News: ಹುಬ್ಬಳ್ಳಿ: ನೇಹಾ ಹಿರೇಮಠ ಅವರ ಸಾವು ಖಂಡನೀಯ. ತಪ್ಪಿತಸ್ಥರಿಗೆ ತಕ್ಕಶಿಕ್ಷೆ ಆಗಬೇಕು. ಈ ತರಹ ಮರುಕಳಿಸದಂತೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆದರೆ ಒಳ್ಳೆಯದು ಎಂದು ಶಿರಹಟ್ಟಿಯ ಫಕೀರ್ ಸಿದ್ದಾರಮೇಶ್ವರ ಶಿವಯೋಗಿಗಳು ಹೇಳಿದರು.

ಇಂದು ಮೃತ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗದೇ ಹೋದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಎಚ್ಚರಿಕೆ ನೀಡಿದರು.

ಇದೀಗ ಸಮಾಜದಲ್ಲಿ ಕಾರ್ಯ ಹೆಚ್ಚಾಗುತ್ತಿದೆ. ಯುವ ಸಮೂದಾಯವನ್ನು ಸರಿಯಾದ ದಾರಿಯಲ್ಲಿ ತರುವ ಕೆಲಸವನ್ನು ಸಾಮಾಜಕ ಧುರೀಣರು ಮಾಡಬೇಕಿದೆ ಎಂದರು.

ರೋಗ ಬಂದರೆ ಔಷಧಿ ಬದಲಾವಣೆ ಆಗುವಂತೆ ಸಮಸ್ಯೆ ಪರಿಹಾರಕ್ಕೆ ಕಾನೂನು ಬದಲಾವಣೆ ಆಗಬೇಕು. ಇದೀಗ ಸಮಾಜದಲ್ಲಿ ದುರಾಸೆ ಹೆಚ್ಚಾಗಿದೆ. ಆಸ್ತಿ, ವೈಯಕ್ತಿಕ ಆಚಾರ, ವಿಚಾರದಿಂದ ಮಕ್ಕಳು ಹಿರಿಯರ ಮಾತು ಕೇಳದ ಕಾರಣಕ್ಕೆ ಈ ತರಹದ ದುರ್ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ನೇಹಾ-ಫಯಾಜ್ ಫೋಟೋ, ರೀಲ್ಸ್ ವೈರಲ್

ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..

ಇಂಥ ಕೆಲಸಕ್ಕೆ ಎನ್‌ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ

About The Author