Friday, April 18, 2025

Latest Posts

Weight ಇಳಿಸಲು ಲೆಮನ್ ಟೀ ಸಹಕಾರಿ..

- Advertisement -

ತೂಕ ಇಳಿಸಲು ಬಯಸುತ್ತಿದ್ದರೆ ಆಗ ನೀವು ಲಿಂಬೆ ಚಹಾ ಅಥವಾ ಲೆಮನ್ ಟೀ ಯನ್ನು ಖಂಡಿತವಾಗಿಯೂ ಪ್ರಯತ್ನಿಸಿ ನೋಡಬೇಕು. ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹದಲ್ಲಿನ ಕೊಬ್ಬು ಕರಗುವಂತೆ ಮಾಡಿ, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿ ಆಗಿರುವುದು.
ಹೀಗಾಗಿ ಬೇರೆ ರೀತಿಯ ಟೀ, ಕಾಫಿ ಅಥವಾ ಪಾನೀಯಗಳ ಬದಲು ಲಿಂಬೆ ಟೀ ಅಥವಾ ಲೆಮನ್ ಟೀ ಕುಡಿದರೆ ಅದು ಬಾಯಿಗೂ ರುಚಿಕರ ಮತ್ತು ಆರೋಗ್ಯವನ್ನು ಕಾಪಾಡುವ ಜತೆಗೆ ದೇಹದ ತೂಕವನ್ನು ಇಳಿಕೆ ಮಾಡಲು ಸಹಕಾರಿ.
ಇದರಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ ಆಗಿದೆ. ಲಿಂಬೆ ಪಾನೀಯವನ್ನು ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆಗ ಇದು ತೂಕ ಇಳಿಸುವವರಿಗೆ ತುಂಬಾ ಸಹಕಾರಿ ಆಗಿರುವುದು.
ಅದರಲ್ಲೂ ಲೆಮನ್ ಟೀಗೆ ಜೇನುತುಪ್ಪ ಹಾಕಿ ಕುಡಿದರೆ ಅದರಿಂದ ಇನ್ನಷ್ಟು ಹೆಚ್ಚಿನ ಪೋಷಕಾಂಶಗಳು ಸಿಗುವುದು ಮತ್ತು ಇದು ದೇಹಕ್ಕೆ ಮತ್ತಷ್ಟು ಆರೋಗ್ಯ ಲಾಭಗಳನ್ನು ನೀಡುವುದರ ಜೊತೆಗೆ ತೂಕ ಇಳಿಸುವವರಿಗೂ ಒಳ್ಳೆಯದು..
ನಿಂಬೆಹಣ್ಣು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಒಂದು ವರದಾನವಾಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.
ಏಕೆಂದರೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದೆ. ಇದರ ಜೊತೆಗೆ ದೇಹದಲ್ಲಿ ಕರಗುವ ನಾರಿನ ಅಂಶ, ಕೆಲವೊಂದು ಗಿಡಮೂಲಿಕೆ ಅಂಶಗಳು ಎಲ್ಲವೂ ಸೇರಿ ಮನುಷ್ಯನ ದೇಹದ ತೂಕವನ್ನು ಕರಗಿಸುವಲ್ಲಿ ಪ್ರಮುಖಪಾತ್ರ ಬೀರುತ್ತವೆ.
ಅಧ್ಯಯನಗಳು ಹೇಳುವಂತೆ ನಿಂಬೆಹಣ್ಣಿನಲ್ಲಿ ಕಂಡುಬರುವ ನಾರಿನ ಅಂಶಮನುಷ್ಯನ ಹೊಟ್ಟೆ ಹಸಿವನ್ನು ದೂರಮಾಡುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಸೇವನೆ ಮಾಡಿದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುವ ಗುಣವನ್ನು ಹೊಂದಿದೆ. ಬಹಳ ವೇಗವಾಗಿ ದೇಹದ ಕ್ಯಾಲೋರಿಗಳನ್ನು ಕರಗಿಸಿ ದೇಹದಲ್ಲಿನ ಬೊಜ್ಜಿನ ಪ್ರಮಾಣವನ್ನು ತಗ್ಗಿಸುತ್ತದೆ.
ದೇಹದಲ್ಲಿ ಪಿಎಚ್ ಮಟ್ಟವನ್ನು ಸಮತೋಲನದಲ್ಲಿ ಇಡುವಂತಹ ಲೆಮನ್ ಟೀ ತೂಕ ಇಳಿಸಲು ಸಹಕಾರಿ. ಲಿಂಬೆ ರಸ ಮತ್ತು ಅದರ ಸಿಪ್ಪೆಯು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಯಕೃತ್ ಹಾಗೂ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.
ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದೊಂದು ಕಪ್ ಲೆಮನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಆದರೆ ನೀವು ಕುಡಿಯುವ ಲೆಮನ್ ಟೀ ಸಕ್ಕರೆ ರಹಿತವಾಗಿರಬೇಕು. ಏಕೆಂದರೆ ಸಕ್ಕರೆ ಅಂಶ ನಿಮ್ಮ ದೇಹದ ತೂಕವನ್ನು ಮತ್ತಷ್ಟು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.


- Advertisement -

Latest Posts

Don't Miss