Horoscope: ಸಿಂಹ ರಾಶಿಯವರಿಗೆ 2025ನೇ ವರ್ಷ ಹೇಗಿದೆ ಅನ್ನೋ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಾಸ ಗುರೂಜಿ ವಿವರಿಸಿದ್ದಾರೆ.
ಸಿಂಹ ರಾಶಿಯವರಿಗೆ ಈ ವರ್ಷ ಅತ್ಯುತ್ತಮ ಯೋಗಬಲವಿದೆ. ಕಳೆದೆರಡು ವರ್ಷಗಳಿಂದಲೂ ಸಿಂಹ ರಾಶಿಯವರು ಒಂದಲ್ಲ ಒಂದು ಗೊಂದಲಗಳನ್ನು ಅನುಭವಿಸುತ್ತಲೇ ಇದ್ದಾರೆ. ಆದರೆ ಈ ವರ್ಷ ಸಿಂಹ ರಾಶಿಯವರ ಮನೆಯಲ್ಲಿ ಶುಭಕಾರ್ಯ ನಡೆಯುವುದು ಖಂಡಿತ. ಗುರುಗ್ರಹದಿಂದ ಯೋಗ ಬಲವಿದ್ದು, ಉದ್ಯಮ, ಉದ್ಯೋಗದಲ್ಲಿ ಲಾಭ ಬರಲಿದೆ. ಪ್ರಮೋಷನ್ ಸಿಗಲಿದೆ.
ಮನೆಯಲ್ಲಿ ಮದುವೆ, ಮುಂಜಿ, ನಾಮಕರಣಗಳಾಗುತ್ತದೆ. ಮನೆ ಖರೀದಿ, ಸೈಟ್, ವಾಹನ ಖರೀದಿಗೆ ಸುಸಮಯ. ಆದರೆ ಅಷ್ಟಮದಲ್ಲಿ ಶನಿ ಇರುವ ಕಾರಣ, ನಿಮ್ಮ ಸುತ್ತಮುತ್ತಲಿನ ಜನರೇ ನಿಮ್ಮ ಹಿತ ಶತ್ರುಗಳಾಗಿರುತ್ತಾರೆ. ನಿಮ್ಮನ್ನು ಕಂಡರೆ ಅಸೂಯೆ ಪಡುತ್ತಾರೆ. ಬಂಧು ಬಾಂಧವರೇ, ನಿಮ್ಮ ಏಳಿಗೆ ಸಹಿಸುವುದಿಲ್ಲ. ಹೊಟ್ಟೆ ಉರಿ ಪಟ್ಟು, ನಿಮ್ಮ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಾರೆ.
ಅಂಥವರ ಬಗ್ಗೆ ಹೆಚ್ಚು ಗಮನ ಕೊಡದೇ, ಹೆಚ್ಚು ಚಿಂತಿಸದೇ, ನಿಮ್ಮ ಕೆಲಸ ನೀವು ಮಾಡುತ್ತ ಹೋಗಬೇಕು. ಆಗ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ. ಅಲ್ಲದೇ ನಿಮ್ಮ ಬಗ್ಗೆ ಕೊಂಕು ಮಾತು, ಚುಚ್ಚು ಮಾತುಗಳಿಗೆ ಯಾವುದೇ ಕಾರಣಕ್ಕೂ ಉತ್ತರಿಸಬೇಡಿ. ನೀವು ತಾಳ್ಮೆ ವಹಿಸಿದಷ್ಟು, ನಿಮಗೆ ಧನಭಾಗ್ಯ ಗ್ಯಾರಂಟಿ.
ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324