Life Lesson: ಈ ಬೇಸಿಕ್ ಮ್ಯಾನರ್ಸ್ ನಿಮ್ಮಲ್ಲಿದ್ದರೆ ನೀವು ಪ್ರಬುದ್ಧರೆಂದು ಅರ್ಥ- ಭಾಗ 2

Life Lesson: ಭಾಗ 1ರಲ್ಲಿ ನಾವು 6 ಬೇಸಿಕ್ ಮ್ಯಾನರ್ಸ್ ಬಗ್ಗೆ ಹೇಳಿದ್ದೆವು. ಇದೀಗ ಇನ್ನುಳಿದ 5 ಬೇಸಿಕ್ ಮ್ಯಾನರ್ಸ್ ಬಗ್ಗೆ ತಿಳಿಯೋಣ.

  1. ಸ್ವೈಪ್ ಮಾಡಬೇಡಿ: ಯಾರಾದರೂ ನಿಮಗೆ ಯಾವುದಾದರೂ, ಫೋಟೋ, ವೀಡಿಯೋ ನೋಡೋಕ್ಕೆ ನೀಡಿದರೆ, ಅದನ್ನು ಸ್ವೈಪ್ ಮಾಡಬೇಡಿ.
  2. ಪರ್ಮಿಷನ್ ಇಲ್ಲದೇ ಬೇರೆಯವರ ವಸ್ತು ಬಳಸಬೇಡಿ: ನೀವು ಪಿಜಿಯಲ್ಲಿದ್ದಾಗ, ಹಾಸ್ಟೇಲ್‌ನಲ್ಲಿದ್ದಾಗ, ಅಥವಾ ಯಾರದ್‌ದಾದರೂ ಮನೆಗೆ ಹೋದಾಗ, ಅಲ್ಲಿ ಬೇರೆಯವರ ಪರ್ಮಿಷನ್ ಇಲ್ಲದೇ, ಅವರ ವಸ್ತುಗಳನ್ನು ಮುಟ್ಟಬೇಡಿ, ಬಳಸಬೇಡಿ.
  3. ಸಾರ್ವಜನಿಕವಾಗಿ ಯಾರನ್ನೂ ಅವಮಾನಿಸಬೇಡಿ: ನೀವು ಸಂಬಂಧಿಕರು, ಸ್ನೇಹಿತರು ಅಥವಾ ಅಪರಿಚಿತರು ಯಾರೇ ಆಗಲಿ ಸಾರ್ವಜನಿಕವಾಗಿ ಯಾರನ್ನೂ ಅವಮಾನಿಸಬೇಡಿ. ನಿಮ್ಮ ವಿಷಯದಲ್ಲಿ ಬೇರೆಯವರು ತಪ್ಪು ಮಾಡಿದ್ದರೆ, ಅವರನ್ನು ಬದಿಗೆ ಕರೆದು, ಯಾರಿಗೂ ಕೇಳದಂತೆ ಮಾತನಾಡಿ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಯಾರನ್ನೂ ನಿಂದಿಸಬೇಡಿ.
  4. ಯಾರನ್ನೂ ಗುರಾಯಿಸಬೇಡಿ: ನೀವು ಬಸ್‌ನಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳ, ವಾಹನದಲ್ಲಿ ಹೋಗುವಾಗ, ಅಲ್ಲಿ ಯಾರಾದರೂ ಸುಂದರವಾಗಿರುವವರು ಅಥವಾ ಏನೋ ಡಿಫ್ರೆಂಟ್ ಆಗಿರುವವರು ನಿಮಗೆ ಸಿಗಬಹದು. ಆಗ ನೀವು ಅವರನ್ನು ತುಂಬ ಸಮಯ ನೋಡುವುದು, ಗುರಾಯಿಸುವುದೆಲ್ಲ ಮಾಡಬಾರದು.
  5. ರೂಮ್ ಪ್ರವೇಶಿಸುವ ಮುನ್ನ ನಾಕ್ ಮಾಡಿ: ನೀವು ಯಾರದ್ದಾದರೂ ರೂಮ್ ಪ್ರವೇಶಿಸುವ ಮುನ್ನ ನಾಕ್ ಮಾಡಿ, ಬರಬಹುದಾ ಎಂದು ಪರ್ಮಿಶನ್ ಕೇಳಬೇಕು.

About The Author