Spiritual: ಕೆಲವರು ಉತ್ತಮ ಸಂಬಳ ಪಡೆಯುತ್ತಾರೆ. ಆದರೆ ಹಣ ಉಳಿಯುತ್ತಲೇ ಇಲ್ಲ. ಸ್ವಲ್ಪ ಹಣ ಉಳಿಸಿದ್ದೇನೆ ಅಂತಾ ಎಣಿಸುವಾಗಲೇ, ಖರ್ಚಿಗೆ 1 ದಾರಿ ಸಿಗುತ್ತದೆ ಎಂದು ದೂರುವುದನ್ನು ನೀವು ಕೇಳಿರುತ್ತೀರಿ. ಆದರೆ ಅವರು ಅವರಿಗೇ ತಿಳಿಯದಂತೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹಾಗಾದ್ರೆ ಅವರು ಮಾಡುವ ತಪ್ಪುಗಳಾದರೂ ಏನು ಅಂತಾ ತಿಳಿಯೋಣ ಬನ್ನಿ.
ಮನೆಯನ್ನು ಸ್ವಚ್ಛ ಮಾಡದೇ ಇರುವುದು: ಬ್ಯುಸಿ ಇರುವ ಕಾರಣಕ್ಕೆ ಕೆಲವರು ಮನೆ ಗುಡಿಸದೇ, ವರೆಸದೇ, ಹಾಗೆ ಗಲೀಜು ಮಾಡಿ, ಕೆಲಸಕ್ಕೆ ಹೋಗುತ್ತಾರೆ. ಬಂದ ಮೇಲೆ ಸುಸ್ತು ಎಂದು ಹೇಳಿ, ಉಂಡು ಮಲಗುತ್ತಾರೆ. ಹಾಗೆ ಗಲೀಜಾಗಿರುವ ಮನೆಯಲ್ಲಿ ನೀವು ಆಹಾರ ಸೇವಿಸಿ, ನಿದ್ರಿಸಿದರೆ, ನಿಮ್ಮ ಆರೋಗ್ಯವೇ ಹಾಳಾಗುತ್ತದೆ. ಆರೋಗ್ಯ ಸರಿ ಇಲ್ಲದಿದ್ದರೆ, ನೀವು ದುಡಿಯಲು ಹೇಗೆ ಸಾಧ್ಯ..? ನೆಮ್ಮದಿಯಿಂದಿರಲು ಹೇಗೆ ಸಾಧ್ಯ..? ಹಾಗಾಗಿ ಮನೆ ಸ್ವಚ್ಛವಾಗಿರಿಸಬೇಕು.
ಮುಸ್ಸಂಜೆ ಬಳಿಕ ಈ ಕೆಲಸ ಮಾಡುವುದು: ಮುಸ್ಸಂಜೆ ಬಳಿಕ ಉಗುರು ತೆಗೆಯುವುದು, ಕಸ ಗುಡಿಸುವುದು, ಸುಸ್ತಾಯಿತೆಂದು ಮಲಗುವುದು, ತಲೆ ಸ್ನಾನ ಮಾಡುವುದು, ದೀಪ ಇಡುವ ಸಮಯದಲ್ಲಿ ಜಗಳವಾಡುವುದು, ಇತರರನ್ನು ಬಯ್ಯುವುದು, ಇದೆಲ್ಲ ಮಾಡಿದರೆ, ನೀವು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ.
ಸೂರ್ಯೋದಯದ ಬಳಿಕ ಈ ಕೆಲಸ ಮಾಡುವುದು: ಸೂರ್ಯೋದಯವಾದ ಮೇಲೂ ನೀವು ನಿದ್ರಿಸುತ್ತಿದ್ದರೆ, ಆಲಸ್ಯ ಅನ್ನೋದು ನಿಮ್ಮ ಪಾಲಾಗುತ್ತದೆ. ಅದೇ ಆಲಸ್ಯ ಇಡೀ ದಿನ ಇರುತ್ತದೆ. ಹಾಗಾಗಿ ನಿಮಗೆ ಕೆಲಸ ಮಾಡುವ ಮನಸ್ಸಾಗುವುದಿಲ್ಲ.
ಪ್ರಾಣಿ ಪ್ರೀತಿ ಇಲ್ಲದೇ ಇರುವುದು: ಪ್ರಾಣಿಗಳನ್ನು ಪ್ರೀತಿಸುವುದು, ಪೋಷಿಸುವುದು ಕೂಡ ಪುಣ್ಯದ ಕೆಲಸ. ಅವುಗಳಿಗೆ ಆಹಾರ, ನೀರು ನೀಡುವುದು, ಪ್ರಾಣಿಗಳ ಮೇಲೆ ದಯೆ ತೋರಿಸುವುದರಿಂದಲೂ ಜೀವನದಲ್ಲಿ ನಾವು ನೆಮ್ಮದಿ, ಖುಷಿ, ಯಶಸ್ಸು ಕಾಣಬಹುದು.
ಹಿರಿಯರ ಮೇಲೆ ಗೌರವ, ಮಕ್ಕಳ ಮೇಲೆ ಪ್ರೀತಿ ಇಲ್ಲದಿರುವುದು: ನಾವು ಹಿರಿಯರನ್ನು ಗೌರವಿಸುವುದರಿಂದ, ಮಕ್ಕಳ ಬಗ್ಗೆ ಪ್ರೀತಿ, ಕಾಳಜಿ ಮಾಡುವುದರಿಂದಲೂ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಕ್ಕಾಗ, ನಾವು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇವೆ. ಅದೇ ರೀತಿ ಕಿರಿಯರನ್ನು ಪ್ರೀತಿಸದೇ, ಹಿರಿಯರನ್ನು ಗೌರವಿಸದೇ ಇದ್ದಾಗ, ಮನಸ್ಸಿಗೂ ಕಿರಿ ಕಿರಿಯಾಗುತ್ತದೆ.




